ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಭ್ರಮದಿಂದ ಜರುಗಿದ ತುಳಸಿ ಪೂಜೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್.21: ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ "ತುಳಸಿ ಪೂಜೆ " ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ (ನ.20)ಶುಕ್ಲ ಪಕ್ಷದ ದ್ವಾದಶಿಯ ಪವಿತ್ರದಿನ ಉತ್ಥಾನ ದ್ವಾದಶಿಯಂದು ದೇವಳದ ಪ್ರಕಾರದಲ್ಲಿರುವ ಶ್ರೀ ತುಳಸಿ ಕಟ್ಟೆಯಲ್ಲಿ ಚಾತುರ್ಮಾಸ ಸಂಪೂರ್ಣಗೊಳಿಸಿ ಶ್ರೀ ಶ್ರೀನಿವಾಸ ದೇವರ ಸಹಿತ ನೆರವೇರಿತು.

ಬೆಳಗ್ಗೆ ಪ್ರಾರ್ಥನೆ ಬಳಿಕ ಕ್ಷೀರಾಬ್ದಿ ಪೂಜೆ ನೆರವೇರಿತು. ದೇವಳದ ವೈದಿಕರಿಂದ ವಿಧಿ ವಿಧಾನಗಳು ಜರುಗಿದವು. ರಾತ್ರಿ ಶ್ರೀ ದೇವರ ಪೇಟೆ ಪಲ್ಲಕಿ ಉತ್ಸವ ನಡೆಯಿತು. ಇದೇ ರೀತಿ ಶ್ರೀ ಕಾಶೀ ಮಠ ಸಂಸ್ಥಾನದಲ್ಲಿ ದೇವರ ಸಮ್ಮುಖದಲ್ಲಿ ಕಾಶೀ ಮಠಾಧೀಶರ ದಿವ್ಯ ಹಸ್ತಗಳಿಂದ ತುಳಸಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ.ಎಲ್.ಶೆಣೈ , ರಾಮಚಂದ್ರ ಕಾಮತ್, ಪ್ರಶಾಂತ್ ರಾವ್ ಹಾಗೂ ನೂರಾರು ಭಗವತ್ ಭಕ್ತರು ಉಪಸ್ಥಿತರಿದ್ದರು.

ಕಾರ್ತೀಕ ಶುದ್ಧ ದ್ವಾದಶಿಯನ್ನು "ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ. ತನ್ನಿಮಿತ್ತ ನಿಮಗೆ ತುಳಸಿಯ ಕತೆ ಕೊಡಲಾಗಿದೆ. ತುಳಸಿ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು ಪೂಜೆ ಮಾಡುವ ಸಂಪ್ರದಾಯ ಎಲ್ಲಾ ಕಡೆಯಿದೆ.

ಉತ್ಥಾನ ದ್ವಾದಶಿ: ತುಳಸಿ ಮದುವೆಯ ಆಚರಣೆ ಏಕೆ? ಹೇಗೆ?ಉತ್ಥಾನ ದ್ವಾದಶಿ: ತುಳಸಿ ಮದುವೆಯ ಆಚರಣೆ ಏಕೆ? ಹೇಗೆ?

ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಅಂದು ಏಳುತ್ತಾನೆ. ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ. ಮುಂದೆ ಓದಿ...

 ಈ ಹೆಸರು ಬರಲು ಕಾರಣ

ಈ ಹೆಸರು ಬರಲು ಕಾರಣ

ಆಷಾಢ ಶುದ್ಧ ಏಕಾದಶಿಯಂದು ಶಯನಿಸಿದ ವಿಷ್ಣುವು ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ಆದ್ದರಿಂದ "ಶಯನೈಕಾದಶೀ, ಉತ್ಥಾನದ್ವಾದಶಿ ಎಂದು ಈ ಎರಡೂ ಹಬ್ಬಗಳಿಗೆ ಹೆಸರಿದೆ. ವಿಷ್ಣುವಿನ ಯೋಗನಿದ್ರಾಕಾಲದ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.

ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ. ತುಲನೆ ಇಲ್ಲದ ಸಸ್ಯವಾದ್ದರಿಂದ ತುಳಸಿ ಎಂಬ ಹೆಸರು ಬಂದಿದೆ.

 ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ ತುಳಸಿ ಹಬ್ಬದಂದು ಸಂಭ್ರಮದಿ ದೀಪ ಬೆಳಗಿಸಿ

 ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ

ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ

ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಳಸಿ.
ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು. ಇದು ತುಳಸಿಯ ಶಕ್ತಿ.

ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿವಾಹವಾದನು. ಜಲಂಧರಾಸುರನು ಲೋಕ ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.

ಜಲಂಧರ ಪತ್ನಿ ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ. ಪವಿತ್ರ ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು. ಇದರ ಕುರುಹಾಗಿ ತುಲಸಿಕಟ್ಟೆಗೆ ಬೃಂದಾವನ ಎಂಬ ಹೆಸರು, ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸೀಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಳಸಿ ವಿವಾಹ ಮಾಡಿ ನಾವು ಆಚರಿಸುತ್ತೇವೆ.

ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ. ಮನೆಗೆ ತರುವುದಿಲ್ಲ. ಅಲ್ಲಿಯವರೆಗೆ ಅದಕ್ಕೆ ಅಶೌಚ. ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.

 ತುಳಸಿಯ ಔಷಧೀಯ ಗುಣಗಳು

ತುಳಸಿಯ ಔಷಧೀಯ ಗುಣಗಳು

ತುಳಸಿ ಜಲಮಾಲಿನ್ಯ, ಅರ್ಬುದ, ಕೆಮ್ಮು, ಬೊಜ್ಜು, ಮರೆವು, ಮಧುಮೇಹ, ರಕ್ತದ ಏರೊತ್ತಡ, ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ದಿವ್ಯೌಷಧ. ತುಳಸಿಯಲ್ಲಿ ಬಿಳಿ ಮತ್ತು ಕರಿ ತುಳಸಿ ಎಂದು ಎರಡು ಪ್ರಭೇದಗಳಿವೆ. ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.

ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ. ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ. ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ"ಯ ದಿನ. ಹಾಗಾಗಿ ಮಥನ ದ್ವಾದಶಿ, ಕ್ಷೀರಾಬ್ಧಿ ವ್ರತ ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.

 ಇನ್ನೊಂದು ಕಥೆಯಿದೆ

ಇನ್ನೊಂದು ಕಥೆಯಿದೆ

ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಳಸಿ.ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು. ಬ್ರಹ್ಮನು "ನಿನ್ನ ಕೋರಿಕೆ ಈಡೇರುತ್ತದೆ. ಆದರೆ ನೀನು ಗಿಡವಾಗುವೆ" ಎಂದನು.

ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು, ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು. ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.

ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು. ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನು ಉಪಚರಿಸಿ, ಸಮಾಗಮ ಹೊಂದಿದಾಗ,ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ, ತುಳಸಿಯನ್ನು ವಿವಾಹವಾಗಲು ತಪಸ್ಸು ಮಾಡಿದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.

ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು. ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು. ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ವಿಷ್ಣುವನ್ನು ಮದುವೆಯಾದನು.

English summary
Tulasi worship took place on Tuesday (Nov 20) at Sri Venkataramana temple in Mangalore. Large number of devotees participated in this worship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X