• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವಸ್ಥಾನ ಕೆಡವಿರೋದು ಟೂಲ್‌ಕಿಟ್ ಷಡ್ಯಂತ್ರದ ಭಾಗ: ಕ್ಯಾ. ಗಣೇಶ್ ಕಾರ್ಣಿಕ್!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 17: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಚ್ಚುಗಣಿ ಗ್ರಾಮದ ಮಹಾದೇವಿ ದೇವಸ್ಥಾನವನ್ನು ರಾತ್ರೋರಾತ್ರಿ ಕೆಡವಿದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಸಿಎಂ‌ ಬಸವರಾಜ ಬೊಮ್ಮಾಯಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.‌ ದೇವಸ್ಥಾನ ಕೆಡವಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಜನಾಕ್ರೋಶವನ್ನು ತಣಿಸಲು ರಾಜ್ಯ ಸರ್ಕಾರ ಹಲವು ಕಸರತ್ತುಗಳನ್ನು ಮಾಡುತ್ತಿದೆ. ಸ್ವಪಕ್ಷದ ಕಾರ್ಯಕರ್ತರ ಜೊತೆಗೆ ವಿಪಕ್ಷ ನಾಯಕರ ಟೀಕೆ ಟಿಪ್ಪಣಿಗಳ ನಡುವೆ, ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಮಾತ್ರ ದೇವಸ್ಥಾನ ಕೆಡವಿರುವುದು ಟೂಲ್‌ಕಿಟ್ ಷಡ್ಯಂತ್ರದ ಒಂದು ಭಾಗ ಅಂತಾ ಹೇಳಿ ನಗೆಪಾಟಲಿಗೀಡಾಗಿದ್ದಾರೆ.

 ಅನಧಿಕೃತ ಧಾರ್ಮಿಕ ಕಟ್ಟಡ ತೆರವು; ಮಂಗಳೂರಿನ 800 ವರ್ಷ ಇತಿಹಾಸದ ದೈವಸ್ಥಾನಕ್ಕೆ ಕುತ್ತು! ಅನಧಿಕೃತ ಧಾರ್ಮಿಕ ಕಟ್ಟಡ ತೆರವು; ಮಂಗಳೂರಿನ 800 ವರ್ಷ ಇತಿಹಾಸದ ದೈವಸ್ಥಾನಕ್ಕೆ ಕುತ್ತು!

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್, "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಕೆಡಿಸಲು ಮಾಡಿದ ಟೂಲ್‌ಕಿಟ್ ಷಡ್ಯಂತ್ರದಂತೆ, ಇದೂ ರಾಜ್ಯ ಸರ್ಕಾರದ ಹೆಸರು ಕೆಡಿಸಲು ಮಾಡಿದ ಷಡ್ಯಂತ್ರದ ಭಾಗ ಅಂತಾ ಅನುಮಾನ ಮೂಡುತ್ತಿದೆ," ಅಂತಾ ಕ್ಯಾ.ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ.

"ಮೈಸೂರಿನ ದೇವಸ್ಥಾನವನ್ನು ಕೆಡವಲು ಅಧಿಕಾರಿಗಳು ರಾತ್ರಿ ಹೊತ್ತು ಕಾರ್ಯಾಚರಣೆ ಮಾಡುವ ಅಗತ್ಯ ಇರಲಿಲ್ಲ. ಇದು ಟೂಲ್‌ಕಿಟ್ ಷಡ್ಯಂತ್ರದ ಭಾಗವೇ ಅಂತಾ ಅನುಮಾನ ಕಾಡುತ್ತಿದೆ. ಅಧಿಕಾರಿಗಳು ಷಡ್ಯಂತ್ರದ ಭಾಗವಾಗಿ ವರ್ತಿಸುತ್ತಿದ್ದಾರೆ ಅಂತಾ ಸಂದೇಹ ಇದೆ. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸ್ಪಷ್ಟೀಕರಣ ಕೊಡಬೇಕು. ದೇವಸ್ಥಾನ ಕೆಡವಿದರ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈಸೂರಿನ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಗಮನಕ್ಕೆ ಅಧಿಕಾರಿಗಳು ಯಾಕೆ ತರಲಿಲ್ಲ. ರಾತ್ರೋರಾತ್ರಿ ಕಳ್ಳರ ರೀತಿ ಹೋಗಿ ನೆಲಸಮ ಮಾಡುವುದರ ಉದ್ದೇಶ ಏನಿತ್ತು? ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವುದಾಗಿ," ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

"ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಕೆಡಿಸಲು ಕಾಂಗ್ರೆಸ್ ಸೇರಿದಂತೆ ಬುದ್ಧಿಜೀವಿಗಳ ತಂಡ ರಹಸ್ಯವಾಗಿ ಟೂಲ್‌ಕಿಟ್‌ನ್ನು ತಯಾರು ಮಾಡಿತ್ತು. ಇದರ ಅಂಗವಾಗಿ ದೇಶಾದ್ಯಂತ ಹಲವು ಷಡ್ಯಂತ್ರಗಳನ್ನು ಮಾಡಿತ್ತು. ಇದೇ ರೀತಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೂ ಟೂಲ್‌ಕಿಟ್ ಮಾಡಿ, ದೇವಸ್ಥಾನ ಕೆಡವಿ ಹೆಸರು ಹಾಳು ಮಾಡಲು ಪ್ರಯತ್ನಪಟ್ಟಿರುವ ಸಾಧ್ಯತೆಗಳು ಇವೆ," ಅಂತಾ ಕ್ಯಾ. ಗಣೇಶ್ ಕಾರ್ಣಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ದೇವಸ್ಥಾನವನ್ನು ಕೆಡವಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಆದಿಯಾಗಿ ಸಚಿವ, ಶಾಸಕರುಗಳು ಹಲವು ಸಮಜಾಯಿಷಿ ನೀಡಿದರೂ, ಕ್ಯಾ. ಗಣೇಶ್ ಕಾರ್ಣಿಕ್ ಹೇಳಿಕೆ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ.

Temple Demolition Is The Part Of The Toolkit Says BJP spokesperson Capt Ganesh Karnik

ಮಂಗಳೂರಿನ 800 ವರ್ಷ ಇತಿಹಾಸದ ದೈವಸ್ಥಾನಕ್ಕೆ ಕುತ್ತು
ದಕ್ಷಿಣ ಕನ್ನಡ ಜಿಲ್ಲಾಡಳಿತ ತಯಾರು ಮಾಡಿರುವ ಪಟ್ಟಿಯಲ್ಲಿ ಒಟ್ಟು 902 ಅನಧಿಕೃತ ಕಟ್ಟಡಗಳಿದ್ದು, ಇದರಲ್ಲಿ ದೇವಸ್ಥಾನಗಳದ್ದೇ ಅಗ್ರಪಾಲಾಗಿದೆ. ಈ ಪಟ್ಟಿಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ನಗರದ ಶಕ್ತಿನಗರದ ಶ್ರೀವೈದ್ಯನಾಥ ದೇವಸ್ಥಾನವೂ ಹೊಂದಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ‌.

2009ರ ಹಿಂದಿನವರೆಗಿನ ಅನಧಿಕೃತ ಕಟ್ಟಡಗಳ ಪಟ್ಟಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದೆ. ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳೆಂದು ಗುರುತು ಮಾಡಲಾಗಿದ್ದು, ಇದರಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚರ್ಚ್ ಮತ್ತು 11 ಧಾರ್ಮಿಕ ಕಟ್ಟಡಗಳನ್ನು ಒಳಗೊಂಡಿದೆ.

ಮಂಗಳೂರಿನ ಶಕ್ತಿನಗರದಲ್ಲಿರುವ ವೈದ್ಯನಾಥ ದೈವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು, ಅಪಾರ ಭಕ್ತಗಣವನ್ನು ಹೊಂದಿದೆ. ಕ್ಷೇತ್ರದ ಮಹಿಮಾನ್ವಿತ ಕಾರಣಿಕ ಶಕ್ತಿಗಳ ಬಗ್ಗೆ ಜನ ಅಗಾಧ ಶ್ರದ್ಧೆ ಭಕ್ತಿ ಹೊಂದಿದ್ದಾರೆ. ಇದರ ನಡುವೆ ಇದೀಗ ದೈವಸ್ಥಾನ ತೆರವುಗೊಳಿಸುವ ವಿಚಾರ ಭಕ್ತರು ಆತಂಕಕ್ಕೀಡು ಮಾಡಿದೆ.

English summary
There seems to be a toolkit-like conspiracy behind the demolition of a temple at Nanjangud says BJP spokesperson Capt Ganesh Karnik.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X