ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೋಳ್ಯ ಮನೆ ಸ್ಫೋಟ ಪ್ರಕರಣ: ಮತ್ತೆರಡು ಕಚ್ಚಾ ಬಾಂಬ್ ಗಳು ಪತ್ತೆ

|
Google Oneindia Kannada News

ಮಂಗಳೂರು, ಅಕ್ಟೋಬರ್. 16: ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬಾಂಬ್ ಅಳವಡಿಸಿ ಮನೆ ಸ್ಫೋಟಿಸಲು ಯತ್ನಿಸಿದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಈ ನಡುವೆ ಪರಿಶೀಲನೆ ವೇಳೆ ಪೊಲೀಸರು ಮನೆಗೆ ಅಳವಡಿಸಿ ಸ್ಫೋಟಿಸದ ಮತ್ತೆರಡು ಜೀವಂತ ಕಚ್ಚಾ ಬಾಂಬ್ ಪತ್ತೆ ಹಚ್ಚಿದ್ದಾರೆ.

ಪೋಳ್ಯದಲ್ಲಿ ಸಿನಿಮೀಯ ಶೈಲಿಯಲ್ಲಿ ಬಾಂಬ್ ಸ್ಫೋಟಿಸಿದ ದುಷ್ಕರ್ಮಿ, ಮಹಿಳೆ ಗಂಭೀರಪೋಳ್ಯದಲ್ಲಿ ಸಿನಿಮೀಯ ಶೈಲಿಯಲ್ಲಿ ಬಾಂಬ್ ಸ್ಫೋಟಿಸಿದ ದುಷ್ಕರ್ಮಿ, ಮಹಿಳೆ ಗಂಭೀರ

ಈ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ಎಫ್ ಎಸ್ಎಲ್ ತಂಡ ಹಾಗೂ ಶ್ವಾನದಳ ಶೋಧಕಾರ್ಯ ನಡೆಸಿದೆ. ಈ ಸ್ಫೋಟಕಗಳನ್ನು ಜೆಲ್ ಬೇಸ್ಡ್ ಅಮೋನಿಯಂ ನೈಟ್ರೇಟ್ ನಿಂದ ತಯಾರಿಸಲಾಗಿದೆ ಎಂದು ಎಫ್ ಎಸ್ಎಲ್ ತಂಡದ ಆಧಿಕಾರಿಗಳು ತಿಳಿಸಿದ್ದಾರೆ.

 ರಾಯಚೂರು ನಿಗೂಢ ಸ್ಫೋಟ: ಬಾಂಗ್ಲಾ ರಾಸಾಯನಿಕ ಕಾರಣ ರಾಯಚೂರು ನಿಗೂಢ ಸ್ಫೋಟ: ಬಾಂಗ್ಲಾ ರಾಸಾಯನಿಕ ಕಾರಣ

Two more explosives recovered from Ploya house

ಸೋಮವಾರ ತಡ ರಾತ್ರಿ ಸ್ಫೋಟ ಸಂಭವಿಸಿದ್ದು, ನಾರಾಯಣ ಪ್ರಸಾದ್ ಅವರ ಮನೆಯಲ್ಲಿ ಸುಮಾರು 3 ತಿಂಗಳ ಹಿಂದೆ ಕೆಲಸಕ್ಕೆ ಇದ್ದ ಬಾಬು ಯಾನೆ ಬಾಲು ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಕೆಲಸಕ್ಕಿದ್ದ ಬಾಬು ವನ್ನು 3 ತಿಂಗಳ ಹಿಂದೆ ನಾರಾಯಣ್ ಪ್ರಸಾದ್ ಕೆಲಸದಿಂದ ತೆಗೆದು ಹಾಕಿದ್ದರು .

Two more explosives recovered from Ploya house

ಆ ದ್ವೇಷದಿಂದ ಬಾಬು ಈ ಕೃತ್ಯವನ್ನು ಎಸಗಿರುವ ಬಗ್ಗೆ ಶಂಕೆಯಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸ್ ಅಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದಾರೆ.

English summary
Miscreants have attempt to kill the members of the fammily by blasting house at Polya near Kadaba. In this shocking incident woman injured .Now two more explosives recovered from the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X