ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ನೇಹಿತನನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಅಪಾರ್ಟ್‌ಮೆಂಟ್‌ಗೆ ಕರೆತಂದ!

|
Google Oneindia Kannada News

ಮಂಗಳೂರು, ಏಪ್ರಿಲ್ 13: ಸ್ನೇಹಿತನನ್ನು ಸೂಟ್‌ಕೇಸ್‌ನಲ್ಲಿ ಕುಳ್ಳಿರಿಸಿ ಅಪಾರ್ಟ್‌ಮೆಂಟ್‌ಗೆ ಕರೆ ತರುತ್ತಿದ್ದ ವಿದ್ಯಾರ್ಥಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಅಪರಿಚಿತರ ಪ್ರವೇಶ ನಿರಾಕರಿಸಲಾಗಿದೆ. ಹೊರಗಿನಿಂದ ಯಾರೇ ಬಂದರೂ ಅವರನ್ನು ಒಳಗೆ ಬಿಡುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಯೊಬ್ಬ ಸ್ನೇಹಿತನನ್ನು ಅಪಾರ್ಟ್‌ಮೆಂಟ್‌ಗೆ ಕರೆ ತರಲು ಈ ಪ್ರಯತ್ನ ಮಾಡಿದ್ದಾನೆ.

ಸುಳ್ಯದಲ್ಲಿ ಔಷಧಿಗಾಗಿ 15 ಕಿ.ಮೀ ನಡೆದುಕೊಂಡು ಬಂದ ವೃದ್ಧೆಸುಳ್ಯದಲ್ಲಿ ಔಷಧಿಗಾಗಿ 15 ಕಿ.ಮೀ ನಡೆದುಕೊಂಡು ಬಂದ ವೃದ್ಧೆ

ಆದರೆ ವಿದ್ಯಾರ್ಥಿ ಗೆಳೆಯನನ್ನು ತರೆತರುವುದಾಗಿ ಹೇಳುತ್ತಲೇ ಇದ್ದ, ಇದಕ್ಕೆ ಅಪಾರ್ಟ್‌ಮೆಂಟ್‌ನವರು ಅವಕಾಶ ನೀಡಿರಲಿಲ್ಲ. ಹಟ ಬಿಡದೇ ಭಾನುವಾರ ಬೆಳಗ್ಗೆ ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ಅಡಗಿಸಿ ಕರೆದೊಯ್ಯುವ ಪ್ರಯತ್ನ ಮಾಡಿದ್ದಾನೆ.

Teenager Takes Friend To Apartment In Suitcase

ಅಪಾರ್ಟ್‌ಮೆಂಟ್ ಒಳಗೆ ಪ್ರವೇಶಿಸುವ ಸಂದರ್ಭದಲ್ಲಿ ಸೂಟ್‌ಕೇಸ್ ಅಲುಗಾಡಿದೆ , ಇದನ್ನು ಅಲ್ಲಿನ ಕೆಲ ನಿವಾಸಿಗಳು ಗಮನಿಸಿದ್ದಾರೆ. ಸೂಟ್‌ಕೇಸ್ ತೆರೆದು ತೋರಿಸುವಂತೆ ವಿದ್ಯಾರ್ಥಿಗೆ ಒತ್ತಾಯಿಸಿದ್ದಾರೆ. ಬಳಿಕ ಸೂಟ್‌ಕೇಸ್ ತೆರೆದಾಗ ಸ್ನೇಹಿತ ಒಳಗೆ ಇರುವ ವಿಷಯ ಬಹಿರಂಗವಾಗಿದೆ.

ಇಬ್ಬರನ್ನೂ ಕದ್ರಿ ಪೊಲೀಸರು ಬಂದಿದ್ದಾರೆ. ಅವರನ್ನು ಬಾಲ ನ್ಯಾಯಮಂಡಳಿ ಎದುರು ಹಾಜರುಪಡಿಸಲಾಗುತ್ತದೆ ಎಂದು ಕಮಿಷನರ್ ಡಾ. ಪಿ.ಎಸ್. ಹರ್ಷ ತಿಳಿಸಿದ್ದಾರೆ. ಮಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನಡೆದ ಘಟನೆ ಇದಾಗಿದೆ.

English summary
In a curious incident at an apartment complex in the city on Sunday, a teenaged student was caught while trying to sneak in his friend to his apartment by stuffing him inside a suitcase In Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X