ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: 10 ರೂಪಾಯಿ ನಾಣ್ಯ ಕೊಟ್ಟರೆ ದಬಾಯಿಸ್ತಾರೆ..!

ನೀವು ಮಂಗಳೂರಲ್ಲಿರುವ ಹೊಟೇಲ್, ತರಕಾರಿ ಅಂಗಡಿಗೋ ಹೋಗಿ ಹತ್ತು ರೂಪಾಯಿ ನಾಣ್ಯ ಕೊಟ್ಟರೆ ವ್ಯಾಪಾರಸ್ಥರು ಆ ನಾಣ್ಯಗಳನ್ನ ವಾಪಸ್ ನೀಡುತ್ತಾರೆ. ಬಸ್ ಗಳಲ್ಲಿ ಸಹ ಇಂತಹದ್ದೇ ಪರಿಸ್ಥಿತಿ. ಕಾರಣ ನಾಣ್ಯ ಚಲಾವಣೆಯಲ್ಲಿಲ್ಲ ಅಂತಾರೆ..!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 28: ನೀವು ಮಂಗಳೂರಲ್ಲಿರುವ ಹೊಟೇಲ್, ತರಕಾರಿ ಅಂಗಡಿಗೋ ಹೋಗಿ ಹತ್ತು ರೂಪಾಯಿ ನಾಣ್ಯ ಕೊಟ್ಟರೆ ವ್ಯಾಪಾರಸ್ಥರು ಆ ನಾಣ್ಯಗಳನ್ನ ವಾಪಸ್ ನೀಡುತ್ತಾರೆ. ಬಸ್ ಗಳಲ್ಲಿ ಸಹ ಇಂತಹದ್ದೇ ಪರಿಸ್ಥಿತಿ. ಕಾರಣ ಏನೂಂತ ಕೇಳಿದರೆ ನಾಣ್ಯ ಚಲಾವಣೆಯಲ್ಲಿಲ್ಲ ಅಂತಾರೆ..!

ಇದಕ್ಕೆ ಕಾರಣ ಮಾಹಿತಿಯ ಕೊರತೆ. ಇನ್ನೊಂದು ಕಡೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹತ್ತು ರೂಪಾಯಿ ನಾಣ್ಯವಮ್ನ ಆರ್ ಬಿಐ ರದ್ದು ಮಾಡಿದೆ ಎಂಬ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಡುತ್ತಿದ್ದಾರೆ. ಹೀಗಾಗಿ ಮಂಗಳೂರಲ್ಲಿ 10ರ ನಾಣ್ಯದ ಬಗ್ಗೆ ಭಾರೀ ಗೊಂದಲಗಳು ಸೃಷ್ಟಿಯಾಗಿವೆ.[ಮಂಗಳೂರಿಗೆ ಆಗಮಿಸಲಿದ್ದಾರೆ ಯೋಗಿ ಆದಿತ್ಯನಾಥ್]

Ten rupees coin ban in Mangaluru? Business men & bus conductors not receiving ten rupees coin

‌ಕೆಲವರು 10 ರೂ. ನಾಣ್ಯವನ್ನು ಸ್ವೀಕರಿಸಿದರೆ ಕೆಲ ವ್ಯಾಪಾರಿಗಳು ಈ ನಾಣ್ಯವನ್ನು ತಿರಸ್ಕರಿಸುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಇತ್ತೀಚೆಗೆ 10 ರೂ ನಾಣ್ಯದ ವಿನ್ಯಾಸದಲ್ಲಿ ಬದಲಾವಣೆ ಮಾಡಿದ ಬಳಿಕ ಈ ಗೊಂದಲ ಸೃಷ್ಟಿಯಾಗಿದೆ.

