ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲು

|
Google Oneindia Kannada News

ಮಂಗಳೂರು, ಜುಲೈ.22: ಜಾನಪದ ವೈಶಿಷ್ಟ್ಯಗಳಿಂದಲೇ ವಿಭಿನ್ನವಾಗಿ ಗುರುತಿಸಿಕೊಂಡಿರುವ ತುಳುನಾಡಿನಲ್ಲಿ ಅಷಾಢಮಾಸ ಆರಂಭವಾಗಿದೆ. ಅತ್ಯಂತ ವಿಭಿನ್ನ ಸಂಸ್ಕೃತಿ , ಸಂಪ್ರದಾಯಗಳನ್ನು ಹೊಂದಿರುವಂತಹ ತುಳುನಾಡಿನಲ್ಲಿ ಆಟಿ ತಿಂಗಳು ಅಥವಾ ಆಷಾಢ ತಿಂಗಳ ಆಚರಣೆಗೆ ವಿಶಿಷ್ಟ ಮಹತ್ವವಿದೆ.

ತುಳುವರಲ್ಲಿ ಆಟಿ ಎಂದರೆ ಆಷಾಢ. ಈ ತಿಂಗಳಲ್ಲಿ ಮದುವೆ, ಗೃಹ ಪ್ರವೇಶ, ಹೊಸ ಮನೆ ಖರೀದಿ, ಹೊಸ ಜಾಗ ಖರೀದಿ ಸೇರಿದಂತೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಎಲ್ಲದಕ್ಕೂ ಆಟಿ ತಿಂಗಳು ಕಳೆಯಬೇಕು. ಆದರೆ ಆಟಿ ತಿಂಗಳಿನಲ್ಲಿ ತುಳುವರು ಆಚರಿಸುವ ಪದ್ಧತಿಗಳು ಮಾತ್ರ ಅತ್ಯಂತ ವಿಶಿಷ್ಟ.

ಆಷಾಢ ಮಾಸದಲ್ಲಿ ಮಾರಿ ಓಡಿಸಲು ತುಳುನಾಡಿನ ಮನೆ ಮನೆಗೆ ಬರುವ ಆಟಿ ಕಳೆಂಜಆಷಾಢ ಮಾಸದಲ್ಲಿ ಮಾರಿ ಓಡಿಸಲು ತುಳುನಾಡಿನ ಮನೆ ಮನೆಗೆ ಬರುವ ಆಟಿ ಕಳೆಂಜ

 ವಿಶಿಷ್ಟ ತಿನಿಸುಗಳ ಪರಿಮಳ

ವಿಶಿಷ್ಟ ತಿನಿಸುಗಳ ಪರಿಮಳ

ಆಟಿ ತಿಂಗಳ ತುಳುವರ ತಿನಿಸುಗಳು ಮಾತ್ರ ಎಲ್ಲದಕ್ಕಿಂತಲೂ ಭಿನ್ನ. ಧೋ ಎಂದು ಸುರಿಯುವ ಮಳೆಯ ನಡುವೆ ಚುಮು ಚುಮು ಚಳಿಯಲ್ಲಿ ತುಳುನಾಡಿನ ಪ್ರತಿ ಮನೆಯ ಅಡುಗೆ ಕೋಣೆಯಿಂದ ವಿಶಿಷ್ಟ ತಿನಿಸುಗಳ ಘಮ ಘಮ ಪರಿಮಳ ಪರಿಸರದ ಎಲ್ಲೆಡೆ ಪಸರಿಸುತ್ತದೆ.

 ಪ್ರಕೃತಿಯ ತಿನಿಸುಗಳು

ಪ್ರಕೃತಿಯ ತಿನಿಸುಗಳು

ಮಳೆಗಾಲದಲ್ಲಿ ಬರುವ ಈ ಆಟಿ ತಿಂಗಳಲ್ಲಿ ಆಹಾರ, ಧಾನ್ಯ ದಾಸ್ತಾನುಗಳು ಬೇಗನೇ ಮುಗಿದು, ಆಹಾರದ ಕೊರತೆ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ತುಳುನಾಡಿನ ಜನ ಆಟಿಯಲ್ಲಿ ಪ್ರಕೃತಿಯ ಮೊರೆ ಹೋಗಿ, ಅಲ್ಲಿ ಸಿಗುವಂತಹ ಸಸ್ಯ ಚಿಗುರು, ಗಡ್ಡೆ ಗೆಣಸು, ಫಲವಸ್ತುಗಳನ್ನು ಉಪಯೋಗಿಸಿ ಬಗೆ ಬಗೆಯ ತಿನಿಸುಗಳನ್ನು ತಯಾರಿಸಿ ಸೇವಿಸುವುದು ಸಂಪ್ರದಾಯವಾಗಿದೆ.

