ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ತಲಕಳ ಧರ್ಮಚಾವಡಿ ಮಠದ ಸ್ವಾಮೀಜಿ ಆತ್ಮಹತ್ಯೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 22: ನಗರದ ಬಜ್ಪೆ ಸಮೀಪದ ತಲಕಲ ಕೊಳಂಬೆಯ ಧರ್ಮಚಾವಡಿ ಮಠದ ಶ್ರೀ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿಯವರು(50) ಅನುಮಾನಾಸ್ಪದವಾಗಿ ಆತ್ಮಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಸನ್ಯಾಸ ದೀಕ್ಷೆ ಪಡೆದುಕೊಂಡ ಶ್ರೀ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿಯವರು, ತಮ್ಮ ಪತ್ನಿಯಿಂದ ದೂರವಿದ್ದರು‌. ಇವರು ಕೊಳಂಬೆಯ ತಲಕಲ ಶೆಟ್ಟಿಪಾಲ್ ಎಂಬಲ್ಲಿ ತಮ್ಮ ಮನೆಯ ಬಳಿಯೇ ಧರ್ಮಚಾವಡಿ ಎಂಬ ಮಠವನ್ನು ಕಟ್ಟಿಕೊಂಡಿದ್ದರು. ಜುಲೈ 22 ರಂದು ಬೆಳಗ್ಗೆ 4ಗಂಟೆ ಸುಮಾರಿಗೆ ತಮ್ಮ ಕಾವಿ ಲುಂಗಿಯಿಂದಲೇ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬಿಜೆಪಿ ಸರ್ಕಾರ ತಮ್ಮ ನಾಯಕರ ಲಂಚ, ಮಂಚದ ಪ್ರಕರಣ ಮುಚ್ಚಿ ಹಾಕುತ್ತಿದೆ: ಡಿಕೆ ಶಿವಕುಮಾರ್ಬಿಜೆಪಿ ಸರ್ಕಾರ ತಮ್ಮ ನಾಯಕರ ಲಂಚ, ಮಂಚದ ಪ್ರಕರಣ ಮುಚ್ಚಿ ಹಾಕುತ್ತಿದೆ: ಡಿಕೆ ಶಿವಕುಮಾರ್

ಶ್ರೀ ಕೃಷ್ಣ ದೇವಿ ಪ್ರಸಾದ್ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್. ಇವರಿಗೆ ಮದುವೆಯಾಗಿದ್ದು ಓರ್ವ ಪುತ್ರಿಯಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ‌. ಆದರೆ ಈ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌. ಶ್ರೀಗಳ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮಾಡುವಂತೆ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangaluru:Talakala Swamiji Committed Suicide under Suspicious Circumstances

ಸ್ವಾಮೀಜಿಗೆ 27ರ ಹರೆಯದ ಪ್ರತೀಕ್ಷಾ ಎಂಬ ಮಗಳಿದ್ದು ಸದ್ಯ ದುಬೈ ನಲ್ಲಿ ಉದ್ಯೋಗದಲ್ಲಿದ್ದಾರೆ. ಹೊಟೇಲ್ ಉದ್ಯಮ ನಡೆಸುತ್ತಿದ್ದ ಶ್ರೀ ಕೃಷ್ಣ ದೇವಿ ಪ್ರಸಾದ್ ಬಳಿಕ ಸಂಸಾರದ ವಿರಸದಿಂದ ಮನನೊಂದು ಸನ್ಯಾಸತ್ವ ಸ್ವೀಕರಿಸಲು ನಿರ್ಧಾರ ಮಾಡಿದ್ದರು. ಬಳಿಕ ಅವರು ತಲಕಲದಲ್ಲಿನ ತಮ್ಮ ವಿಶಾಲವಾದ ಜಾಗದಲ್ಲಿ ಧರ್ಮ ಚಾವಡಿ ಸ್ಥಾಪಿಸಿ, ಮಠದಲ್ಲೇ ವಾಸಿಸುತ್ತಿದ್ದರು. ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ ಬಳಿಕ ಸ್ವಾಮೀಜಿಯವರು ಕೋಣೆಯೊಳಗಡೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಒಂದು ಬಾರಿಯೂ ವಿಚಾರಣೆ ನಡೆಸದೆ ಈಶ್ವರಪ್ಪಗೆ ಕ್ಲೀನ್‌ಚಿಟ್: ಸಿದ್ದರಾಮಯ್ಯಪೊಲೀಸರು ಒಂದು ಬಾರಿಯೂ ವಿಚಾರಣೆ ನಡೆಸದೆ ಈಶ್ವರಪ್ಪಗೆ ಕ್ಲೀನ್‌ಚಿಟ್: ಸಿದ್ದರಾಮಯ್ಯ

ಕಳೆದ ವರ್ಷ ಧರ್ಮ ಚಾವಡಿಯಲ್ಲಿ ಲಕ್ಷಾಂತರ ರೂ ಖರ್ಚು ಮಾಡಿ ಅದ್ದೂರಿಯ ಪೂಜಾ ಕಾರ್ಯನಡೆಸಿದ್ದರು. ಮಠಕ್ಕೆ ಬರುವ ಭಕ್ತರಿಗೆ ಭವಿಷ್ಯ ಕೂಡ ಹೇಳುತ್ತಿದ್ದರು. ಇದರಿಂದ ಅವರು ಸಾಕಷ್ಟು ಜನಪ್ರಿಯರಾಗಿದ್ದರು. ಧರ್ಮ ಚಾವಡಿಯ ಹೆಸರಲ್ಲಿ ಅಪಾರ ಪ್ರಮಾಣದ ಆಸ್ತಿ ಇದೆ ಎನ್ನಲಾಗಿದೆ. ವ್ಯವಹಾರಿಕವಾಗಿ ಜುಗುಪ್ಸೆ ಗೊಂಡು ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸ್ವಾಮೀಜಿ ಆತ್ಮಹತ್ಯೆ ಬಗ್ಗೆ ಅವರ ಪೂರ್ವಾಶ್ರಮದ ಪತ್ನಿ ಪ್ರಭಾ ಶೆಟ್ಟಿ ಬಜಪೆ ಪೋಲೀಸರಿಗೆ ದೂರು ನೀಡಿದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
Krishna Devi Prasad Swamiji from Talakala, Dakshina kannada district Committed Suicide under Suspicious Circumstances,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X