ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ಹಯ್ಯಾ ಹತ್ಯೆ ಆರೋಪಿಗಳಿಗೂ ಇಸ್ಲಾಂಗೂ ಸಂಬಂಧವಿಲ್ಲ: ಯುಟಿ ಖಾದರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಜುಲೈ 1: "ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಾ ಭೀಕರ ಹತ್ಯೆ ನಡೆಸಿದ ಆರೋಪಿಗಳಿಗೂ ಇಸ್ಲಾಂಗೂ ಸಂಬಂಧ ಇಲ್ಲ. ಇಸ್ಲಾಂ ಅರಿತವ, ಪ್ರವಾದಿ ಬಗ್ಗೆ ತಿಳಿದವ ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ" ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಯು. ಟಿ. ಖಾದರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಉದಯಪುರದ ಕೊಲೆ ಆರೋಪಿಗಳನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಇಡೀ ದೇಶದ ಜನ ಅವರನ್ನು ಖಂಡಿಸಿದೆ. ಅವರಿಗೆ ತಕ್ಷಣ ಗಲ್ಲು ಶಿಕ್ಷೆಯನ್ನು ನೀಡಬೇಕು. ಆ ಕೊಲೆ ಗಡುಕರಿಗೂ ಇಸ್ಲಾಂಗೂ ಯಾವುದೇ ಸಂಬಂಧ ಇಲ್ಲ. ನೈಜ ಮುಸಲ್ಮಾನ ಈ ರೀತಿ ಮಾಡಲು ಸಾಧ್ಯವೇ ಇಲ್ಲ" ಎಂದರು.

ಮದರಾಸದಿಂದ ಬರುವಾಗ ಹಲ್ಲೆ; ಮಂಗಳೂರು ಬಾಲಕ ಹೇಳಿದ್ದು ಕಟ್ಟುಕತೆ!ಮದರಾಸದಿಂದ ಬರುವಾಗ ಹಲ್ಲೆ; ಮಂಗಳೂರು ಬಾಲಕ ಹೇಳಿದ್ದು ಕಟ್ಟುಕತೆ!

ರಾಜಸ್ಥಾನದ ಉದಯಪುರದಲ್ಲಿ ಎಂಟು ವರ್ಷದ ಮಗ ನೂಪುರ್ ಶರ್ಮಾರನ್ನು ಬೆಂಬಲಿಸಿ ವ್ಯಾಟ್ಸಾಪ್‌ ಸ್ಟೇಟಸ್ ಪೋಸ್ಟ್ ಮಾಡಿದ್ದ. ಆದರೆ, ಟೈಲರ್ ಆಗಿದ್ದ ಕನ್ಹಯ್ಯಾ ಇದನ್ನು ಪೋಸ್ಟ್‌ ಮಾಡಿದ್ದಾನೆ ಎಂದು ತಿಳಿದ ದುಷ್ಕರ್ಮಿಗಳು ಹಾಡುಹಗಲಲ್ಲೇ ಕತ್ತಿಯಿಂದ ಆತನ ಶಿರಚ್ಛೇದ ಮಾಡಿದ್ದರು, ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಇದೇ ರೀತಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.

 ಜಿಎಸ್‌ಟಿ ಹಣವನ್ನು ತಾಲಿಬಾನ್‌ಗೆ ಕೊಟ್ಟಿದ್ದೇಕೆ?

ಜಿಎಸ್‌ಟಿ ಹಣವನ್ನು ತಾಲಿಬಾನ್‌ಗೆ ಕೊಟ್ಟಿದ್ದೇಕೆ?

