• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರಿನ ದಂಪತಿಯ ಈ ಕೆಲಸಕ್ಕೆ ಭೇಷ್ ಅನ್ನಲೇಬೇಕು

By ಐಸ್ಯಾಕ್ ರಿಚರ್ಡ್
|
ಮಂಗಳೂರು, ಫೆಬ್ರವರಿ 18: ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುವಾಗ ತಲೆ ಕೂದಲು ಉದುರಿಹೋಗುತ್ತದೆ. ಆ ಸನ್ನಿವೇಶ ರೋಗಿಯ ಪಾಲಿಗೆ ತುಂಬ ಸವಾಲು ಎನಿಸುವಂಥದ್ದು. ಅಂಥವರಿಗೆ ಸ್ಥೈರ್ಯ ತುಂಬಲು, ವಿಶ್ವಾಸ ವಾಪಸ್ ಪಡೆಯುವಂತೆ ಮಾಡಲು ತುಂಬ ಖರ್ಚಿಲ್ಲದ, ಆದರೆ ಅಕ್ಕರಾಸ್ಥೆ ಅಗತ್ಯವಿರುವ ಮಾರ್ಗವೊಂದಿದೆ.

ಅದನ್ನು ಮಂಗಳೂರಿನ ಮಣ್ಣಗುಡ್ಡೆಯ ಅಶ್ವಿನ್ ಪ್ರಭು ಹಾಗೂ ಶ್ರೀಲತಾ ದಂಪತಿ ತಮ್ಮ ಎರಡೂವರೆ ವರ್ಷದ ಮಗ ಅರ್ನವ್ ಪ್ರಭು ಮೂಲಕ ಮಾಡಿದ್ದಾರೆ. ಮಕ್ಕಳಿಗೆ ಮೊದಲ ಬಾರಿಗೆ ಕೂದಲು ತೆಗೆಸುವುದು ಸಾಂಪ್ರದಾಯಿಕ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲೂ ಮನುಷ್ಯತ್ವದ ಸಂದೇಶವನ್ನು ನಮ್ಮೆದುರಿಗೆ ಇರಿಸಿದ್ದಾರೆ ಈ ಗಂಡ-ಹೆಂಡತಿ.[ಕ್ಯಾನ್ಸರ್ ನಿಂದ ಸತ್ತ 14ರ ಬಾಲಕಿಯ ದೇಹ ಇನ್ನೂ 'ಜೀವಂತ'!]

ಅರ್ನವ್ ಪ್ರಭುನ ಕೂದಲು ತೆಗೆಸಿದ ಬಳಿಕ ಅದನ್ನು ಸ್ವಚ್ಛ ಮಾಡಿ, ಕ್ಯಾನ್ಸರ್ ಪೀಡಿತರಿಗೆ ನೆರವಾಗಲಿ ಎಂಬ ಕಾರಣಕ್ಕೆ ಅಮೆರಿಕಕ್ಕೆ ಕಳುಹಿಸಿದ್ದಾರೆ. ಅದೇನೋ ಲಕ್ಷಾಂತರ ರುಪಾಯಿ ಕೊಟ್ಟವರ ಥರ ಸುದ್ದಿ ಮಾಡಿದ್ದೀರಲ್ರೀ ಎಂದು ಅಕಸ್ಮಾತ್ ನೀವಂದುಕೊಂಡರೆ, ಕ್ಷಮಿಸಿ, ನಿಮಗೆ ಇದರ ಮಹತ್ವ ಅರ್ಥವಾಗಿಲ್ಲ ಅಂತ.

ಏಕೆಂದರೆ ಕ್ಯಾನ್ಸರ್ ಗೆ ಕಿಮೋಥೆರಪಿ ಎಂಬ ಚಿಕಿತ್ಸೆ ನೀಡಲಾಗುತ್ತದೆ. ಆ ವೇಳೆ ರೋಗಿಗೆ ಕೂದಲು ಉದುರುತ್ತದೆ. ಅಂಥವರಿಗೆ ನೆರವಾಗುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ. ಸಂಪ್ರದಾಯವನ್ನೂ ಆಚರಿಸಿ, ಮಾನವೀಯತೆಯನ್ನೂ ಮೆರೆದಿರುವ ಅಶ್ವಿನ್ ಹಾಗೂ ಶ್ರೀಲತಾ ದಂಪತಿ ನಮ್ಮೆದುರಿಗಿರುವ ಹೊಸ ನೀತಿ ಪಾಠ.[ಅಂಡರ್ ಟೇಕರ್ ಪತ್ನಿ ಮಿಷಲ್ ಗೆ ಕ್ಯಾನ್ಸರ್]

ಕೂದಲು 8 ಇಂಚು ಇರಬೇಕು

ಕೂದಲು 8 ಇಂಚು ಇರಬೇಕು

ಅಂದಹಾಗೆ, ಈ ರೀತಿ ದಾನ ಮಾಡುವ ಕೂದಲು ಸುಮಾರು 8 ಇಂಚು ಇರಬೇಕು ಎಂಬ ನಿಯಮವಿದ್ದು, ಅರ್ನವ್‌ ಪ್ರಭುವಿನ ಹತ್ತು ಇಂಚಿನ ಕೂದಲನ್ನು ಅಮೆರಿಕನ್‌ ಕ್ಯಾನ್ಸರ್‌ ಫೌಂಡೇಷನ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿರುವ ಪ್ಯಾಂಟಿನ್‌ ಬ್ಯುಟಿಫ್ಯೂಲ್‌ ಲೆಂತ್‌ ಎಂಬ ಸಂಸ್ಥೆಗೆ ಕೊರಿಯರ್‌ ಮೂಲಕ ಕಳುಹಿಸುತ್ತಿದ್ದಾರೆ.

