ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ್ಪಿನಂಗಡಿಯ ಸ್ವಾತಿಗೆ ವಿಜ್ಞಾನ ಕ್ಷೇತ್ರದತ್ತ ಆಸಕ್ತಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಮೇ 13 : ಉಪ್ಪಿನಂಗಡಿ ಎಂಬ ಪುಟ್ಟ ಪಟ್ಟಣದ ಸ್ವಾತಿ ಕೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. 625ಕ್ಕೆ 622 ಅಂಕಗಳನ್ನು ಪಡೆದಿರುವ ಸ್ವಾತಿ ಮುಂದೆ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಗುರಿಯನ್ನು ಹೊಂದಿದ್ದಾಳೆ.

ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯ ವಿದ್ಯಾರ್ಥಿನಿ ಸ್ವಾತಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಚಿದಾನಂದ ಜಿ.ಶಾಸ್ತ್ರಿ ಮತ್ತು ಶಾಲಿನಿ ದಂಪತಿಯ ಪುತ್ರಿ. ಸ್ವಾತಿ ತಂದೆ ಕೃಷಿಕರಾಗಿದ್ದು, ಕುಟುಂಬ ನಿರ್ವಹಣೆಗೆ ಸಾಕಾಗುಷ್ಟು ಜಮೀನಿದೆ. [ಫಲಿತಾಂಶ, ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ]

Uppinangady Swathi

ಫಲಿತಾಂಶದ ನಂತರ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಸ್ವಾತಿ, 'ಆಯಾ ದಿನದ ಪಾಠವನ್ನು ಅಂದೇ ಓದುತ್ತಿದ್ದೆ. ನನ್ನ ಈ ಸಾಧನೆಗೆ ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನವೇ ಕಾರಣ' ಎಂದು ಹೇಳಿದ್ದಾಳೆ. [ದಿಶಾ ಹೆಗಡೆಗೆ ಸಂಶೋಧನೆ ಮಾಡುವ ಕನಸು]

ಸ್ವಾತಿ ಪಡೆದ ಅಂಕಗಳು : ಸ್ವಾತಿ ಕನ್ನಡದಲ್ಲಿ 124, ಇಂಗ್ಲಿಷ್‌ನಲ್ಲಿ 98, ಹಿಂದಿಯಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದು 625ಕ್ಕೆ 622 ಅಂಕಗಳನ್ನು ಗಳಿಸಿದ್ದಾಳೆ.[ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]

ಪರೀಕ್ಷೆ ತುಂಬಾ ಸುಲಭವಿತ್ತು : 'ಫಲಿತಾಂಶ ಪ್ರಕಟಗೊಂಡ ನಂತರ ಬಹಳ ಸಂತಸವಾಗುತ್ತಿದೆ. ಪರೀಕ್ಷೆ ತುಂಬಾ ಸುಲಭವಿತ್ತು. ಆಯಾ ದಿನದ ಪಾಠವನ್ನು ಅಂದೇ ಓದಿಕೊಳ್ಳುತ್ತಿದ್ದೆ. ಇದರಿಂದಲೇ ಇಷ್ಟು ಅಂಕಗಳು ಬರಲು ಸಾಧ್ಯವಾಯಿತು' ಎಂದು ಸ್ವಾತಿ ಸಂತಸ ಹಂಚಿಕೊಡಿದ್ದಾಳೆ.

ಸೈನ್ಸ್ ತೆಗೆದುಕೊಳ್ಳುತ್ತೇನೆ : ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸೇರುವುದು ಮತ್ತು ಅಲ್ಲಿ ಸೈನ್ಸ್‌ ತೆಗೆದುಕೊಳ್ಳುವುವುದ ಸ್ವಾತಿ ಗುರಿ.

ಸ್ವಾತಿ ಸಂಗೀತ ಪ್ರವೀಣೆ : ಸ್ವಾತಿಗೆ ಓದಿನ ಜೊತೆಗೆ ಡ್ರಾಯಿಂಗ್ ಮತ್ತು ಸಂಗೀತದಲ್ಲಿಯೂ ಹೆಚ್ಚಿನ ಆಸಕ್ತಿ ಇದೆ. ಈಗಾಗಲೇ ಸಂಗೀತದಲ್ಲಿ ಜೂನಿಯರ್ ತೇರ್ಗಡೆಯಾಗಿ ಸೀನಿಯರ್ ಅಧ್ಯಯನ ಮುಗಿಸಿದ್ದಾಳೆ.

English summary
Mangaluru : Karnataka SSLC examination 2015 results announced on Tuesday, May 12. Uppinangady Indraprastha Vidyalaya student Swathi K bagged 2nd rank with 622 marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X