ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್: ಪಡೆದಿದ್ದು ತುರ್ತು ಸೇವೆ ಪಾಸ್, ಆದರೆ ಮಾಡಿದ್ದೇನು ಗೊತ್ತಾ?

|
Google Oneindia Kannada News

ಮಂಗಳೂರು, ಜು. 20: ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಲಾಕ್‌ಡೌನ್ ಮಾರ್ಗಸೂಚಿಗಳು ಜಾರಿಯಲ್ಲಿವೆ. ಆದರೆ ಅಗತ್ಯ ವಸ್ತುಗಳ ಸಾಗಣೆಗೆ ತೊಂದರೆ ಆಗಬಾರದು ಎಂದು ಸರ್ಕಾರ ತುರ್ತು ಹಾಗೂ ಅಗತ್ಯ ಸೇವೆಗಳನ್ನು ಒದಗಿಸಲು ಪಾಸ್ ಕೊಟ್ಟಿದೆ. ಔಷಧ, ಗ್ಯಾಸ್ ಸಿಲಿಂಡರ್, ಪಡಿತರ, ತರಕಾರಿ ಸೇರಿದಂತೆ ಹಲವು ವಸ್ತುಗಳ ಸಾಗಣೆ ಮಾಡುವ ವಾಹನಗಳಿಗೆ ಶರತ್ತುಬದ್ಧ ಪಾಸ್ ಕೊಡಲಾಗುತ್ತಿದೆ.

Recommended Video

Drone Prathap ಜೀವನಾಧಾರಿತ ಸಿನಿಮಾ ಎಲ್ಲಿಗೆ ಬಂತು ? | Oneindia Kannada

ತುರ್ತು ಪಾಸ್ ಪಡೆದು ಕಾನೂನು ಬಾಹೀರ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಗಾಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಸುರ್ಯ ಪಡ್ಪು ಬಳಿ ನಡೆದಿದೆ. ಪಾಸ್‌ಗಳು ದುರುಪಯೋಗವಾಗುತ್ತಿವೆ ಎಂಬ ದೂರುಗಳ ಬೆನ್ನಲ್ಲೆ ಈ ಘಟನೆ ನಡೆದಿದೆ.

ಕೋವಿಡ್: ಜನರ ಆರೋಗ್ಯ ತಪಾಸಣೆಗೆ ಕಾಂಗ್ರೆಸ್ ತಂಡ ಕೋವಿಡ್: ಜನರ ಆರೋಗ್ಯ ತಪಾಸಣೆಗೆ ಕಾಂಗ್ರೆಸ್ ತಂಡ

ಅಕ್ರಮ ಗೋ ಸಾಗಣೆ

ಅಕ್ರಮ ಗೋ ಸಾಗಣೆ

ಗೋವುಗಳ ವ್ಯಾಪಾರಿಯಾಗಿರುವ ಆಟೋ ಚಾಲಕ ರಾಜೇಶ್ ಎಂಬವರ ಮನೆಯಿಂದ ಪಿಕಪ್ ವಾಹನದಲ್ಲಿ ಮೂರು ದನ, ಎರಡು ಕರುಗಳನ್ನು ಕಟ್ಟಿಹಾಕಿ ಸಾಗಿಸಲಾಗುತ್ತಿತ್ತು. ಇದನ್ನು ಬೆಳ್ತಂಗಡಿಯ ಸುರ್ಯ ಪಡ್ಪು ಬಳಿ ತಡೆಯಲು ಹೋಗಿದ್ದ ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯ ಬಳಿಕವೂ ಗಾಡಿ ಹಾಗೂ ದನಗಳನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಸಫಲರಾಗಿದ್ದಾರೆ.

ತುರ್ತು ಪಾಸ್

ತುರ್ತು ಪಾಸ್

ನಂತರ ಪಿಕಪ್ ವಾಹನಕ್ಕೆ ಬೆಂಗಾವಲಿನಂತೆ ಹಿಂಬಾಲಿಸುತ್ತಿದ್ದ ರಾಜೇಶ್ ಹಾಗೂ ಸಹಚರರನ್ನು ಗುರುವಾಯನಕೆರೆ ಬಳಿ ತಡೆಯಲು ಹೋಗಿದ್ದ ಇಬ್ಬರು ಬಜರಂಗದಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿ ಮಾಡಿ ಪರಾರಿಯಾಗಿದ್ದಾರೆ. ವಿಪರ್ಯಾಸ ಎಂದರೆ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ತುರ್ತು ಸೇವೆಗಳ ಪಾಸ್ ಪಡೆಯಲಾಗಿತ್ತು.

ನಂಬಿಕೆ: ಕೊರೊನಾವೈರಸ್‌ಗೆ ರಾಮಬಾಣ ಹಾಲೆ ಮರದ ರಸ!ನಂಬಿಕೆ: ಕೊರೊನಾವೈರಸ್‌ಗೆ ರಾಮಬಾಣ ಹಾಲೆ ಮರದ ರಸ!

ಆಸ್ಪತ್ರೆಗೆ ದಾಖಲು

ಆಸ್ಪತ್ರೆಗೆ ದಾಖಲು

ಗಾಯಾಳು ಬಜರಂಗದಳ ಕಾರ್ಯಕರ್ತರಾದ ಗುರು ಮತ್ತು ನಿತೀಶ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ವೇಳೆ ಇಬ್ಬರು ಬಜರಂಗ ದಳ ಕಾರ್ಯಕರ್ತರ ಎರಡು ಮೊಬೈಲ್, ನಗದು ದರೋಡೆ ಮಾಡಿದ್ದಾರೆ ಎನ್ನಲಾಗಿದೆ.

ಗೋಗಳ್ಳರ ಜಾಲ

ಗೋಗಳ್ಳರ ಜಾಲ

ಪಿಕಪ್ ವಾಹನ ಮಂಗಳೂರಿನ ಕರೀಂ ಎಂಬವರಿಗೆ ಸೇರಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ ಪಾಸ್ ಪಡೆದು, ಗ್ರಾಮೀಣ ಭಾಗಗಳಿಂದ ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎಂದು ಮಾಹಿತಿ ಲಭಿಸಿದೆ. ಈ ಗೋ ಕಳ್ಳತನದ ದೊಡ್ಡ ಜಾಲವೇ ಜಿಲ್ಲೆಯಾದ್ಯಂತ ಹಬ್ಬಿದೆ ಎಂಬ ಶಂಕೆ ವ್ಯಕ್ತವಾಗಿದೆ.

English summary
Using An emergency services pass for a pickup vehicle carrying the cattle to the slaughterhouse in Mangaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X