ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟೀಲಿನಲ್ಲಿ ಕಾಣಿಸಿಕೊಂಡ ಅತಿ ಅಪರೂಪದ ಕೃಷ್ಣ ಸರ್ಪ!

|
Google Oneindia Kannada News

ಮಂಗಳೂರು, ಮೇ 03: ಮಂಗಳೂರಿನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪವಾಡ ನಡೆದಿದೆ. ಕ್ಷೇತ್ರದ ರಥಬೀದಿಯಲ್ಲಿ ಶ್ರೀ ಕೃಷ್ಣ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣ ಸರ್ಪ ಹಾವು ಕಾಣಿಸಿಕೊಂಡಿದೆ. ಇದು ನೆರೆದವರಲ್ಲಿ ಆಶ್ಚರ್ಯ ಮೂಡಿಸಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಿಂದ ದೇವಾಲಯದ ರಥಬೀದಿಯಲ್ಲಿ ಶ್ರೀ ಕೃಷ್ಣ ಯಕ್ಷಗಾನ ಪ್ರಸಂಗವನ್ನು ಆಯೋಜಿಸಲಾಗಿತ್ತು.ತಡರಾತ್ರಿ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದ ಸಂಧರ್ಭ ರಂಗಸ್ಥಳದ ಬಳಿಗೆ ಕೃಷ್ಣ ಸರ್ಪ ಹಾವು ಬಂದಿದೆ. ಕೃಷ್ಣ ಸರ್ಪ ಅತೀ ಚಿಕ್ಕ ಹಾವಾಗಿದ್ದು, ಅತೀ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

The Krishna serpent appears in Kateel

ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...

ಯಕ್ಷಗಾನದ ಗದ್ದಲದ ನಡುವೆಯೇ ಶ್ರೀ ಕೃಷ್ಣ ಪ್ರಸಂಗದ ವೇಳೆಯಲ್ಲೇ ಹಾವು ಕಾಣಿಸಿಕೊಂಡಿದ್ದು, ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿದೆ. ಕೊನೆಗೆ ಕೃಷ್ಣ ಸರ್ಪವನ್ನು ಸೆರೆ ಹಿಡಿದು ಕಟೀಲು ದೇವಳದ ಗಂಧ ಸಂಪ್ರೋಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ‌. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

The Krishna serpent appears in Kateel
English summary
A miracle happened in Sri Kateelu Durgaparameshwari temple at Mangaluru . During Yakshagana program Krishna serpent appeared near Yakshagana stage . Devotees are also surprised for this miracle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X