ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ ಕಡಿತ ಇಲ್ಲ: ಯು ಟಿ ಖಾದರ್

|
Google Oneindia Kannada News

ದಕ್ಷಿಣ ಕನ್ನಡ, ಸಪ್ಟೆಂಬರ್ 27: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮಕ್ಕಳಿಗೆ ಸಂತಸದ ಸುದ್ದಿಯೊಂದು ಹರಿದು ಬಂದಿದೆ. ಪ್ರಸಕ್ತ ಸಾಲಿನ ದಸರಾ ರಜೆಯಲ್ಲಿ ಯಾವುದೇ ಕಡಿತವಿರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಶಾಲಾ ಮಕ್ಕಳ ದಸರಾ ರಜೆಯಲ್ಲಿ ಕಡಿತ ಇಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿದ್ದು ರಜೆ ಕಡಿತ ಮಾಡದಂತೆ ಸೂಚಿಸಿದ್ದೇನೆ .ಪ್ರತೀ ವರ್ಷದಂತೆ ಈ ಬಾರಿಯೂ ಪೂರ್ತಿ ರಜೆ ಇರಲಿದೆ.ಅಕ್ಟೋಬರ್ 7ರಿಂದ 21ರ ವರೆಗೆ ನಿಗದಿಯಾಗದಂತೆ ದಸರಾ ರಜೆ ಇರಲಿದೆ ಎಂದು ಅವರು ತಿಳಿಸಿದರು.

ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!ಶಾಲೆಗಳ ದಸರಾ ರಜೆ ಕಡಿತ : 14 ದಿನ ಮಾತ್ರ ರಜೆ!

ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವಾರು ದಿನ ಶಾಲೆಗೆ ರಜೆ ಘೋಷಸಿದ್ದ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ರಜೆ ಕಡಿತಕ್ಕೆ ಜಿಲ್ಲಾಡಾಳಿತ ಮುಂದಾಗಿತ್ತು. ಅದರೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು ರಜೆ ಕಡಿತ ಮಾಡದಂತೆ ಸೂಚಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

There will be no shortening of Dasara holidays in Dakshina kannada

ಮೂಲರಪಟ್ಣ ಸೇತುವೆ ಕುಸಿತ ಪ್ರದೇಶವನ್ನು ದುರಸ್ತಿ ಮಾಡುವ ಬದಲು ಆ ಜಾಗದಲ್ಲಿ ಹೊಸದಾದ ಸೇತುವೆಯನ್ನೇ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು ಈ ಬಗ್ಗೆ ಪಿಡಬ್ಲ್ಯೂಡಿ ಇಲಾಖೆಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಬಾರಿ ಮೈಸೂರು ದಸರೆ ಕಾಮಗಾರಿಗೆ ಬೇಕು ಬರೋಬ್ಬರಿ 27 ಕೋಟಿ!ಈ ಬಾರಿ ಮೈಸೂರು ದಸರೆ ಕಾಮಗಾರಿಗೆ ಬೇಕು ಬರೋಬ್ಬರಿ 27 ಕೋಟಿ!

ಗುರುಪುರದಲ್ಲಿ ಸೇತುವೆಯನ್ನು ಹೊಸದಾಗಿ ನಿರ್ಮಿಸಲು ಎನ್ ಎಚ್ಎ ಐ ನಿಂದ 35 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸಲಾಗುತ್ತಿದೆ. ಗುರುಪುರದ ನೂತನ ಸೇತುವೆ ನಿರ್ಮಾಣವಾಗುವವರೆಗೂ ಹಳೆಯ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶವಿದೆ ಎಂದು ಅವರು ಹೇಳಿದರು.

English summary
speaking to media persons in Mangaluru District incharge minister U T Khadar said that as per decision taken by education department there will be no shortening of Dasara holidays in Dakshina kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X