India
  • search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಸಿನಿಶೆಟ್ಟಿಗೆ ಮಿಸ್ ಇಂಡಿಯಾ ಗೌರವ-ಮನೆಯಲ್ಲಿ ಹಬ್ಬದ ವಾತಾವರಣ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಉಡುಪಿ: ಕರಾವಳಿಯ ಮತ್ತೊಂದು ಬೆಡಗಿ ಮಿಸ್ ಇಂಡಿಯಾ ಗೌರವಕ್ಕೆ ಪಾತ್ರರಾಗಿದ್ದಾರೆ. ಉಡುಪಿ ಮೂಲದ ಸಿನಿ ಶೆಟ್ಟಿಗೆ ಮಿಸ್ ಇಂಡಿಯಾ ಅವಾರ್ಡ್ ಗೌರವ ಲಭ್ಯವಾಗಿದ್ದು, ಉಡುಪಿಯ ಸಿನಿ ಶೆಟ್ಟಿ ಕುಟುಂಬಸ್ಥರ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣ ಆಗಿದೆ.

ಸಿನಿ ಸಾಧನೆಯನ್ನು ನೆನಪಿಸಿ ಕುಟುಂಬ ಸಂತಸಪಟ್ಟಿದೆ. ಸಿನಿ ಶೆಟ್ಟಿ ಉಡುಪಿಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ನಿವಾಸಿಯಾಗಿದ್ದು, ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈಯಲ್ಲಿಯೇ. ಆದರೆ ವರ್ಷಕ್ಕೊಮ್ಮೆ ಹುಟ್ಟೂರಿಗೆ ಬಂದು ಕುಟುಂಬದವರೊಂದಿಗೆ ಬೆರೆಯುತ್ತಿದ್ದರು. ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ ಎಂಬತ್ತರ ದಶಕದಲ್ಲಿ ಮುಂಬೈಗೆ ತೆರಳಿದ್ದರು..ಮುಂಬೈಯಲ್ಲಿ ಹೋಟೆಲ್ ಉದ್ಯಮ ಮಾಡುತ್ತಿರುವ ಸದಾನಂದ ಶೆಟ್ಟಿ ಯಶಸ್ವಿ ಉದ್ಯಮಿಯಾಗಿದ್ದಾರೆ.

ಮುಳುಗಿದ ಹಡಗಿನಿಂದ ತೈಲ ಸೋರಿಕೆ ಭೀತಿ; ಭಾರೀ ಪ್ರಮಾಣದಲ್ಲಿ ಪರಿಸರ ಹಾನಿ ಆತಂಕಮುಳುಗಿದ ಹಡಗಿನಿಂದ ತೈಲ ಸೋರಿಕೆ ಭೀತಿ; ಭಾರೀ ಪ್ರಮಾಣದಲ್ಲಿ ಪರಿಸರ ಹಾನಿ ಆತಂಕ

ಮಹಾರಾಷ್ಟ್ರದಲ್ಲಿ ಹುಟ್ಟಿ ಬೆಳೆದಿರುವ ಸಿನಿ

ಕಲಿಕೆ, ನೃತ್ಯ, ಮಾಡಲಿಂಗ್ ನಲ್ಲೂ ಸಿನಿ ಪರಿಣಿತೆ. ನಮ್ಮ ಮನೆಯ ಮಗಳು ಮುಂದೊಂದು ದಿನ ವಿಶ್ವಸುಂದರಿಯೂ ಆಗುತ್ತಾಳೆ ಅಂತಾ ಸಿನಿ ಶೆಟ್ಟಿ ಅಜ್ಜ, ಅಜ್ಜಿ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನಂಜೆ ಮಡುಂಬು ವಿನ ಹುಡುಗಿ ಈಗ ಮಿಸ್ ಇಂಡಿಯಾ ಬೆಡಗಿ ಆಗಿರೋದು ಮನೆಯಲ್ಲಿ ಹಬ್ಬದ ವಾತವರಣ ಮೂಡಿಸಿದೆ. ಕರ್ನಾಟಕವನ್ನು ಪ್ರತಿನಿಧಿಸಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಸಿನಿ ಶೆಟ್ಟಿ,ಈಗಲೂ ನಿರಂತರವಾಗಿ ಅಜ್ಜ-ಅಜ್ಜಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ.

ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆಯಾಗುತ್ತಿದ್ದಂತೆ ಕುಟುಂಬದಲ್ಲಿ ಸಂತಸ ಮೇಳೈಸಿದೆ. ಕಾಪುವಿನ ಮಡಂಬುವಿನಲ್ಲಿರುವ ಕುಟುಂಬಸ್ಥರಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿದೆ. ಸಿನಿ ಶೆಟ್ಟಿಯ ತಂದೆ ಸದಾನಂದ ಶೆಟ್ಟಿ ಕಾಪು ಇನ್ನಂಜೆಯ ಮಡುಂಬು ಮೂಲದವರು. ಊರಿನಲ್ಲಿ ಕೃಷಿ ಮಾಡುತ್ತಾ, ಸದಾನಂದ ಶೆಟ್ಟಿ ವಿದ್ಯಾಭ್ಯಾಸ ನಡೆಸಿದ್ದರು. 80ರ ದಶಕದಲ್ಲಿ ಶಿಕ್ಷಣ ಪೂರೈಸಿ ದೂರದ ಮುಂಬೈಗೆ ಸದಾನಂದ ಶೆಟ್ಟಿ ಹೋಗಿದ್ದಾರೆ. ಅವತ್ತಿನಿಂದಲೂ ಕಷ್ಟ ಸುಖ ಪ್ರತಿಯೊಂದು ಸಂದರ್ಭದಲ್ಲಿ ತನ್ನೂರಿಗೆ ಬರುತ್ತಾರೆ. ಈಗಲೂ ವರ್ಷಕ್ಕೆ ಮೂರ್ನಾಲ್ಕು ಸಲ ಕುಟುಂಬ ಸಮೇತ ತನ್ನ ಮನೆಯಾದ ಇನ್ನಂಜೆಗೆ ಸದಾನಂದ ಶೆಟ್ಟಿ ಬರುತ್ತಾರೆ.

ಉಳ್ಳಾಲದಲ್ಲಿ ಹೆಚ್ಚಾದ ಕಡಲ್ಕೊರೆತ; ಕೊಚ್ಚಿ ಹೋದ ರಸ್ತೆ, ಮನೆಗಳುಉಳ್ಳಾಲದಲ್ಲಿ ಹೆಚ್ಚಾದ ಕಡಲ್ಕೊರೆತ; ಕೊಚ್ಚಿ ಹೋದ ರಸ್ತೆ, ಮನೆಗಳು

ಸಿನಿ ಶೆಟ್ಟಿಯ ಸಾಧನೆ ಹಂಚಿಕೊಂಡ ಕುಟುಂಬ

ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆ ಆಗಿರುವ ಬಗ್ಗೆ ಸಿನಿ ಅಜ್ಜ ರಾಮಣ್ಣ ಖುಷಿ ಹಂಚಿಕೊಂಡಿದ್ದಾರೆ. ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಘೋಷಣೆಯಾಗುತ್ತಿದ್ದಂತೆ, ಸ್ವತಃ ಸದಾನಂದ ಶೆಟ್ಟರು ಊರಿಗೆ ಕರೆ ಮಾಡಿ ಈ ಸಂತೋಷದ ವಿಷಯ ಹಂಚಿಕೊಂಡಿದ್ದಾರೆ. ಸಿನಿ ಶೆಟ್ಟಿಯ ಪ್ರತಿಯೊಂದು ಸಾಧನೆಯನ್ನು ಮಡುಂಬುವಿನಲ್ಲಿರುವ ಆಕೆಯ ಬಂಧುಗಳು ಹತ್ತಿರದಿಂದ ಗಮನಿಸಿದ್ದಾರೆ. ವರ್ಷಕ್ಕೊಮ್ಮೆಯಾದರೂ ಆಕೆ ಊರಿಗೆ ಬಂದಾಗ, ಆಕೆ ತಮ್ಮೊಂದಿಗೆ ಒಡನಾಡುತ್ತಿದ್ದ ರೀತಿಯನ್ನು ನೆನಪಿಸಿಕೊಂಡು ಅಜ್ಜ ರಾಮಣ್ಣ ಶೆಟ್ಟಿ ಖುಷಿ ಪಟ್ಟಿದ್ದಾರೆ.