2005ರಲ್ಲಿ ಮುದ್ರಿಸಲಾದ ನಾಣ್ಯದಲ್ಲಿ ಭಾರತ್ ಮತ್ತು ಇಂಡಿಯಾ, ಸಿಂಹರಾಜ ಮತ್ತು ಸತ್ಯಮೇವ ಜಯತೆ ಎಂದು ಹಿಂದಿಯಲ್ಲಿ ನಾಣ್ಯದ ಕೆಳ ಎಡಭಾಗದಲ್ಲಿ ಬರೆಯಲಾಗಿದೆ. ಇದಕ್ಕಿಂತ ಸ್ವಲ್ಪಕೆಳಗೆ ಇಸವಿಯನ್ನು ಕಾಣಬಹುದು.[ಬಾಳಿಗಾ ಕೊಲೆ ಪ್ರಕರಣ ಮರು ತನಿಖೆಗೆ ಸಂಬಂಧಿಕರ ಆಗ್ರಹ]

Ten rupees coin ban in Mangaluru? Business men & bus conductors not receiving ten rupees coin

2009ರಲ್ಲಿ ಬಿಡುಗಡೆಯಾದ ನಾಣ್ಯದ ಎರಡನೇ ವಿನ್ಯಾಸದಲ್ಲಿ ಎರಡು ಸಮತಲವಾಗಿರುವ ರೇಖೆಗಳನ್ನು ಎಳೆಯಲಾಗಿದೆ. ಭಾರತ ಮತ್ತು ಇಂಡಿಯಾ ಮೇಲ್ಭಾಗದಲ್ಲಿ, ಸಿಂಹರಾಜ ಮಧ್ಯದಲ್ಲಿ ಮತ್ತು ವರ್ಷವನ್ನು ಕೆಳಭಾಗದಲ್ಲಿ ಮುದ್ರಿಸಲಾಗಿದೆ. ಮಧ್ಯದಲ್ಲಿ 10 ಅಂಕೆಯನ್ನು ಬರೆಯಲಾಗಿದೆ.

ಈ ನಾಣ್ಯವನ್ನು ಸಾಮಾಜಿಕ ಜಾಲತಾಣದಲ್ಲಿ 'ಕಳ್ಳನಾಣ್ಯ ' ಎಂಬ ಸುಳ್ಳನ್ನ ಹರಡಲಾಗುತ್ತಿದೆ.

ಇನ್ನು 2011ರಲ್ಲಿ ಮತ್ತೆ ಎರಡನೇ ಬಾರಿಗೆ ನಾಣ್ಯದ ವಿನ್ಯಾಸದಲ್ಲಿ ಬದಲಾವಣೆ ತರಲಾಯಿತು. ಮಾರುಕಟ್ಟೆಯಲ್ಲಿ ಮೂರು ವಿನ್ಯಾಸದ ನಾಣ್ಯಗಳಿರುವುದು ಗೊಂದಲಕ್ಕೆ ಮತ್ತೊಂದು ಕಾರಣವಾಗಿದೆ.

ಆದರೆ ನಾಣ್ಯಗಳು ಯಾವುದೇ ವಿನ್ಯಾಸಕ್ಕೆ ಬದಲಾಗಿದ್ದರೂ ಸ್ವೀಕಾರಾರ್ಹ ಎಂದು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದರೂ ವ್ಯಾಪಾರಿಗಳು, ಬಸ್ ನಿರ್ವಾಹಕರು ಇದನ್ನ ನಂಬುವ ಸ್ಥಿತಿಯಲ್ಲಿಲ್ಲ. ಒಟ್ಟಾರೆ ಮಂಗಳೂರಲ್ಲಿ ಹತ್ತು ರೂಪಾಯಿ ನಾಣ್ಯ ಸದ್ದಿಲ್ಲದೇ ಚಲಾವಣೆಯಿಂದ ಹಿಂದೆ ಸರಿದಿದೆ.

English summary
Confusion prevails in the Mangaluru city with regard to the legitimacy of the Rs 10 coin. All because of a rumour circulated by some people on social media that the Reserve Bank of India (RBI) has declared the Rs 10 coin as 'invalid'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X