ಕಾಂಗ್ರೆಸ್ ಮುಸ್ಲಿಂ ತುಷ್ಠೀಕರಣ ಮಾಡಿದ ಹಿನ್ನಲೆಯಲ್ಲಿ ಈ ರೀತಿ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಬಿಜೆಪಿ ಟೀಕೆಯನ್ನು ಅಲ್ಲಗಳೆದ ಖಾದರ್, "ಈ ಟೀಕೆಯನ್ನು ಒಪ್ಪುವಂತಹದಲ್ಲ. ಕಾಂಗ್ರೆಸ್ ಬಿ. ಆರ್. ಅಂಬೇಡ್ಕರ್ ಬರೆದ ಸಂವಿಧಾನ ಪ್ರಕಾರ ಆಡಳಿತ ಮಾಡಿದೆ. ಸಂವಿಧಾನ ನೀಡಿದ ಸವಲತ್ತುನ್ನು ನೀಡಿದರೆ ಅದು ತುಷ್ಠೀಕರಣ ಆಗಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರವೂ ಮಾಡಿದ್ದು ಅದನ್ನೇ ಆಗಿದೆ. ರಾಜ್ಯ ಸರ್ಕಾರಗಳಿಗ ಕೊಡಬೇಕಾದ ಜಿಎಸ್‌ಟಿ ಹಣವನ್ನು ಕೊಡದೇ ತಾಲಿಬಾನಿಗಳಿಗೆ ನೂರಾರು ಕೋಟಿ ರೂಪಾಯಿ ಹಣ ನೀಡಿದ್ದು ಯಾಕೆ?. ಅದೇ ಹಣವನ್ನು ದೇಶದ ಸರಕಾರಗಳಿಗೆ ಯಾಕೆ ನೀಡಲ್ಲ" ಎಂದು ಯು. ಟಿ. ಖಾದರ್ ಪ್ರಶ್ನೆ ಮಾಡಿದ್ದಾರೆ.

ರಾಜಸ್ಥಾನ ಕೋಮು ಗಲಭೆ ಸರಣಿ: ಬಿಜೆಪಿಗೆ ಲಾಭ, ಕಾಂಗ್ರೆಸ್‌ಗೆ ನಷ್ಟರಾಜಸ್ಥಾನ ಕೋಮು ಗಲಭೆ ಸರಣಿ: ಬಿಜೆಪಿಗೆ ಲಾಭ, ಕಾಂಗ್ರೆಸ್‌ಗೆ ನಷ್ಟ

 ಉಸ್ತುವಾರಿ ಸಚಿವರು ಸಭೆ ಕರೆಯಬೇಕು

ಉಸ್ತುವಾರಿ ಸಚಿವರು ಸಭೆ ಕರೆಯಬೇಕು

ಇನ್ನು ಮಂಗಳೂರಿನಲ್ಲಿ ಸುರಿಯುತ್ತಿರುವ ಮಹಾಮಳೆಯ ಬಗ್ಗೆ ಮಾತನಾಡಿದ ಯು. ಟಿ. ಖಾದರ್, "ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಜಿಲ್ಲೆಯ ವಿಪತ್ತು ನಿರ್ವಹಣಾ ತಂಡದ ಸಭೆ ಕರೆಯಬೇಕು. ಮಳೆ ಬರುವ ಮುಂಚೆ ಮುಂಜಾಗ್ರತಾ ಮಿಟಿಂಗ್ ಆಗಿದ್ದರೂ, ಮಳೆ ಬಂದ ಬಳಿಕದ ಸ್ಥಿತಿಯ ಬಗ್ಗೆ ಸಭೆ ಕರೆಯಬೇಕು. ಗುರುವಾರ ಕೇವಲ ಎರಡು ಗಂಟೆ ವಿಪರೀತ ಮಳೆ ಸುರಿದ ಕಾರಣಕ್ಕಾಗಿ ನೆರೆ ಪರಿಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ 1094 ಮಿಲಿ ಮೀಟರ್ ಸುರಿದಿದೆ. ಕೇವಲ ಉಳ್ಳಾಲದಲ್ಲಿ 144 ಮಿಲಿ ಮೀಟರ್ ಮಳೆಯಾಗಿದೆ. ಪ್ರಕೃತಿ ವಿಕೋಪ ನಮ್ಮ‌ ಕೈಯಲ್ಲಿ ಇಲ್ಲ, ಆದರೆ ಅದು ಆದಾಗ ನಿರ್ವಹಣೆ ಮಾಡುವುದು ಜಿಲ್ಲಾಡಳಿತ ಮತ್ತು ಸರಕಾರದ ಕೈಯಲ್ಲಿ ಇದೆ" ಎಂದರು.