ಅರ್ಜಿ ನಮೂನೆ ಭರ್ತಿ

ಅರ್ಜಿ ನಮೂನೆ ಭರ್ತಿ

ಭಾರತದಲ್ಲಿ ಕೆಲವೇ ಕೆಲವು ಕೇಶದಾನ ಸಂಸ್ಥೆಗಳಿದ್ದು, ಅವರನ್ನು ಸಂಪರ್ಕಿಸಿದಾಗ ಅಭಿಯಾನ ಮಾಡುವ ಜಾಗದಲ್ಲಿ ಮಾತ್ರವೇ ಕೇಶ ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಿದೇಶಿ ಸಂಸ್ಥೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು. ಕೇಶ ನೀಡುವ ಮೊದಲು ಅರ್ಜಿ ನಮೂನೆ ಭರ್ತಿ ಮಾಡಿ, ನಮ್ಮ ದೇಶದಲ್ಲಿನ ಕ್ಯಾನ್ಸರ್‌ ಪೀಡಿತರಿಗೆ ನೀಡಬೇಕು ಎಂದು ಕೋರಿದ್ದಾರೆ. ಇದರಿಂದಾಗಿ ನಮ್ಮ ದೇಶದ ರೋಗಿಗೆ ಅರ್ನವ್‌ ಕೂದಲಿನಿಂದ ತಯಾರಿಸಿದ ವಿಗ್‌ ಅನ್ನು ನೀಡಲಾಗುತ್ತದೆ.

ಮಗುವಿನ ಮೊದಲಿನ ಚಿತ್ರ, ಈಗಿನ ಚಿತ್ರ ಕಳುಹಿಸಬೇಕು

ಮಗುವಿನ ಮೊದಲಿನ ಚಿತ್ರ, ಈಗಿನ ಚಿತ್ರ ಕಳುಹಿಸಬೇಕು

ತುಂಡರಿಸುವ ಮುನ್ನ ಶ್ಯಾಂಪೂ ಮೂಲಕ ಕೂದಲನ್ನು ತೊಳೆದಿರಬೇಕು. ಬಳಿಕ ಗ್ಲೋ ಡ್ರೈ ಮಾಡಿ, 10 ಇಂಚಿನ ಕೂದಲನ್ನು ಪ್ಲಾಸ್ಟಿಕ್‌ನಿಂದ ಕವರ್ ಮಾಡಿ, ಕೊರಿಯರ್ ಮೂಲಕ ಅಮೆರಿಕಕ್ಕೆ ಕಳುಹಿಸಲಾಗುತ್ತದೆ. ಅದರೊಂದಿಗೆ ಮಗುವಿನ ಮೊದಲಿನ ಚಿತ್ರ ಹಾಗೂ ಈಗಿನ ಚಿತ್ರವನ್ನು ಕಳುಹಿಸಬೇಕಾಗುತ್ತದೆ.

ಅರ್ನವ್ ಬೊಬ್ಬೆ

ಅರ್ನವ್ ಬೊಬ್ಬೆ

"ಚಿಕ್ಕಂದಿನಿಂದಲೇ ಅರ್ನವ್‌ಗೆ ಕೂದಲು ಅಂದರೆ ತುಂಬಾ ಇಷ್ಟ. ಕೂದಲು ತುಂಡರಿಸುವ ಎಂದಾಗ ಅರ್ನವ್ ಬೊಬ್ಬೆ ಹೊಡೆಯುತ್ತಿದ್ದ. ಒಂದು ದಿನ ಕ್ಯಾನ್ಸರ್‌ನಿಂದ ಕೂದಲು ಕಳೆದುಕೊಂಡ ಜನರ ಚಿತ್ರ ತೋರಿಸಿ, ನಿನ್ನ ಕೂದಲು ಅವರಿಗೆ ನೀಡು, ನಿನಗೆ ಬೇರೆ ಬರುತ್ತದೆ ಎಂದು ಹೇಳಿದಾಗ ಒಪ್ಪಿಕೊಂಡ" ಎಂದು ತಂದೆ ಅಶ್ವಿನ್ ಪ್ರಭು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two and half year boy Arnav from Mangaluru donates his hair for cancer patients. Parents Ashwin Prabhu and Shrilatha have packed and sent his hair to American Cancer Foundation and have urged them that the wig made of their child Arnav must be given to Indian cancer patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more