ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ರಾಹುಲ್ ಗಾಂಧಿ ಅಂದೇ ಹೇಳಿದ್ದರು: ಯುಟಿ ಖಾದರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 19: ರೈತರ ಭಾರೀ ಪ್ರತಿಭಟನೆ ಬಳಿಕ ಕೇಂದ್ರ ಸರ್ಕಾರ ರೈತ ತಿದ್ದುಪಡಿ ಕಾಯಿದೆಯನ್ನು ಹಿಂಪಡೆದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿದೆ.

ಮಂಗಳೂರಿನ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದ್ದು, ಮಾಜಿ ಸಚಿವ ಬಿ. ರಮಾನಾಥ್ ರೈ, ಶಾಸಕ ಯು‌.ಟಿ. ಖಾದರ್ ಸೇರಿ ಕಾಂಗ್ರೆಸ್ ‌ನಾಯಕರು ಭಾಗಿಯಾಗಿದ್ದಾರೆ. ಹುತಾತ್ಮ ರೈತರಿಗೆ ಜಯವಾಗಲಿ ಅಂತ ಘೋಷಣೆ ಕೂಗಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕಾಂಗ್ರೆಸ್ ಸಂಭ್ರಮಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯುಟಿ ಖಾದರ್, ರೈತರ ಹೋರಾಟದ ಜಯವನ್ನು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಎಂದು ಬಣ್ಣಿಸಿದ್ದಾರೆ.

Mangaluru: UT Khader Says Rahul Gandhi Predicted About Central Govt to Withdraw Farm Laws Long Back

ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನು ಹಿಂದೆ ಪಡೆದಿದೆ. ಕಾಂಗ್ರೆಸ್ ಜಾರಿಗೆ ತಂದಿದ್ದ ಹಿಂದಿನ ರೈತ ಕಾನೂನು ಯಥಾಸ್ಥಿತಿಗೆ ಬಂದಿದೆ. ರೈತ ವಿರೋಧಿ ಕಾನೂನನ್ನು ವಿರೋಧಿಸಿ ದೇಶ ಒಂದಾಗಿತ್ತು. ಒಂದು ವರ್ಷ ಎರಡು ತಿಂಗಳು ರೈತರು ಹೋರಾಟ ಮಾಡಿದ್ದರು. ಈಗ ರೈತರ ಹೋರಾಟಕ್ಕೆ ಮಣಿದು ಸರ್ಕಾರ ಕಾಯಿದೆಯನ್ನು ಹಿಂಪಡೆದಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಸ್ವಾಗತ ಮಾಡುತ್ತದೆ ಎಂದು ಯುಟಿ ಖಾದರ್ ಹೇಳಿದ್ದಾರೆ.

ರೈತರ ಐತಿಹಾಸಿಕ ಹೋರಾಟವನ್ನು ಇತಿಹಾಸದ ಪುಸ್ತಕದಲ್ಲಿ ಬರೆದಿಡಬೇಕಾಗಿದೆ. ರೈತರಿಗೆ ಖಲಿಸ್ತಾನದ ಬೆಂಬಲ, ವಿದೇಶಿಗರ ಷಡ್ಯಂತ್ರ ಎಂದು ಆರೋಪ ಮಾಡಿದ್ದರು. ಆದರೆ ಈ ಅಪಮಾನವನ್ನು ರೈತರು ಎದುರಿಸಿದ್ದಾರೆ. ಎಲ್ಲಾ ಹೋರಾಟದ ಬಳಿಕ ರೈತರಿಗೆ ಜಯವಾಗಿದೆ. ಇದು ಭಾರತ ದೇಶದ ಪ್ರಜಾಪ್ರಭುತ್ವದ ಸೌಂದರ್ಯ. ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಶಕ್ತಿ ಅಂತಾ ಖಾದರ್ ಬಣ್ಣಿಸಿದ್ದಾರೆ.

ಈ ಕಾಯಿದೆಯನ್ನು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮೊದಲೇ ವಿರೋಧಿಸಿದ್ದರು. ಕೇಂದ್ರ ಸರ್ಕಾರ ಈ ಕಾಯಿದೆಯನ್ನು ಪಡೆದುಕೊಳ್ಳುತ್ತದೆ ಅಂತಾ ಮೊದಲೇ ಹೇಳಿದ್ದರು. ಭಾರತದಲ್ಲಿ ಯಾವುದೇ ಸರ್ವಾಧಿಕಾರಿ ಧೋರಣೆ ನಡೆಯುವುದಿಲ್ಲ. ಈ ಪ್ರತಿಭಟನೆ ವೇಳೆ ಹಲವು ರೈತರನ್ನು ಕೊಲ್ಲಲಾಗಿದೆ. ಹಲವು ರೈತರು ಮಳೆ- ಚಳಿಗೆ ತೀರಿ ಹೋಗಿದ್ದಾರೆ. ಮೃತ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಟೀಕೆ ಮಾಡಿದ ಬಿಜೆಪಿ ನಾಯಕರು ಕ್ಷಮೆ ಕೇಳಬೇಕು ಅಂತಾ ಯುಟಿ ಖಾದರ್ ಆಗ್ರಹಿಸಿದ್ದಾರೆ.

