ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಸ್ಟೀಮಿಂಗ್ ವ್ಯವಸ್ಥೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 1: ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಭೀಕರತೆನ್ನು ಪಡೆಯುತ್ತಿದೆ. ಒಂದೆಡೆ ಸರ್ಕಾರ ಕರ್ಫ್ಯೂ ಹೇರಿ ಜನಸಾಮಾನ್ಯ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿದರೆ, ರಸ್ತೆಯಲ್ಲಿ ಕೆಲಸ ಮಾಡುವ ಕೋವಿಡ್ ವಾರಿಯರ್ಸ್ ಮನೆಯವರಿಗೆ ತಮ್ಮವರ ಜೀವದ ಬಗ್ಗೆ ಚಿಂತೆ ಕಾಡುತ್ತಿದೆ.

ಕೊರೊನಾ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುವ ಪೊಲೀಸರಿಗೆ ಕೊರೊನಾ ವಕ್ಕರಿಸದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ವಿನೂತನ ಪ್ರಯೋಗ ಮಾಡಲಾಗಿದೆ.

ಕೋವಿಡ್ 19: ಭಾರತದ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ ಎಂದ ಅಮೆರಿಕ ಕೋವಿಡ್ 19: ಭಾರತದ ಪರಿಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ ಎಂದ ಅಮೆರಿಕ

ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಮತ್ತು ಠಾಣೆಗೆ ಬರುವ ದೂರುದಾರರಿಗೆ ಸ್ಟೀಮಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಕಮೀಷನರ್ ಎನ್.ಶಶಿಕುಮಾರ್ ಸೂಚನೆಯಂತೆ, ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜ್ಯೋತಿರ್ಲಿಂಗ ಮಾರ್ಗದರ್ಶನದಲ್ಲಿ ಠಾಣೆಯ ಸಿಬ್ಬಂದಿಗಳೇ ಸ್ಟೀಮ್ ವ್ಯವಸ್ಥೆಯನ್ನು ಠಾಣೆಯ ಮುಂಭಾಗ ಅಳವಡಿಸಿದ್ದಾರೆ.

Mangaluru: System Developed To Take Steam At Barke Police Station

ಕುಕ್ಕರ್ ಉಪಯೋಗಿಸಿ ಸ್ಟೀಮ್ ಉಪಕರಣ ತಯಾರಿಸಲಾಗಿದ್ದು, ತುಳಸಿ, ಲವಂಗ ಮುಂತಾದ ಆಯುರ್ವೇದ ವಸ್ತುಗಳನ್ನು ಬಳಸಿ ಸ್ಟೀಮಿಂಗ್ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಠಾಣೆಗೆ ಬರುವ ಸಿಬ್ಬಂದಿ ಮೊದಲು ಕಡ್ಡಾಯವಾಗಿ 5 ನಿಮಿಷಗಳ ಕಾಲ ಸ್ಟಿಮಿಂಗ್ ಮಾಡಬೇಕಾಗುತ್ತದೆ. ಸ್ಟೀಮ್ ಮಾಡುವುದರಿಂದ ಮೂಗು ಮತ್ತು ಗಂಟಲು ಭಾಗದಲ್ಲಿರುವ ವೈರಸ್ ನಾಶವಾಗುವ ನಂಬಿಕೆಯಿಂದ ಎಲ್ಲರಿಗೂ ಸ್ಟೀಮ್ ಮಾಡಲಾಗುತ್ತಿದೆ.

Mangaluru: System Developed To Take Steam At Barke Police Station

ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರು ಬೇರೆ ಠಾಣೆಗಳಲ್ಲೂ ಈ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದು, ಪೊಲೀಸರ ಆರೋಗ್ಯದ ದೃಷ್ಟಿಯಿಂದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ನಗರ ಭಾಗದಲ್ಲಿ ಪ್ರತಿ ದಿನ ದುಡಿಯುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಪ್ರತಿದಿನ ಉಚಿತ ಊಟವನ್ನು ಮಧ್ಯಾಹ್ನ ಮತ್ತು ರಾತ್ರಿ ನೀಡಲಾಗುತ್ತಿದೆ.

English summary
Police staff taken steaming using Ayurvedic items like basil and cloves, In the Barke police station in Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X