• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಹ್ರೇನ್ ಆಕ್ಸಿಜನ್ ಕ್ರೆಡಿಟ್ ವಾರ್; ಬಿಜೆಪಿ ನಾಯಕರ ವ್ಯಂಗ್ಯವಾಡಿದ ಯು.ಟಿ ಖಾದರ್

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಮೇ 6: ಬಹ್ರೇನ್‌ನಿಂದ ಮಂಗಳೂರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್‌ನ ಸಂಪೂರ್ಣ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕೆಂಬ ಬಿಜೆಪಿಗರ ವಾದಕ್ಕೆ ಮಾಜಿ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಕುಹುಕವಾಡಿರುವ ಯು.ಟಿ ಖಾದರ್, "ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಬಳಸಲು ನಮಗೆ ಅವಕಾಶವಿಲ್ಲ. ದೂರದ ಬಹ್ರೇನ್‌ನಿಂದ ಬಂದ ಆಕ್ಸಿಜನ್ ಹಡಗೇರಿ ಖುಷಿಪಡುವ ಬಿಜೆಪಿ ನಾಯಕರ ಆತ್ಮನಿರ್ಭರತೆಗೆ ಚಪ್ಪಾಳೆ ಹೊಡೆಯಬೇಕೋ, ದೀಪ ಹಚ್ಚಬೇಕೋ ತಿಳಿಯುತ್ತಿಲ್ಲ. ಧಿಕ್ಕಾರವಿದೆ ನಿಮ್ಮ ಅಸಮರ್ಥತೆಗೆ' ಅಂತಾ ಆಕ್ಸಿಜನ್ ಟ್ಯಾಂಕ್ ಎದುರು ನಿಂತ ಬಿಜೆಪಿ ನಾಯಕರ ಫೋಟೋ ಹಾಕಿ ವ್ಯಂಗ್ಯವಾಡಿದ್ದಾರೆ.

ಬಹ್ರೇನ್‌ನಿಂದ ಮಂಗಳೂರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್ಬಹ್ರೇನ್‌ನಿಂದ ಮಂಗಳೂರಿಗೆ ಬಂದ 40 ಮೆಟ್ರಿಕ್ ಟನ್ ಆಕ್ಸಿಜನ್

ನಿನ್ನೆ ಬಹ್ರೇನ್ ಮತ್ತು ಭಾರತ ಸರ್ಕಾರದ ಒಪ್ಪಂದದಂತೆ 30 ಮೆಟ್ರಿಕ್ ಟನ್‌ನ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್‌ಗಳು ನವಮಂಗಳೂರು ಬಂದರಿಗೆ ಬಂದಿತ್ತು. ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಐಎನ್ಎಸ್ ತಲ್ವಾರ್ ಆಕ್ಸಿಜನ್ ಟ್ಯಾಂಕರ್ ಗಳನ್ನು ಬಹ್ರೇನ್‌ನಿಂದ ತಂದಿದ್ದು, ಕ್ರೇನ್ ಮೂಲಕ ಟ್ಯಾಂಕರ್ ಗಳನ್ನು ಕೆಳಗಿಳಿಸಲಾಗಿತ್ತು.

ನೌಕೆಯಲ್ಲಿ ಕೊವೀಡ್ ಚಿಕಿತ್ಸಗೆ ಬಳಸುವ ಇತರ ವೈದ್ಯಕೀಯ ಉಪಕರಣಗಳನ್ನೂ ಹೊಂದಿದ್ದು, ಯುದ್ಧ ನೌಕೆಯನ್ನು ಸ್ವಾಗತ ಮಾಡಲು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.

ಈ ವೇಳೆ ನಾಯಕರು ಇದು ಪ್ರಧಾನಿ ಮೋದಿಯವರ ನಾಯಕತ್ವದ ಪರಿಣಾಮವಾಗಿ ಬಹ್ರೇನ್ ಆಕ್ಸಿಜನ್ ನೀಡಿದೆ ಎಂಬ ಹೇಳಿಕೆ ನೀಡಿದ್ದರು.

English summary
Former minister UT Khadar has Mocks BJP Leaders For Given Credit To Prime Minister Narendra Modi For Bringing 40 metric tonnes of oxygen from Bahrain to Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X