ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್-ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 18:ಮಂಗಳೂರಿನಲ್ಲಿ ಇವಿಎಂ ಮಷಿನ್ ಕೈಕೊಟ್ಟ ಘಟನೆ ವರದಿಯಾಗಿದೆ. ನಗರದ ಹೊರಭಾಗದ ವಾಮಂಜೂರು ತಿರುವೈಲ್ ವಾರ್ಡ್ ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದ್ದು, ಮಷಿನ್ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲೂಕಿನ ಸಾವ್ಯ ಮತಗಟ್ಟೆಯಲ್ಲಿಯೂ ಮತಯಂತ್ರ ಕೈ ಕೊಟ್ಟ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ 45 ನಿಮಿಷದ ಬಳಿಕ ಮತದಾನ ಆರಂಭವಾಗಿತ್ತು. ಈಗ ಪರ್ಯಾಯ ಮತಯಂತ್ರ ತಂದು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮತದಾನ ಮುಂದುವರೆದಿದೆ.

 ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು ಕರಾವಳಿಯಲ್ಲಿ ಹಸೆಮಣೆ ಏರುವ ಮುನ್ನ ಮತ ಚಲಾಯಿಸಿದ ವಧುಗಳು

ಈ ನಡುವೆ ಉಪ್ಪಿನಂಗಡಿಯಲ್ಲಿ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಮತಗಟ್ಟೆ ಮಠ ಹರ್ತಡ್ಕ ಸಂಖ್ಯೆ 41 ರಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.

There was a clash between Congress-SDPI activists in Uppinangady

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದ್ದು, 11 ಗಂಟೆ ಹೊತ್ತಿಗೆ ಶೇಕಡ 32.3 %ರಷ್ಟು ಮತದಾನ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 33.80%, ಮೂಡಬಿದ್ರೆ ವ್ಯಾಪ್ತಿಯಲ್ಲಿ 31.65%, ಮಂಗಳೂರು ಉತ್ತರದಲ್ಲಿ ಶೇಕಡ 31.91%, ಮಂಗಳೂರು ದಕ್ಷಿಣದಲ್ಲಿ 29.63%, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 31.33%, ಬೆಳ್ತಂಗಡಿಯಲ್ಲಿ 33.89%, ಪುತ್ತೂರಿನಲ್ಲಿ 33.16%, ಸುಳ್ಯದಲ್ಲಿ 33.65% ರಷ್ಟು ಮತದಾನ ದಾಖಲಾಗಿದೆ.

English summary
Lok Sabha Election 2019:There was a clash between Congress-SDPI activists in Uppinangady.Now situation is under controled by police officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X