ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾವಿರ ಕಂಬದ ಬಸದಿಯಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 28: ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ಆಳ್ವಾಸ್ ಸಾಂಸ್ಕೃತಿಕ ವೈಭವವು ಮೂಡುಬಿದಿರೆಯ ಸಾವಿರ ಕಂಬದ ಬಸದಿಯ ಚೆನ್ನ ಬೈರಾದೇವಿ ಮಂಟಪದಲ್ಲಿ ಬುಧವಾರ ರಾತ್ರಿ ನಡೆಯಿತು. ಮೂಡಬಿದ್ರೆಯ ಜೈನ ಮಠದ ಧವಳತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಮೈಸೂರಿಗರನ್ನು ಸಂಭ್ರಮದಲ್ಲಿ ತೇಲಿಸಿದ ಓಪನ್ ಸ್ಟ್ರೀಟ್ ಫೆಸ್ಟಿವಲ್ಮೈಸೂರಿಗರನ್ನು ಸಂಭ್ರಮದಲ್ಲಿ ತೇಲಿಸಿದ ಓಪನ್ ಸ್ಟ್ರೀಟ್ ಫೆಸ್ಟಿವಲ್

ಮಂಟಪ ಪ್ರಭಾಕರ ಉಪಾಧ್ಯ ನಿರ್ದೇಶನದಲ್ಲಿ ಸಂಪೂರ್ಣ ರಾಮಾಯಣ ಯಕ್ಷಗಾನ ನೃತ್ಯ ರೂಪಕ ಪ್ರದರ್ಶನಗೊಂಡಿತು.150 ವಿದ್ಯಾರ್ಥಿ ಕಲಾವಿದರು ಚೆನ್ನ ಬೈರಾದೇವಿ ಮಂಟಪದಲ್ಲಿ ಇದೇ ಮೊದಲ ಬಾರಿಗೆ ಪ್ರದರ್ಶನ ನೀಡಿದ್ದು, ನೋಡುಗರ ಶ್ಲಾಘನೆಗೆ ಪಾತ್ರವಾಯಿತು.

The Alva's cultural splendor was held at Thousand Pillared Basadi in Moodbidri

ಜೈನಮಠದ ಮಠಾಧೀಶ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರನ್ನು ಈ ಸಂದರ್ಭದಲ್ಲಿ ಮಠದ ಪರವಾಗಿ ಸನ್ಮಾನಿಸಿದರು.

The Alva's cultural splendor was held at Thousand Pillared Basadi in Moodbidri

ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ ಎಂ. ಸಹಿತ ಗಣ್ಯರು, ನೂರಾರು ಪ್ರವಾಸಿಗಳು ಉಪಸ್ಥಿತರಿದ್ದರು.

English summary
The Alva's cultural splendor was held at the Thousand Pillared Basadi in Moodbidri, on the occasion of World Tourism Day. This program was organised by Dhawalatra Jainakashi Trust and the Alva's Education Foundation in Moodabidri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X