ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂಬೈಯಲ್ಲಿ ಮಂಗಳಮುಖಿಯರ ಮೇಲೆ ಹಲ್ಲೆ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ

|
Google Oneindia Kannada News

ಮಂಗಳೂರು ಅಕ್ಟೋಬರ್ 29: ಮಂಗಳಮುಖಿಯರ ಮೇಲೆ ಮುಂಬಯಿಯಲ್ಲಿ ನಡೆದ ಹಲ್ಲೆ ಪ್ರಕರಣ ವನ್ನು ಖಂಡಿಸಿ ಮಂಗಳೂರಿನಲ್ಲಿ ಮಂಗಳ ಮುಖಿಯರು ರಸ್ತೆ ಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳಮುಖಿಯರ ಸೌಂದರ್ಯ ಸ್ಪರ್ಧೆ: ಪ್ರಥಮ ಸ್ಥಾನ ಪಡೆದ ದಾಂಡೇಲಿಯ ಸಂಜನಾಮಂಗಳಮುಖಿಯರ ಸೌಂದರ್ಯ ಸ್ಪರ್ಧೆ: ಪ್ರಥಮ ಸ್ಥಾನ ಪಡೆದ ದಾಂಡೇಲಿಯ ಸಂಜನಾ

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಂಗಳಮುಖಿಯರು ಹಲ್ಲೆ ಪ್ರಕರಣದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು . ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಕಲಿ ಮಂಗಳಮುಖಿಯರ ಅಸಲಿಯತ್ತು ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತನಕಲಿ ಮಂಗಳಮುಖಿಯರ ಅಸಲಿಯತ್ತು ಬಯಲು ಮಾಡಿದ ಸಾಮಾಜಿಕ ಕಾರ್ಯಕರ್ತ

ನಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಇದುವರೆಗೂ ನಾವು ಯಾರಲ್ಲೂ ಹೇಳಿಲ್ಲ. ಆದರೆ ಜನರು ಹಲ್ಲೆ ನಡೆಸುವ ಮಂಚೆ ಯೋಚಿಸಬೇಕು, ಅದು ಯಾವ ಕಾರಣಕ್ಕೆ ಆಗುತ್ತೆ. ಆದ ಆನ್ಯಾಯವನ್ನು ಅದನ್ನು ಕೇಳುವುದಕ್ಕೆ ಪೋಲೀಸ್ ಇಲಾಖೆ ಇದೆ. ಕಾನೂನು ಇದೆ. ಹಲ್ಲೆ ನಡೆಸಲು ಇವರು ಯಾರು? ಎಂದು ಪ್ರತಿಭಟನಾಕಾರರರು ಪ್ರಶ್ನಿಸಿದರು.

ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ತೃತೀಯ ಲಿಂಗಿ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದ ತೃತೀಯ ಲಿಂಗಿ

Transgenders stage protest in Mangaluru opposing atack on transgenders

ಆ ರೀತಿ ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು .ನಾವೂ ಭಾರತೀಯರು. ನಾವು ಹೊರಗಿನಿಂದ ಬಂದಿಲ್ಲ. ನಮಗೆ ನ್ಯಾಯ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

English summary
Members of Parivarthan staged protest in Mangaluru against assault on 3 transgenders in Mumbai .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X