ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡಲ ನಗರಿಯಲ್ಲಿ ವಿಶ್ವ ಸರ್ಫಿಂಗ್ ಲೀಗ್, ಅಲೆಗಳ ಜತೆ ಅಟ

2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಂಗಳೂರಿನಲ್ಲಿ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಕಡಲ ಮಕ್ಕಳ ಸಾಹದ ವಿಶ್ವದ ಗಮನ ಸೆಳೆದಿದೆ.

By Mahesh
|
Google Oneindia Kannada News

ಮಂಗಳೂರು, ಮೇ 27: 2ನೇ ಇಂಡಿಯನ್ ಓಪನ್ ಸರ್ಫಿಂಗ್ ಕ್ರೀಡಾಕೂಟಕ್ಕೆ ಮಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ನಗರದ ಹೊರವಲಯದ ಸಸಿಹಿತ್ಲು ಅರಬ್ಬಿ ಸಮುದ್ರದಲ್ಲಿ ಮೇ 26ರಿಂದ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟವನ್ನು ಅರಣ್ಯ ಸಚಿವ ರಮಾನಾಥ ರೈ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನಾ೯ಟಕದಲ್ಲಿ ಸರ್ಫಿಂಗ್ ಕ್ರೀಡೆ ಮೂಲಕ ರಾಜ್ಯದಲ್ಲಿ ಪ್ರವಾಸೋದ್ಯಮ ಹಾಗೂ ಕ್ರೀಡಾಕ್ಷೇತ್ರಕ್ಕೆ ಮಹತ್ವದ ಮುನ್ನಡೆ ದೊರಕಿದೆ. ರಾಜ್ಯದ ಸಮುದ್ರ ತೀರಗಳನ್ನು ವಿದೇಶಗಳ ಮಾದರಿಯಲ್ಲಿ ಇನ್ನಷ್ಟು ಆಕರ್ಷಕವಾಗಿ ಮಾಡಲು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಕಾಯ೯ಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.[ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡೆಗೆ ಚಾಲನೆ]

2018ರಲ್ಲಿ ಮಂಗಳೂರಿನಲ್ಲಿ ವಿಶ್ವ ಸರ್ಫಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. 2017-18ರ ರಾಜ್ಯ ಬಜೆಟ್ ನಲ್ಲಿ ಮಂಗಳೂರು ಸರ್ಫಿಂಗ್ ಕ್ರೀಡಾಕೂಟಕ್ಕೆ ಸುಮಾರು 60 ಲಕ್ಷ ರೂ. ನೀಡಿದೆ. ವಾತಾ೯ ಇಲಾಖೆಯು 1ಕೋಟಿ ರೂ. ವೆಚ್ಚದಲ್ಲಿ ಸರ್ಫಿಂಗ್ ಕ್ರೀಡಾಕೂಟಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡಿದೆ ಎಂದು ಅವರು ಹೇಳಿದರು.[ದೇಶದ ಅತಿ ದೊಡ್ಡ ಸರ್ಫಿಂಗ್ ಸಾಹಸಕ್ಕೆ ಸಜ್ಜಾದ ಸಸ್ಲಿಹಿತ್ಲು]

ಶಾಸಕರಾದ ಮೊಹಿದೀನ್ ಬಾವಾ, ಜೆ ಆರ್ ಲೋಬೋ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಡಾ ಜಗದೀಶ್, ಪೊಲೀಸ್ ಆಯುಕ್ತ ಚಂದ್ರಶೇಖರ್ ಮತ್ತಿತರರು ಇದ್ದರು. ದೇಶ ವಿದೇಶಗಳ ಸುಮಾರು 120ಕ್ಕೂ ಅಧಿಕ ಸರ್ಫಿಂಗ್ ಪಟುಗಳು ಭಾಗವಹಿಸಿದ್ದಾರೆ.

ಆಹಾರ ಉತ್ಸವ

ಆಹಾರ ಉತ್ಸವ

ಸರ್ಫಿಂಗ್ ಕ್ರೀಡಾಕೂಟದೊಂದಿಗೆ ಸಸಿಹಿತ್ಲು ಕಡಲಕಿನಾರೆಯಲ್ಲಿ ಅತ್ಯಾಕರ್ಷಕ ಸಾಂಸ್ಕೃತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಬೀಚ್ ವಾಲಿಬಾಲ್ ಸಹಿತ ವಿವಿಧ ಕ್ರೀಡಾಕೂಟಗಳು, ರುಚಿಕರ ಆಹಾರ ಖಾದ್ಯಗಳನ್ನೊಳಗೊಂಡ ಆಹಾರ ಉತ್ಸವವನ್ನೂ ಮೂರು ದಿನಗಳ ಸರ್ಫಿಂಗ್ ಕ್ರೀಡಾಕೂಟದ ಸಂದರ್ಭದಲ್ಲಿ ಆಯೋಜಿಸಲಾಗಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಗರಿ

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಗರಿ

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಕ್ರೀಡಾ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಗರಿ ಮೂಡಿದೆ. ಶಾಂಭವಿ ನದಿಯು ಕಡಲನ್ನು ಸೇರುವ ಸುಂದರವಾದ ಅಳಿವೆ ಪ್ರದೇಶದಲ್ಲಿ ಈ ಕ್ರೀಡಾಕೂಟದ ಮೂಲಕ ಈ ಬೀಚಿನ ನಿಸರ್ಗ ರಮಣೀಯ ಸೌಂದರ್ಯವು ಹೊರಜಗತ್ತಿಗೆ ಕಾಣುವಂತಾಗಿದೆ.

ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿವೆ. 16ರ ವಯೋಮಿತಿಯ ಒಳಗಿನ ಮಕ್ಕಳು, 17 ರಿಂದ 22 ವಯೋಮಿತಿ, 22-28 ಹಾಗೂ 28 ರಿಂದ ಹೆಚ್ಚಿನ ವಯೋಮಿತಿಯವರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪಂದ್ಯದ ತೀರ್ಪುಗಾರರಾಗಿ ಹಾಗೂ ಉಸ್ತುವಾರಿ ನೋಡಿಕೊಳ್ಳಲು ಇಂಡೋನೇಷ್ಯಾ ಆಸ್ಟ್ರೇಲಿಯಾ ಮತ್ತು ಯುಎಸ್ಎನಿಂದ ಅಧಿಕಾರಿಗಳು ಆಗಮಿಸಿದ್ದಾರೆ.

ತನ್ವಿ ಜಗದೀಶ್

ತನ್ವಿ ಜಗದೀಶ್

ಮುಲ್ಕಿಯ ಕೊಳಚಿ ಕಂಬಳದಲ್ಲಿರುವ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯೆಯಾಗಿರುವ ತನ್ವಿ ಜಗದೀಶ್ ಅವರು 'ಇಂಡಿಯನ್‌ ಓಪನ್ ಆಫ್‌ ಸರ್ಫಿಂಗ್' ಚಾಂಪಿಯನ್ ಶಿಪ್ ‌ನ ಸ್ಟ್ಯಾಂಡ್ ಅಪ್ ಪೆಡಲಿಂಗ್ ನ 5 ಕಿಲೋ ಮೀಟರ್‌ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿದರು. ಹರ್ಷಿತಾ ಆಚಾರ್ ಎರಡನೇ ಹಾಗೂ ವಿಲಾಸಿನಿ ಸುಂದರ್ ಮೂರನೇ ಸ್ಥಾನ ಗಳಿಸಿದರು.

ಪುರುಷರ ವಿಭಾಗದ ಮೊದಲ ಸುತ್ತಿನ ಹೀಟ್ಸ್

ಪುರುಷರ ವಿಭಾಗದ ಮೊದಲ ಸುತ್ತಿನ ಹೀಟ್ಸ್

ತಮಿಳುನಾಡಿನ ಮುಖೇಶ್‌ ಪಂಜನಾಥನ್‌ 10 ಅಲೆಗಳನ್ನು ಸಮರ್ಥವಾಗಿ ಎದುರಿಸಿ, ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮೂರ್ತಿ ಮೇಘವನ್, ಸಂದೀಪ್ ಸ್ಯಾಮ್ಯುಯೆಲ್, ಎ. ವೆಂಕಟೇಶನ್, ವೇಲುಮುರುಗನ್, ವೆಂಕಟ್ ಕೂಡಾ ಸೆಮಿಫೈನಲ್ ನಲ್ಲಿದ್ದಾರೆ.
ಹಿರಿಯರ ವಿಭಾಗ: 26 ಸರ್ಫರ್‌ ಗಳ ಪೈಕಿ 15 ಮಂದಿ ಸೆಮಿಫೈನಲ್ ಗೇರಿದ್ದಾರೆ. ಭಾರತದ ಧರಣಿ, ಸೆಲ್ವಕುಮಾರ್ , ಮಣಿಕಂಠನ್ ಅಪ್ಪು, ರಾಹುಲ್‌, ಶೇಖರ್‌ ಪಿಟ್ಚೆ ಅವರೂ ಕೂಡಾ ಸೆಮಿಫೈನಲ್ ಗೆ ಪ್ರವೇಶಿದ್ದಾರೆ.

English summary
The second edition of Indian Open of Surfing was inagurated with much fanfare at the Sasihithlu beach near Mangaluru. National and international surfers tamed extreme tide on a new moon day to kick start the three-day surfing festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X