ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರೋತ್ಸವ ಸಂಭ್ರಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್ 04: ದಕ್ಷಿಣ ಭಾರತದ ಪ್ರಮುಖ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಜಾತ್ರೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕಾರ್ತಿಕ ಬಹುಳ ದ್ವಾದಶಿಯಂದು ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೆ ಆರಂಭವಾಗಲಿದೆ.

ದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆದಕ್ಷಿಣಕಾಶಿ ನಂಜನಗೂಡಿನಲ್ಲಿ ಸಂಭ್ರಮದಿಂದ ನಡೆದ ಚಿಕ್ಕ ಜಾತ್ರೆ

ಜಾತ್ರೆ ಆರಂಭದ ಮುನ್ನ ದಿನ ಅಂದರೆ ಕಾರ್ತಿಕ ಬಹುಳ ಏಕಾದಶಿಯ ಸೋಮವಾರ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಮಹಾ ಪ್ರಸಾದ ಮೂಲಮೃತ್ತಿಕೆಯನ್ನು ತೆಗೆಯಲಾಯಿತು.

Varshika jatre will start from today in Kukke Subramanya

ಮೂಲ ಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭ ಗುಡಿಯಿಂದ ತೆಗೆಯುವ ಹುತ್ತದ ಮಣ್ಣನ್ನು ಮೂಲ ಮೃತ್ತಿಕೆ ಎಂದು ಕರೆಯಲಾಗುತ್ತದೆ. ಈ ಮೃತ್ತಿಕೆ ನಾಗನ ಅತ್ಯಂತ ಪವಿತ್ರ ಮಹಾ ಪ್ರಸಾದ ಎಂಬ ನಂಬಿಕೆ ಕುಕ್ಕೆಯ ಭಕ್ತರದು. ಮೂಲ ಮೃತ್ತಿಕೆಯನ್ನು ವರ್ಷದಲ್ಲಿ ಒಂದು ಬಾರಿ ಮಾತ್ರ ತೆಗೆಯಲಾಗುವುದು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತಿಕೆ ಸಂಭ್ರಮ, ಹರಿದು ಬಂದ ಜನಸಾಗರಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತಿಕೆ ಸಂಭ್ರಮ, ಹರಿದು ಬಂದ ಜನಸಾಗರ

ಕ್ಷೇತ್ರದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಡಿಸೆಂಬರ್ 03 ರಂದು ಸೋಮವಾರ ಮುಂಜಾನೆ ಗರ್ಭ ಗುಡಿಯಿಂದ ಮೂಲ ಮೃತ್ತಿಕೆಯನ್ನು ತೆಗೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು.

ಕಾಫಿನಾಡಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆಕಾಫಿನಾಡಲ್ಲಿ ಭಕ್ತರ ಇಷ್ಟಾರ್ಥ ನೆರವೇರಿಸುವ ದೇವಿರಮ್ಮನ ಜಾತ್ರೆಗೆ ಕ್ಷಣಗಣನೆ

Varshika jatre will start from today in Kukke Subramanya

ಈ ಮೃತ್ತಿಕೆ ಪ್ರಸಾದ ರೋಗ ನಿರೋಧಕ, ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

English summary
Varshika jatre will start from today in Kukke Subramanya . As part of this, thousands of devotees visit the temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X