ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ರೈಲ್ವೆ ಪ್ಲಾಟ್‌ ಫಾರಂನಲ್ಲಿ ಟಿಕ್‌ ಟಾಕ್ ಶೋ:ಇಬ್ಬರ ಬಂಧನ

|
Google Oneindia Kannada News

ಉಡುಪಿ, ಏಪ್ರಿಲ್ 16:ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಒಂದು ಕ್ರೇಜ್ ಆಗಿದೆ. ಇದು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗಿರದೆ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿದೆ.

ಇದೀಗ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಇಬ್ಬರು ಯುವಕರು ಪೊಲೀಸರ ಅತಿಥಿಯಾದ ಪ್ರಸಂಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಉಡುಪಿ ರೈಲ್ವೆ ನಿಲ್ದಾಣದ ಪ್ಲಾಟ್‌ ಫಾರಂನಲ್ಲಿ ರೈಲು ಬರುವ ಸಂದರ್ಭ ನೃತ್ಯ ಮಾಡುತ್ತ ಟಿಕ್ ಟಾಕ್ ವೀಡಿಯೊ ಮಾಡುತ್ತಿದ್ದ ಇಬ್ಬರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

'ಟಿಕ್ ಟಾಕ್' ಆ್ಯಪ್‌ ನಿಷೇಧಿಸುವಂತೆ ಕರ್ನಾಟಕ ಮಹಿಳಾ ಆಯೋಗ ಮನವಿ'ಟಿಕ್ ಟಾಕ್' ಆ್ಯಪ್‌ ನಿಷೇಧಿಸುವಂತೆ ಕರ್ನಾಟಕ ಮಹಿಳಾ ಆಯೋಗ ಮನವಿ

"ರೈಲು ಚಲಿಸುವ ಸಂದರ್ಭದಲ್ಲಿ, ರೈಲ್ವೆ ಟ್ರ್ಯಾಕ್ ಮೇಲೆ ವೀಡಿಯೋ ಮಾಡುವುದು ಅಪಾಯಕಾರಿ. ಈ ಸಾಹಸಕ್ಕೆ ಮುಂದಾದ ಹಲವಾರು ಮಂದಿ ಪ್ರಾಣ ಕಳೆದುಕೊಂಡ ಹತ್ತಾರು ಉದಾಹರಣೆ ಇದೆ. ಇಂತಹ ಸಾಹಸಕ್ಕೆ ಮುಂದಾದ ಹಲವರಿಗೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

tik tok video shoot:2 arrested in Udupi

ಈ ಹಿನ್ನೆಲೆಯಲ್ಲಿ ಈ ರೀತಿಯ ಚಟುವಟಿಕೆಗಳು ತಮಗೆ ಹಾನಿ ಮಾಡುವುದರ ಜೊತೆಗೆ ಇತರ ಪ್ರಯಾಣಿಕರಿಗೂ ಅನಾನುಕೂಲತೆ ಉಂಟು ಮಾಡುತ್ತವೆ. ಈ ರೀತಿ ವೀಡಿಯೋ ಮಾಡುವುದು ರೈಲ್ವೆ ಕಾಯ್ದೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ" ಎಂದು ರೈಲ್ವೆ ಇಲಾಖೆ ತಿಳಿಸಿದೆ.

 ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ಟಿಕ್‌ಟೊಕ್ ಆಪ್ ನಿಷೇಧಿಸಿ: ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಯುವಕರನ್ನು ಉಡುಪಿ ರೈಲ್ವೆ ಪೊಲೀಸರು ಉಡುಪಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿದ ನ್ಯಾಯಾಲಯವು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದೆ ಎಂದು ಹೇಳಲಾಗಿದೆ.

English summary
Udupi Railway police arrested 2 youth in connection to tik tok video shoot in railway platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X