 ಗ್ರಾಮದ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚನೆಗೆ ಸೂಚನೆ

ಗ್ರಾಮದ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚನೆಗೆ ಸೂಚನೆ

"ಮಳೆಯ ಹಿನ್ನಲೆಯಲ್ಲಿ ಉಳ್ಳಾಲ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ರೀತಿ, ಗ್ರಾಮ ವ್ಯಾಪ್ತಿಯಲ್ಲೂ ಟಾಸ್ಕ್ ಪೋರ್ಸ್ ರಚನೆಗೆ ಸೂಚನೆ ನೀಡಿದ್ದೇನೆ. ಉಳ್ಳಾಲದಲ್ಲಿ ಮಳೆಗೆ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ನಡೆದಿದೆ. ಈ ಬಗ್ಗೆ ಎನ್‌ಐಟಿಕೆಯ ಭೂ ವಿಜ್ಞಾನ ಇಲಾಖೆಗೆ ಅಧ್ಯಯನ ಮಾಡುವುದಕ್ಕೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ" ಎಂದು ಖಾದರ್ ಹೇಳಿದ್ದಾರೆ.

 ಸಂತ್ರಸ್ತರಿಗೆ 5 ಲಕ್ಷ ರೂ ಪರಿಹಾರ

ಸಂತ್ರಸ್ತರಿಗೆ 5 ಲಕ್ಷ ರೂ ಪರಿಹಾರ

"ಮಳೆಯಿಂದ ಉಳ್ಳಾಲದಲ್ಲಿ ಮಳೆಗೆ 27 ಮನೆಗಳಿಗೆ ಹಾನಿಯಾಗಿದೆ. ಆ ಮನೆಯವರಿಗೆ ಶನಿವಾರ ಸಂಜೆ ಒಳಗೆ ಹತ್ತು ಸಾವಿರ ಹಣ ನೀಡಲು ಸೂಚಿಸಿದ್ದೇ‌ನೆ.‌ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಆ ಮನೆಗಳಿಗೆ ತಲಾ 95 ಸಾವಿರ ಹಣ ಪರಿಹಾರ ನೀಡಲಾಗುತ್ತದೆ. ಐದು ಮನೆಗಳು ಸಂಪೂರ್ಣ ಹಾನಿಯಾಗಿದ್ದು,ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ" ಎಂದು ಯುಟಿ ಖಾದರ್ ಹೇಳಿದ್ದಾರೆ.

"ಉಳ್ಳಾಲದಲ್ಲಿ ಕಡಲ್ಕೊರೆತ ನಿರ್ವಹಣೆಗೆ ಸರ್ಕಾರ ವಿಫಲವಾಗಿದೆ. ಉಳ್ಳಾಲದ ಕೈಕೋ, ಸುಭಾಶ್ ನಗರ, ಕೋಡಿ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ಇಲ್ಲ. ಸೋಮೇಶ್ವರ-ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತಕ್ಕೆ ಕಲ್ಲು ಹಾಕುವ ಕೆಲಸ ಪೂರ್ತಿಯಾಗಿಲ್ಲ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ" ಎಂದು ಯುಟಿ ಖಾದರ್ ಹೇಳಿದ್ದಾರೆ.

English summary
There is no any link to Islam religion over Kanhaiya murder in Udaipur. Congress leader UT Khader said at Managaluru., Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X