ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯ ಸುಳ್ಯ ಭದ್ರಕೋಟೆ ಛಿದ್ರಗೊಳಿಸಲಿದೆಯೇ ಕಾಂಗ್ರೆಸ್‌?

|
Google Oneindia Kannada News

ಮಂಗಳೂರು, ಏಪ್ರಿಲ್ 30: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಬರುವ ಮೇ 12 ರಂದು ಮತದಾನಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಭರಾಟೆ ತಾರಕಕ್ಕೇರಿದೆ. ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಸೇರಿದಂತೆ ಇನ್ನಿತರ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ಅಬ್ಬರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಳ್ಯ ವಿಧಾನಸಭಾ ಕ್ಷೇತ್ರ ಈ ಬಾರಿ ಹೆಚ್ಚು ಕುತೂಹಲ ಮೂಡಿಸಿದೆ.

ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?

ಬಿಜೆಪಿ ಅಭ್ಯರ್ಥಿ ಅಂಗಾರ ಹಾಗೂ ಕಾಂಗ್ರೆಸ್ ನ ಡಾ. ರಘು ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸುಳ್ಯ ಸಾಕ್ಷಿಯಾಗಲಿದೆ. ಕಳೆದ 25 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಸುಳ್ಯದಲ್ಲಿ ಈ ಬಾರಿ ಶತಾಯಗತಾಯ ಖಾತೆ ತೆರೆಯಲು ಕಾಂಗ್ರೆಸ್ ಎಲ್ಲ ರೀತಿಯಲ್ಲೂ ರಂಗ ಸಜ್ಜು ಮಾಡಿಕೊಳ್ಳುತ್ತಿದೆ .

Tough fight for S Angara in Sullia constituency by Congress candidate Dr Raghu

ಬಿಜೆಪಿಯ ಅಂಗಾರ ಈ ಕ್ಷೇತ್ರದಿಂದ ನಿರಂತರ 5 ಬಾರಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. 1994 ರಿಂದ ಈ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯದ್ದೇ ಕಾರುಬಾರು. 5 ಬಾರಿ ಶಾಸಕರಾದರೂ ಅಂಗಾರ ಸುಳ್ಯ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅಂಗಾರ ಹಿಂದಿನಷ್ಟು ವರ್ಚಸ್ಸು ಉಳಿಸಿಕೊಂಡಿಲ್ಲ.

ಕಳೆದ 3 ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್ ನ ಡಾ. ರಘು ನಾಲ್ಕನೆಯ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ಸಿಗೆ ಇಲ್ಲಿ ಈ ಬಾರಿ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಇದೆ . ಡಾ. ರಘು ಅವರ ನಿರಂತರ ಸೋಲಿನ ಅನುಕಂಪವನ್ನು ಮತವಾಗಿ ಪರಿವರ್ತಿಸಲು ಕಾಂಗ್ರೆಸ್ ಈ ಬಾರಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ .

ಸುಳ್ಯ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರವನ್ನು ಗಮನಿಸುವುದಾದರೆ ಇಲ್ಲಿ 1,95,305 ಮತದಾರರಿದ್ದಾರೆ. ಈ ಪೈಕಿ ಒಕ್ಕಲಿಗ ಗೌಡ ಸಮುದಾಯದವರು 48,000 ದಷ್ಟು ಇದ್ದಾರೆ. ಬಿಲ್ಲವರು 20,000, ಮುಸ್ಲಿಮರು 23,400, ಕ್ರಿಶ್ಚಿಯನ್ನರು 12,000 ಇದ್ದಾರೆ.

ಪರಿಶಿಷ್ಟ ಜಾತಿ ಸಮುದಾಯದವರು 37,000 ದಷ್ಟಿದ್ದಾರೆ. ಪರಿಶಿಷ್ಟ ಪಂಗಡದವರ ಸಂಖ್ಯೆ ಸುಳ್ಯದಲ್ಲಿ 21,000 ದಷ್ಟಿದ್ದರೆ ತಮಿಳು ನಿರಾಶ್ರಿತರು 8,400 ರಷ್ಟಿದ್ದಾರೆ.

ಅದಲ್ಲದೆ ಈ ಕ್ಷೇತ್ರದಲ್ಲಿ ಬ್ರಾಹ್ಮಣರು, ಬಂಟ, ಕುಲಾಲ್, ವಿಶ್ವಕರ್ಮ, ಜೈನ, ಕ್ಷತ್ರೀಯ, ಸವಿತಾ ಸಮಾಜ, ಮಡಿವಾಳ, ಗೌಡ-ಸಾರಸ್ವತ ಬ್ರಾಹ್ಮಣ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಇಲ್ಲಿ 48,000 ಸಂಖ್ಯೆಯಲ್ಲಿರುವ ಒಕ್ಕಲಿಗ-ಗೌಡ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ.

2013ರಲ್ಲಿ ಡಾ. ರಘು ಬಿಜೆಪಿಯ ಅಂಗಾರ ಅವರ ವಿರುದ್ಧ ಕೇವಲ 1,273 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು . ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲುವ ಆಶಾಭಾವನೆ ಹೊಂದಿದೆ.

ಆದರೆ ಬಿಜೆಪಿ ಇಲ್ಲಿ ಗೆಲ್ಲುವ ಅಚಲ ವಿಶ್ವಾಸ ಹೊಂದಿದೆ .

ಕ್ಷೇತ್ರದಲ್ಲಿ ಬಿಎಸ್ಪಿಯ ರಘು , ಪಕ್ಷೇತರರಾಗಿ ಚಂದ್ರಶೇಖರ್ ಪಲ್ಲತಡ್ಕ ಹಾಗೂ ಸಂಜೀವ ಬಾಬುರಾವ್ ಕೂಡ ಕಣದಲ್ಲಿದ್ದಾರೆ. ಆದರೆ ಇಲ್ಲಿ ನೇರ ಸ್ಪರ್ಧೆ ಇರುವುದು ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ.

English summary
Karnataka Assembly Election 2018: Congress candidate Dr. Raghu hopefull of winning Sullia assembly constituency of Dakshina Kannada district. He is facing tough fight from BJP candidate S Angara, who is representing Sullia for the 5th time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X