Udupi sini shetty won the miss india: happy movement at home

ತುಳು ಮಾತನಾಡುವ ಸಿನಿ ಶೆಟ್ಟಿ

ಸಿನಿ ಊರಿಗೆ ಬಂದಾಗಲೆಲ್ಲ ನಮ್ಮ ಮಕ್ಕಳೊಂದಿಗೆ ಆಟವಾಡಿ‌ ಕಾಲಕಳೆಯುತ್ತಾಳೆ. ನಾನು ಮುಂಬಯಿ ಹೋದಾಗ ಸಿನಿ ಭರತನಾಟ್ಯ ಸ್ಪರ್ಧೆ ನೋಡಲು ಹೋಗಿದ್ದೆ. ಚೆನ್ನಾಗಿ ತುಳು ಮಾತನಾಡುವ ಸಿನಿ ಶೆಟ್ಟಿ, ಊರಿಗೆ ಬಂದಾಗೆಲ್ಲ ಇಲ್ಲಿನ ಕೃಷಿ,ಗದ್ದೆ, ದೈವದೇವರ ಕಾರ್ಯಕ್ರಮ,ಮನೆಯ ದನಗಳ ಜೊತೆಬೆರೆತು ಸಂತೋಷ ಪಡುತ್ತಾಳೆ. ಕೃಷಿ, ದನ‌, ಕರು ಇವೆಲ್ಲದರ ಜೊತೆಗೆ ಊರಲ್ಲಿ ಹೆಚ್ಚಿನ ಸಮಯ ಕಳೆಯುತ್ತಾಳೆ. ಭರತನಾಟ್ಯದಲ್ಲೂ ಸಿನಿ ಶೆಟ್ಟಿ ಪ್ರವೀಣೆಯಾಗಿದ್ದಾರೆ. ದೈವ ದೇವರ ಮೇಲೆ ಸಿನಿ‌ ಶೆಟ್ಟಿಗೆ ಅಪಾರ ಭಕ್ತಿ ಇದೆ. ಸಿನಿ ತಂದೆ ತಾಯಿಗೂ ದೈವ ದೇವರ ಮೇಲೆ ಅಪಾರ ನಂಬಿಕೆ. ಸಿನಿ ‌ತುಂಬಾ ಚೂಟಿ ಹುಡುಗಿ ಅವಳು ಇನ್ನು ಎತ್ತರಕ್ಕೆ ಬೆಳೆಯಲಿ ಅಂತಾ ಸಿನಿ ಅಜ್ಜ ರಾಮಣ್ಣ ಶೆಟ್ಟಿ ಹೇಳಿದ್ದಾರೆ.

ಇನ್ನು ಸಿನಿ ಅಜ್ಜಿ ಶಶಿಕಲಾ ಶೆಟ್ಟಿ ಮಾತನಾಡಿ, ಸಿನಿ ಶೆಟ್ಟಿ ಬಹಳ ಚೂಟಿ ಹುಡುಗಿ. ಚಿಕ್ಕಂದಿನಿಂದಲೂ ಆಕೆಯನ್ನು ಗಮನಿಸುತ್ತಿದ್ದೇವೆ. ಊರು, ಹಳ್ಳಿ, ಹಳ್ಳಿ ಯ ವಾತವರಣ ಎಲ್ಕವೂ ಆಕೆಗೆ ಇಷ್ಟ. ನಾವು ಮುಂಬೈಗೆ ಹೋದಾಗ ಬಹಳ ಆತ್ಮೀಯವಾಗಿ ನಮ್ಮ ಜೊತೆ ಇರುತ್ತಾಳೆ. ಅವಳು ಮಿಸ್ ವರ್ಲ್ಡ್ ಆಗುತ್ತಾಳೆ ಅಂತಾ ಹೇಳಿದ್ದಾರೆ.

English summary
karnataka's sini shetty crowned femina miss India 2022 on sunday at mumbai, sini is out of a new beauty queen of the india, there is a happy atmosphere in the house of the sini shetty family of udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X