ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ ಕರಾವಳಿಯಲ್ಲಿ ಶಂಕಿತ ಉಗ್ರ; ಪೊಲೀಸರಿಂದ ರೇಖಾಚಿತ್ರ ಬಿಡುಗಡೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಅಗಸ್ಟ್ 25: ಕರಾವಳಿಯಾದ್ಯಂತ ಮತ್ತೆ ಹೈ ಅಲರ್ಟ್ ಘೋಷಿಸಲಾಗಿದೆ. ತಮಿಳುನಾಡು ಮೂಲಕ ಒಳ ನುಸುಳಿರುವ 6 ಮಂದಿ ಉಗ್ರರು ಕರಾವಳಿಯ ಪ್ರಮುಖ ಸ್ಥಳಗಳನ್ನು ಗುರಿ ಮಾಡಿಕೊಂಡು, ದಾಳಿ ನಡೆಸುವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೆಕ್ಟರ್ ಎಂದು ತಿರುಗುತ್ತಿದ್ದ ಆ ಶಂಕಿತ ಕಾಶ್ಮೀರಿ ಯಾರು?ವಲ್ಡ್ ಹೆಲ್ತ್ ಆರ್ಗನೈಝೇಷನ್ ಡೈರೆಕ್ಟರ್ ಎಂದು ತಿರುಗುತ್ತಿದ್ದ ಆ ಶಂಕಿತ ಕಾಶ್ಮೀರಿ ಯಾರು?

ಶ್ರೀಲಂಕಾದ 5 ಹಾಗೂ ಒಬ್ಬ ಪಾಕಿಸ್ತಾನಿ ಉಗ್ರ ಸೇರಿ ಒಟ್ಟು 6 ಮಂದಿ ಉಗ್ರರು ತಮಿಳುನಾಡಿನ ಮೂಲಕ ಒಳನುಸುಳಿದ್ದಾರೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಕರಾವಳಿ ತೀರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಪಾಕಿಸ್ತಾನದ ಉಗ್ರನೊಬ್ಬ ಕರ್ನಾಟಕದ ಕರಾವಳಿಗೆ ಬಂದಿರುವ ಶಂಕೆ ಇದೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

Suspected Terrorist Sketch Released In Dakshina Kannada and Udupi

ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಕಾವಲುಪಡೆಯನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ. ಕರಾವಳಿ ಕಾವಲು ಪೊಲೀಸ್ ಪೊಲೀಸರು ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆಯು ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯಲ್ಲಿ ಶಂಕಿತ ಉಗ್ರನ ಚಹರೆ ಕೂಡ ನೀಡಲಾಗಿದೆ.

Suspected Terrorist Sketch Released In Dakshina Kannada and Udupi

ಈ ವ್ಯಕ್ತಿಯನ್ನು ಕಂಡರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ. ಅಲ್ಲದೆ ಸಮುದ್ರ ತೀರದಲ್ಲಿ ಪೊಲೀಸ್ ಭದ್ರತೆ ಕೂಡ ಹೆಚ್ಚಿಸಲಾಗಿದೆ. ಇವರು ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆ ಇರುವುದರಿಂದ ಕಡಲ ತೀರದಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

English summary
High alert announced in Coastal Karnataka. Suspected terrorist sketch released by police department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X