ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ: ಹುಲಿ ಮುಟ್ಟಿದರೆ ಆಪತ್ತು! ಕಾಪು ಪಿಲಿಕೋಲದ ವೈಭವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಅಲ್ಲಿ ಸಾವಿರಾರು ಮಂದಿ ನೆರೆದಿದ್ದರು, ಎಲ್ಲರ ಮನಸ್ಸಲ್ಲೂ ಭಯ ಮಿಶ್ರಿತ ಭಕ್ತಿ ಇತ್ತು. ಹುಲಿ ವೇಷಧಾರಿ ಆವೇಶಭರಿತವಾಗಿ ಬೆನ್ನಟ್ಟಿ ಬರುವಾಗ ಓಟಕ್ಕಿತ್ತು. ಮತ್ತೆ ದೂರದಲ್ಲಿ ನಿಂತು ಹುಲಿ ವೇಷಧಾರಿ ಬರೋದನ್ನೇ ಕಾಯುತ್ತಿದ್ದರು. ಇಂತಹ ದೃಶ್ಯ ಕಂಡುಬಂದಿದ್ದು ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ ದೇವಸ್ಥಾನದಲ್ಲಿ. ಎರಡು ವರ್ಷಗಳಿಗೊಮ್ಮೆ ನಡೆಯುವ ಪಿಲಿ(ಹುಲಿ) ಕೋಲ ಈ ಬಾರಿಯೂ ಭಕ್ತರನ್ನು ರೋಮಾಂಚಕಗೊಳಿಸಿದೆ.

ಪರಶುರಾಮ ಸೃಷ್ಠಿಯ ತುಳುನಾಡು ದೈವಾರಾಧನೆಯ ನೆಲೆವೀಡು. ಇಲ್ಲಿ ದೇವರಿಗಿಂತ ಜಾಸ್ತಿ ಜನ ದೈವಗಳನ್ನು ಆರಾಧಿಸುತ್ತಾರೆ. ಪೃಕೃತಿಯ ಆರಾಧಕರಾಗಿರುವ ತುಳುವರು ಪೃಕೃತಿಯ ಶಕ್ತಿಗಳನ್ನೇ ದೈವಗಳಾಗಿ ನಂಬಿ ಆರಾಧಿಸುತ್ತಿದ್ದಾರೆ. ಅಂತಹ ಆರಾಧನೆಗಳಲ್ಲಿ ಅತೀ ವಿಶೇಷವಾಗಿರೋದು ಉಡುಪಿ ಜಿಲ್ಲೆಯ ಕಾಪು ಪಿಲಿ ಕೋಲ. ತುಳುವಿನಲ್ಲಿ ಪಿಲಿ ಅಂದರೆ ಹುಲಿ ಎಂದರ್ಥ. ಇಲ್ಲಿ ಹುಲಿಯನ್ನು ದೈವವಾಗಿ ಕಂಡು ಆರಾಧಿಸೋದಕ್ಕೂ ಪುರಾಣ ಹಿನ್ನೆಲೆಯಿದೆ.

ಕಾಪು ಸೀಮೆಯನ್ನು ಆಳುತ್ತಿದ್ದ ಭೈರರಸು ತನ್ನ ಅರಮನೆಯ ಪಂಜರದಲ್ಲಿ ಹುಲಿಯನ್ನು ಸಾಕುತ್ತಿದ್ದರು. ಕಾಲಕ್ರಮೇಣ ಹುಲಿಯನ್ನು ಸಾಕಲು ಕಷ್ವವಾದ ಸಂಧರ್ಭದಲ್ಲಿ ತನ್ನ ಸೀಮೆ ಪೊರೆಯುವ ಮಾರಿಯಮ್ಮನ ಅನುಮತಿ ಕೇಳಿ ಹುಲಿಯನ್ನು ಕಾಡಿಗೆ ಬಿಡುವ ಆಲೋಚನೆ ಮಾಡಿದ. ಆ ದಿನ ರಾತ್ರಿ ರಾಜನ ಕನಸಲ್ಲಿ ಬಂದ ಮಾರಿಯಮ್ಮ ಆ ಹುಲಿ ದೈವಾಂಶ ಸಂಭೂತವಾಗಿದ್ದು, ತನ್ನ ದೇವಸ್ಥಾನದ ಬಲಭಾಗದಲ್ಲಿರುವ ಸ್ಥಳದಲ್ಲಿ ಹುಲಿಗಳಿಗೊಂದು ಆಲಯ ಕಟ್ಟಿಸಿ ಅವುಗಳನ್ನೂ ಆರಾಧಿಸಲು ಕರೆ ಕೊಡುತ್ತಾಳೆ. ಇದರಂತೇ ಪಿಲಿಭೂತವಾಗಿ ನಂಬಲಾಗಿದೆ ಎಂಬ ಪುರಾಣ ಹಿನ್ನೆಲೆಯಿದೆ.

The Tiger Is Terribly Touched! The Glory Of Kaup Pili Kola

ಇತಿಹಾಸ ಪ್ರಸಿದ್ಧ ಕಾಪು ಪಿಲಿಭೂತ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಪಿಲಿ ಕೋಲ ಆರಂಭವಾಗಿ ಸತತ ಐದು ಗಂಟೆಗಳ ಕಾಲ ನಡೆಯುತ್ತದೆ. ಪಿಲಿ ದೈವ ಐದು ಗಂಟೆಗಳ ಕಾಲ ಕಾಪು ಮಾರಿಗುಡಿ ಪರಿಸರದಲ್ಲಿ ಸುತ್ತಾಡಿ, ಬೇಟೆಯಾಡಿ, ಮುಟ್ಟಲು ಬರುವ ಅಪಾರ ಸಂಖ್ಯೆಯ ಜನರನ್ನು ಚದುರಿಸುತ್ತದೆ. ಐದು ಗಂಟೆಗಳ ಧೀರ್ಘ ಸುತ್ತಾಟದ ಬಳಿಕ ಹುಲಿ ಮಾರಿಯಮ್ಮ ಮುಂದೆ ಬಂದು‌ನಿಂತ ಬಳಿಕ ಪಿಲಿ ಕೋಲ ಮುಕ್ತಾಯ ಆಗುತ್ತದೆ.