 ಆಟಿ ತಿಂಗಳಲ್ಲಿ ಬಳಕೆ

ಆಟಿ ತಿಂಗಳಲ್ಲಿ ಬಳಕೆ

ಈ ಸಸ್ಯ ಪರಿಸರವು ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ತುಳುವರ ಪೂರ್ವಜರಿಂದಲೇ ಈ ಸಂಪ್ರದಾಯಗಳು ಆಚರಣೆಯಲ್ಲಿವೆ.

ಮಳೆಗಾಲದಲ್ಲಿಯೇ ಬರುವ ಆಟಿ ಮಾಸಕ್ಕಾಗಿಯೇ ತಯಾರಿಸಿದ ಹಪ್ಪಳ , ಸಾಂತಣಿ , ಹಲಸಿನ ಬೀಜ , ಮಾವಿನಕಾಯಿಯನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಶೇಖರಿಸಿದ 'ಉಪ್ಪಡಚ್ಚಿಲ್', ನೀರು ಕುಕ್ಕು, ತಿನಿಸುಗಳನ್ನು ತಯಾರಿಸಿ ಇಡಲಾಗುತ್ತದೆ. ತುಳುನಾಡಿನ ಗ್ರಾಮೀಣ ಪ್ರದೇಶದಲ್ಲಿ ಈ ತಿನಿಸುಗಳನ್ನು ಆಟಿ ತಿಂಗಳಲ್ಲಿ ಬಳಸಲು ಆರಂಭಿಸಲಾಗುತ್ತದೆ.

 ಏನೆಲ್ಲಾ ತಿನಿಸುಗಳಿರುತ್ತವೆ?

ಏನೆಲ್ಲಾ ತಿನಿಸುಗಳಿರುತ್ತವೆ?

ಅರಿಶಿನ ಎಲೆಯಲ್ಲಿ ತಯಾರಾದ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ, ಎಳೆ ಬಿದಿರಿನ ಉಪ್ಪಿನಕಾಯಿ, ತಜಂಕ ಪಲ್ಯ, ಈ ಆಟಿ ತಿಂಗಳಲ್ಲಿ ತಯಾರಾಗುವ ವಿಶೇಷ ತಿನಿಸುಗಳು. ಆಟಿ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳಿಗೆ ತೆರಳುವ ಮೊದಲು ತೆಂಗಿನ ಕಾಯಿ ಅಥವಾ ತಾರಾಯಿದ ಗಂಜಿ, ಕಾಯಿ ಹಾಲಿನ ಗಂಜಿ ಸೇವಿಸಿತೆರಳುವ ಪದ್ಧತಿ ಇಂದಿಗೂ ಇದೆ.

ಮೋಡೆ, ಅರಸಿನ ಎಲೆಯ ಕಡುಬು, ಹಲಸಿನ ಕಡುಬು , ಪತ್ರೋಡೆ, ಕೆಸುವಿನ ಚಟ್ನಿ,ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಚಿಲಿಂಬಿದ ಅಡ್ಡೆ, ಸೌತೆ ಪದಂಗಿ ಗಸಿ, ತಜಂಕ ವಡೆ, ಪಚ್ಚಿರ್ ಪಲ್ಯ, ಹಲಸಿನ ಮುಳ್ಕು, ಕಣಲೆ ಕಡ್ಲೆ, ತೇವು ಪದಪೆ ಗಸಿ, ಪಜಕಾಯಿ ಚಟ್ನಿ, ಮಾವಿನ ಹಣ್ಣಿನ ಮೆನಸ್ ಕಾಯಿಯ ರುಚಿ ಈ ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ.

English summary
Tulu Nadu is known for its rich traditions. Especially in village of Tulu Nadu Month of Aati very special to Tulu people. While there is a special diet associated with Aati in Tulu region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X