• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking:ಶಂಕಿತ ಉಗ್ರ ಮಾಜ್ ಮುನೀರ್‌ ತಂದೆ ಹೃದಯಾಘಾತದಿಂದ ನಿಧನ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 23: ನಿಷೇಧಿತ ಭಯೋತ್ಪಾದನೆ ಸಂಘಟನೆ ಐಸಿಸ್‌ ಜೊತೆ ನಂಟು ಶಂಕೆ ಮೇಲೆ ಶಿವಮೊಗ್ಗ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿರುವ ಆರೋಪಿಗಳಲ್ಲಿ ಒಬ್ಬನಾದ ಮಾಜ್ ಮುನೀರ್‌ ಅಹಮ್ಮದ್ ತಂದೆ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಗ್ರ ಸಂಘಟನೆಗೆ ನಂಟಿರುವ ಆರೋಪದ ಹಿನ್ನಲೆ ಮಾಜ್ ಬಂಧನವಾಗುತ್ತಿದ್ದಂತೆ, ಆತನ ತಂದೆ ಮುನೀರ್ ಅಹಮ್ಮದ್‌(52) ಮಾನಸಿಕವಾಗಿ ಕುಗ್ಗಿದ್ದರು. ಇದೇ ನೋವಿನಲ್ಲಿ ಹೃದಯಾಘಾತ ಸಂಭವಿಸಿ ಮಂಗಳೂರಿನ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ:ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ:ಈವರೆಗಿನ 10 ಬೆಳವಣಿಗೆಗಳ ಕಂಪ್ಲೀಟ್ ಮಾಹಿತಿ

ಮಂಗಳವಾರ ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆಯ ಶಂಕಿತ ಉಗ್ರ ಶಾರೀಕ್‌ನ ಸಹಚರರಾದ ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸಿನ್ ಅಲಿಯಾಸ್ ಬೈಲ್ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ಮಾಜ್ ಮುನೀರ್‌ ಎಂಟೆಕ್‌ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ವಾಸವಾಗಿದ್ದನು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಯಾಸಿನ್‌ ಮತ್ತು ಮಾಜ್‌ರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಇವರಿಬ್ಬರ ಕಿಂಗ್ ಪಿನ್‌ ಮಹಮ್ಮದ್ ಶಾರಿಕ್ ತಲೆಮರಿಸಿಕೊಂಡಿದ್ದಾನೆ.

ಮಾಜ್‌ ಮುನೀರ್‌ ತಂದೆ ಮೂಲತಃ ತೀರ್ಥಹಳ್ಳಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದರೆಂದು ತಿಳಿದುಬಂದಿದೆ. ಇನ್ನು ಮಾಜ್ ತಂದೆ ಸಾವಿನ ಹಿನ್ನಲೆ ಪೊಲೀಸರು ಮಾಜ್‌ನನ್ನು ಕೋರ್ಟ್‌ಗೆ ಹಾಜರು ಪಡಿಸಿ ಅಂತಿಮ ದರ್ಶನಕ್ಕೆ ಕರೆದೊಯ್ಯಲು ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

English summary
Maz Muneer father Muneer Ahamand died due to heart Attack in Managaluru Private hospital on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X