Mangaluru: UT Khader Says Rahul Gandhi Predicted About Central Govt to Withdraw Farm Laws Long Back

ಜನಾಂದೋಲನದ ಮುಂದೆ ಯಾವ ಸರ್ವಾಧಿಕಾರ ಸಾಧ್ಯವಿಲ್ಲ
ಭಾರತದಲ್ಲಿ ಜನಾಂದೋಲನದ ಮುಂದೆ ಯಾವ ಸರ್ವಾಧಿಕಾರವೂ ಸಾಧ್ಯವಿಲ್ಲ. ಭವಿಷ್ಯದಲ್ಲಿ ರೈತರ ಹೋರಾಟ ಮಾರ್ಗವಾಗಲಿದೆ. ಬ್ರಿಟಿಷರನ್ನು ಓಡಿಸಿದ ಕೀರ್ತಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬಂದಿತ್ತೋ, ಈಗ ಸರ್ವಾಧಿಕಾರವನ್ನು ಮಣಿಸಿದ ಶ್ರೇಯಸ್ಸು ರೈತರಿಗೆ ಸಲ್ಲಬೇಕು ಅಂತಾ ಖಾದರ್ ಹೇಳಿದ್ದಾರೆ.

ದೇಶದಲ್ಲಿ ಖಾಸಗೀಕರಣ ಮೂಲಕ ಜನರ ಉದ್ಯೋಗ ಕಸಿಯುತ್ತಿದ್ದಾರೆ. ಭಾರತದ ಸಂಪತ್ತನ್ನು ಕೆಲವೇ ಕೆಲವು ವ್ಯಕ್ತಿಗಳಿಗೆ ಮಾರುತ್ತಿದ್ದಾರೆ. ಜನಾಂದೋಲನದಿಂದ ಬೆಲೆ ಏರಿಕೆ ಗ್ಯಾಸ್ ಏರಿಕೆ ಇಳಿಸಬಹುದು. ಬಿಜೆಪಿ ದೃಷ್ಟಿಯಲ್ಲಿ ಇರುವುದು ಚುನಾವಣೆ ಮಾತ್ರ. ಉತ್ತರಪ್ರದೇಶ, ಪಂಜಾಬ್‌ನಲ್ಲಿ ಸೋಲುವ ಭಯದಿಂದ ತೈಲ ದರ ಕಡಿಮೆಯಾಗಿದೆ‌. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ರೈತರು ಎಲ್ಲಾ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಅಭಿಪ್ರಾಯಪಟ್ಟರು.

ರೈತ ಹೋರಾಟಕ್ಕೆ ಮಣಿದು ಮತ್ತು ಚುನಾವಣೆಯಲ್ಲಿ ಸೋಲಿನ ಭಯದಿಂದ ಮಸೂದೆ ಹಿಂಪಡೆದಿದ್ದಾರೆ. ಒಂದು ವರ್ಷ ಎರಡು ತಿಂಗಳಿನಲ್ಲಿ ಈ ಕಾನೂನಿನಿಂದ ಎಷ್ಟು ಶ್ರೀಮಂತರು ಲಾಭ ಪಡೆದಿದ್ದಾರೆ ಎಂಬುವುದರ ಬಗ್ಗೆ ಸರ್ಕಾರ ಬಹಿರಂಗಪಡಿಸಬೇಕು. ರೈತರಲ್ಲದವರು ಎಷ್ಟು ಸಾವಿರ ಎಕರೆ ಭೂಮಿಯನ್ನು ರೈತರಿಂದ ಖರೀದಿ ಮಾಡಿದ್ದಾರೆ. ನಾಲ್ಕೈದು ಜನರಿಗೋಸ್ಕರ ರೈತರನ್ನು ಯಾಕೆ ಸತಾಯಿಸಿದ್ದೀರಿ ಎಂದು ಯುಟಿ ಖಾದರ್ ಪ್ರಶ್ನಿಸಿದ್ದಾರೆ.

English summary
Mangaluru: Former Minister UT Khader says Rahul Gandhi Predicted about Central Govt to withdraw New 3 Agriculture Laws long back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X