• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು; ಸಮೋಸ ತಿನ್ನಲು ಬಂದವರಿಂದ ಗುಂಡಿನ ದಾಳಿ

|

ಮಂಗಳೂರು, ಅಕ್ಟೋಬರ್ 30: ಮಂಗಳೂರಿನ ಹೋಟೆಲ್‌ನಲ್ಲಿ ಸಮೋಸ ತಿನ್ನಲು ಬಂದವರು ಗುಂಡಿನ ದಾಳಿ ನಡೆಸಿದ್ದಾರೆ. ಈ ಕೃತ್ಯದಿಂದಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಶುಕ್ರವಾರ ಸಂಜೆ ಫಳ್ನೀರ್ ಸಮೀಪದ ಎಂ. ಎಫ್‌. ಸಿ ಹೋಟೆಲ್ ಮತ್ತು ಫ್ರೆಶ್ ಮಾರ್ಟ್‌ ಬಳಿ ಈ ಘಟನೆ ನಡೆದಿದೆ. ಹೋಟೆಲ್‌ಗೆ ಸಮೋಸ ತಿನ್ನಲು ಬಂದಿದ್ದ ನಾಲ್ವರು ಯುವಕರ ತಂಡ ಈ ಕೃತ್ಯವನ್ನು ಮಾಡಿದೆ.

ಲಾಕ್ ಡೌನ್; ಮುಂಬೈನಲ್ಲಿ ಸಮೋಸ ಪಾರ್ಟಿ ಮಾಡಿದವರ ಬಂಧನ

ಹೋಟೆಲ್ ಸಿಬ್ಭಂದಿ ಜೊತೆ ಗಲಾಟೆ ಮಾಡಿ ಗಾಜು ಮತ್ತು ಪಿಠೋಪಕರಣ ಧ್ವಂಸ ಮಾಡಿದೆ. ಇದನ್ನು ತಡೆಯಲು ಸಿಬ್ಬಂದಿಗಳು ಬಂದಾಗ ಗುಂಡಿನ ದಾಳಿ ನಡೆಸಿದ್ದಾರೆ. ಓರ್ವ ಸಿಬ್ಬಂದಿಗೆ ಗಾಯಗೊಂಡಿದ್ದಾರೆ.

ಕೋಟಿ ರುಪಾಯಿ ಸಮೋಸ ತಿಂದು, ಟೀ ಕುಡಿದು ತೇಗಿತೆ ಆಪ್?

ಘಟನೆಯಿಂದಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಗುಂಡಿನ ದಾಳಿ ಬಳಿಕ ಪರಾರಿಯಾಗಲು ಯತ್ನಿಸಿದ ನಾಲ್ವರ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದಿದ್ದಾರೆ. ಇಬ್ಬರು ಆಟೋ ಹತ್ತಿ ಪರಾರಿಯಾಗಿದ್ದಾರೆ.

ಸಮೋಸ ಮಾರುತ್ತಿದ್ದವನ ಮಗ ದಕ್ಷಿಣ ಭಾರತ ಜೆಇಇ ಪರೀಕ್ಷೆಯಲ್ಲಿ ಟಾಪರ್!

ಹಳೇ ದ್ವೇಷದ ಹಿನ್ನಲೆಯಲ್ಲಿ ಉದ್ದೇಶ ಪೂರ್ವಕವಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದರು.

ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

English summary
Unidentified man fired gunshots at MFC hotel in Falnir, Mangaluru. One of the hotel staff injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X