ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧಾರ್ಥ ನಾಪತ್ತೆಯಾದ ಜಾಗದಿಂದ ಒಂದೇ ಕಿ.ಮೀ ದೂರದಲ್ಲಿ ಅರಬ್ಬೀ ಸಮುದ್ರ

|
Google Oneindia Kannada News

Recommended Video

V G Siddhartha : ಸಿದ್ದಾರ್ಥ ನಾಪತ್ತೆಯಾದ ಸ್ಥಳದಿಂದ ಒಂದೇ ಕಿಮೀ ದೂರದಲ್ಲಿದೆ ಅರಬ್ಬೀ ಸಮುದ್ರ |Oneindia Kannada

ಮಂಗಳೂರು, ಜುಲೈ 30: ಕಾಫೀ ಡೇ ಮಾಲೀಕ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಅಳಿಯ ವಿ ಜಿ ಸಿದ್ಧಾರ್ಥ ನಾಪತ್ತೆಯಾಗಿರುವ ಪ್ರಕರಣದ ನಿಗೂಢತೆ ಮುಂದುವರಿದಿದೆ.

ಮಂಗಳೂರು ಹೊರವಲಯದ ಕಲ್ಲಾಪು - ಹೆಕ್ಕೂರು ವ್ಯಾಪ್ತಿಯ ನೇತ್ರಾವತಿ ನದಿ ಸೇತುವೆಯ ಸ್ಥಳದಿಂದ ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಸ್ಥಳ ಶೋಧ ಕಾರ್ಯಕ್ಕೆ ಅತ್ಯಂತ ಸವಾಲಿನ ಜಾಗ ಎನ್ನುವುದು ಸ್ಥಳೀಯರ ಅಭಿಪ್ರಾಯ.

CCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿCCD Owner VG Siddhartha Missing LIVE: ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ: ಕ್ಷಣ-ಕ್ಷಣದ ಮಾಹಿತಿ

ಯಾಕೆಂದರೆ, ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಅರಬ್ಬೀ ಸಮುದ್ರವಿದ್ದು, ನೀರಿನ ಒಳಸುಳಿವು ತುಂಬಾ ಹೆಚ್ಚಾಗಿರುತ್ತದೆ. ಜೊತೆಗೆ, ಸಮುದ್ರಕ್ಕೆ ಹತ್ತಿರದ ಪ್ರದೇಶವಾಗಿರುವುದರಿಂದ (ಅಳಿವೆಬಾಗಿಲು) , ನೀರಿನ ಹರಿವು ತೀರಾ ರಭಸದಿಂದ ಕೂಡಿರುತ್ತದೆ.

The Place Where VG Siddhartha Is Missing Just One KM Away From Arabian Sea

ಕೆಎ-03-ಎನ್‌ಸಿ-2592 ನೊಂದಣಿಯ ಇನ್ನೋವಾ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸಿದ್ಧಾರ್ಥ ಪ್ರಯಾಣಿಸುತ್ತಿದ್ದರು. ಸುಮಾರು ಇನ್ನೂರಕ್ಕೂ ಹೆಚ್ಚು ಜನ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಹಿಂದೆ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಎಷ್ಟೇ ಶೋಧ ನಡೆಸಿದರೂ, ಇಬ್ಬರ ಶವ ಪತ್ತೆಯಾಗಿರಲಿಲ್ಲ. ಕೊನೆಗೆ, ಮಂಗಳೂರಿನ ಬೆಂಗ್ರೆ ಮುಳುಗುತಜ್ಞರ ತಂಡ ಆಗಮಿಸಿ ಶವವನ್ನು ಮೇಲೆಕ್ಕೆತ್ತಿತ್ತು.

ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?ಕಾಫಿ ಡೇ ಸಿದ್ಧಾರ್ಥ ನಾಪತ್ತೆ: ಕೊನೆಯ ಇ- ಮೇಲ್‌ನಲ್ಲೇನಿದೆ?

ಬೆಂಗ್ರೆ ತಂಡ. ವೃತ್ತಿಪರ ಈಜುಗಾರರು, ಎನ್ ಡಿ ಆರ್ ಎಫ್ ಜೊತೆ ಸೇರಿ ಶೋಧಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.

English summary
The Place Where VG Siddhartha Is Missing Just One KM Away From Arabian Sea. Businessman and son-in-law of former CM of Karnataka Siddhartha is missing since July 29th night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X