The Tiger Is Terribly Touched! The Glory Of Kaup Pili Kola

ಈ ಬಗ್ಗೆ ಮಾಹಿತಿ ನೀಡಿದ ಕಾಪು ಗುತ್ತಿನಾರ್ ರಮೇಶ್ ಶೆಟ್ಟಿ ಭೈರ ಗುತ್ತು, ಈ ಹಿಂದೆ ಕಾಪು ಜಾತ್ರೆ ಆರಂಭವಾಗಿ ಒಂಭತ್ತು ದಿನಗಳ ಬಳಿಕ ಪಿಲಿ ಕೋಲ‌ ನಡೆಯುತ್ತಿತ್ತು. ಆದರೆ ಕಾಲ‌ಕ್ರಮೇಣ ಮಾರ್ಪಾಟುಗಳಾಗಿ ಈಗ ಜಾತ್ರೆ ಆರಂಭವಾದ ಐದು ದಿನಗಳ ಬಳಿಕ ನಡೆಯುತ್ತಿದೆ.

The Tiger Is Terribly Touched! The Glory Of Kaup Pili Kola

ಈ ಹಿಂದೆ ಈ ಪಿಲಿಕೋಲವನ್ನು ನಿಲ್ಲಿಸಲು ಕಾರ್ಕಳ ಕೋರ್ಟ್ ಕೂಡಾ ಆದೇಶ ನೀಡಿತ್ತು. ಆದರೆ ಆದೇಶ ನೀಡಿದ ನ್ಯಾಯಾಧೀಶರಿಗೇ ಸಮಸ್ಯೆಗಳಾದಾಗ ಎರಡು ವರ್ಷಗಳಿಗೊಮ್ಮೆ ನಡೆಸಲು ತೀರ್ಮಾನಿಸಲಾಯಿತು. ಆ ಬಳಿಕ ಎಲ್ಲರ ಕೂಡುವಿಕೆಯಲ್ಲಿ ಈಗ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿದೆ ಅಂತಾ ಮಾಹಿತಿ ನೀಡಿದ್ದಾರೆ.

The Tiger Is Terribly Touched! The Glory Of Kaup Pili Kola

ಪಿಲಿಭೂತದ ಆರಾಧನೆ
ಇನ್ನು ಬಾಲಕೃಷ್ಣ ಶೆಟ್ಟಿ ದೊರಕಳಗುತ್ತು ಮಾತನಾಡಿ, ಕಳೆದ ವರ್ಷ ಕೊರೊನಾ ಕಾರಣದಿಂದ ಪಿಲಿಕೋಲ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿ ವಿಜೃಂಭಣೆಯಿಂದ ಕೋಲ ನಡೆದಿದೆ. ಈ ಕೋಲ ಅವಿಭಜಿತ ಜಿಲ್ಲೆಗಳಲ್ಲಿ ಅತೀ ಪ್ರಸಿದ್ಧವಾಗಿದೆ. ಈ ಕೋಲ ನೋಡಲೆಂದೇ ಹತ್ತಿರದ ಜಿಲ್ಲೆಗಳಿಂದ ಜನ ಬರುತ್ತಾರೆ. ಹುಲಿ ಭೂತವನ್ನು ಮುಟ್ಟಬಾರದೆಂಬ ಪ್ರತೀತಿ ಇರೋದರಿಂದ ಅಟ್ಟಿಸಿಕೊಂಡು ಬರುವ ದೈವದಿಂದ ತಪ್ಪಿಸಿಕೊಂಡು ಜನ ಓಡುವುದೇ ಈ ಪಿಲಿ ಭೂತದ ಆಕರ್ಷಣೆ ಅಂತಾ ಹೇಳಿದ್ದಾರೆ.

The Tiger Is Terribly Touched! The Glory Of Kaup Pili Kola

ಒಟ್ಟಿನಲ್ಲಿ ದೈವಾರಾಧನೆಯ ಮೂಲಕ ವಿಸ್ಮಯಗಳ ಪ್ರಂಪಚವಾಗಿರುವ ತುಳುನಾಡಿನಲ್ಲಿ ಎಲ್ಲರ ಹುಬ್ಬೇರಿಸುವ ಪಿಲಿಭೂತದ ಆರಾಧನೆ ನಡೆದಿದೆ. ಹಲವು ಸಂಶೋಧನೆ ಗಳಿಗೆ ನಾಂದಿಯಾಗಿರುವ ಈ ಅದ್ಭುತ ಆಚರಣೆ ಈ ಬಾರಿ ನಿರ್ವಿಘ್ನವಾಗಿ ನಡೆದಿದ್ದು, ಪಿಲಿಕೋಲ ವನ್ನು ಈ ಬಾರಿಯೂ ಸಾವಿರಾರು ಜನ ಕುತೂಹಲದಿಂದ ಕಂಡಿದ್ದಾರೆ.

English summary
The Pili (tiger) kola, Held Every Two Years, Has Thrilled Devotees This Time Too. Know more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X