ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರಿನಲ್ಲಿ ದನಗಳ ಅಕ್ರಮ ಸಾಗಾಟ ಪ್ರಕರಣ; ಇಬ್ಬರ ಬಂಧನ

|
Google Oneindia Kannada News

ಮಂಗಳೂರು ಜೂನ್ 13: ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿದ್ದ ಪ್ರಕರಣ ಭೇದಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಿಂಸಾತ್ಮಕ ಹಾಗೂ ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೂಡುಬಿದಿರೆ ತೋಡಾರು ನಿವಾಸಿಗಳಾದ ಅನ್ಸಾರ್ (27) ಹಾಗೂ ಝುಬೈರ್ (26) ಎಂದು ಗುರುತಿಸಲಾಗಿದೆ.

ಅಪಘಾತಕ್ಕೀಡಾದ ಕಾರು ಆರೋಪಿ ಅನ್ಸಾರ್ ಗೆ ಸೇರಿದ್ದಾಗಿದ್ದು, ಗೋ ಸಾಗಾಟಕ್ಕಾಗಿ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬಸ್ ನಲ್ಲಿ ಅಕ್ರಮ ದನದ ಮಾಂಸ ಸಾಗಾಟ ಪತ್ತೆಖಾಸಗಿ ಬಸ್ ನಲ್ಲಿ ಅಕ್ರಮ ದನದ ಮಾಂಸ ಸಾಗಾಟ ಪತ್ತೆ

ಇದೇ ಜೂನ್ 7 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಮುಂಜಾನೆ ಐಷಾರಾಮಿ ಕಾರೊಂದು ಅಪಘಾತಕ್ಕೀಡಾಗಿತ್ತು. ಅಪಘಾತಕ್ಕೀಡಾಗಿದ್ದ ಈ ಐಷಾರಾಮಿ ಕಾರಿನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿತ್ತು.

two arrested in Illegal transport of cows in Car

ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡಲು ಸುಮಾರು 6 ದನಗಳನ್ನು ಕಾರಿನಲ್ಲಿ ತುಂಬಿಸಲಾಗಿತ್ತು. ಆದರೆ ಪರಶುರಾಮ ದೇವಸ್ಥಾನದ ಚಾರ್ಮಾಡಿ ರಸ್ತೆ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ 5 ಹಸುಗಳು ಸಾವನ್ನಪ್ಪಿದ್ದವು. ಒಂದು ಹಸುವಿನ ಸ್ಥಿತಿ ಗಂಭೀರವಾಗಿತ್ತು. ಈ ದನಗಳನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಕಾರು ಅಪಘಾತವಾಗುತ್ತಿದ್ದಂತೆ ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

English summary
In connection to Illegal transport of cows in Car, Belthangadi police arrested two people. Arrested identified as Ansar (27) and Juber (26),
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X