ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳಕ್ಕೆ 5 ಮಿನಿ ಟೈಗರ್ಸ್ ಎಂಟ್ರಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 21: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಿಲಿಕುಳ ಜೈವಿಕ‌ ಉದ್ಯಾನವನದಲ್ಲಿ ಇದೀಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ವಿಶ್ವದಲ್ಲೇ ಅಪರೂಪ ಎಂಬಂತೆ ಪಿಲಿಕುಳದ ಹುಲಿ ರಾಣಿ 5 ಮರಿಗಳಿಗೆ ಜನ್ಮ ನೀಡಿದೆ.

Recommended Video

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | Oneindia Kannada

ಪುಟಾಣಿ ಹುಲಿಮರಿಗಳು ತಾಯಿಯ ಜೊತೆ ಆಟವಾಡುತ್ತಾ ಕುಣಿದಾಡುತ್ತಿದ್ದು, ಪಿಲಿಕುಳದ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾದಂತಾಗಿದೆ. ಇನ್ನು ‌ಹುಲಿ ಸಂತತಿಯಲ್ಲೇ ಒಮ್ಮೆಲೇ 5 ಮರಿಗಳಿಗೆ ಜನ್ಮ ನೀಡಿರುವುದು ಅಪರೂಪವೂ ಆಗಿದೆ. ಪಿಲಿಕುಳದಲ್ಲಿ ಒಟ್ಟು 13 ಹುಲಿಗಳಿದ್ದು, ರಾಣಿಯ 5 ಮುದ್ದಾದ ಮರಿಗಳ ಆಗಮನದಿಂದ ಹುಲಿಗಳ ಸಂಖ್ಯೆ‌ 18ಕ್ಕೆ ಏರಿದೆ.

 ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ರೆಟಿಕ್ಯುಲೇಟೆಡ್ ಹೆಬ್ಬಾವು ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ರೆಟಿಕ್ಯುಲೇಟೆಡ್ ಹೆಬ್ಬಾವು

ರಾಣಿ ಹುಲಿ 4 ಗಂಡು ಹಾಗೂ 1 ಹೆಣ್ಣು ಮರಿಗೆ ಜನ್ಮ ನೀಡಿದ್ದು, ಪಿಲುಕುಳದಲ್ಲಿ ಸಂಭ್ರಮವೋ ಸಂಭ್ರಮ... ಇನ್ನು ಪಿಲಿಕುಳ ಜೈವಿಕ ಉದ್ಯಾನವನ ಹುಲಿ, ಸಿಂಹ, ಕಾಡುಕೋಣ, ನೀರಾನೆ ಸೇರಿದಂತೆ ವಿವಿಧ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳ ನೆಲೆವೀಡಾಗಿದೆ. ಪ್ರಾಣಿ ವಿನಿಮಯ ಕಾಯ್ದೆಯಡಿಯಲ್ಲಿ ಹಲವು ಪ್ರಾಣಿಗಳು ಪಿಲಿಕುಳಕ್ಕೆ ಬಂದು, ಹಲವು ಪ್ರಾಣಿಗಳು ಇಲ್ಲಿಂದ ರಾಷ್ಟ್ರದ ವಿವಿಧ ಝೂಗಳಿಗೆ ವಿನಿಮಯವಾಗಿದೆ.

Tiger Gave Birth To Five Cubs In Pilikula Of Mangaluru

ಪಿಲಿಕುಳದ ಝೂನಲ್ಲಿ ಹುಲಿಗಳು ಅತ್ಯಾಕರ್ಷಕ ವಾಗಿದ್ದು, ಬೆಂಗಾಲ್ ಟೈಗರ್ಸ್ ಇಲ್ಲಿನ ಆಕರ್ಷಣೆಯಾಗಿದೆ. ಇದೀಗ 5 ಹುಲಿಮರಿಗಳು ಪಿಲಿಕುಳದಲ್ಲಿ ಜನ್ಮತಾಳಿದ್ದು, ಝೂ ಹಿರಿಮೆ, ಸಂಭ್ರಮ ಇಮ್ಮಡಿಯಾಗಿದೆ. ಹುಲಿಮರಿಗಳು ತಾಯಿಯ ಬೆಚ್ಚಗಿನ ಆರೈಕೆಯಲ್ಲಿದ್ದು, ಕೆಲ ತಿಂಗಳುಗಳ ಬಳಿಕ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗಲಿದೆ.

English summary
A festive atmosphere has created at Pilikula Biological Park in Mangaluru. Rare in the world, the tiger in Pilikula has given birth to 5 cubs,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X