ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರ

|
Google Oneindia Kannada News

ಮಂಗಳೂರು, ಜೂನ್ 26: ಮಂಗಳೂರಿನ ಗುಜ್ಜರ ಕೆರೆ ಪ್ರದೇಶದ ಗೋರಕ್ಷ ದಂಡು ಮತ್ತು ಅರೆಕೆರೆಬೈಲು ಭಾಗದ 43 ಜ್ವರ ಪೀಡಿತ ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ 6 ಮಂದಿಗೆ ಡೆಂಗ್ಯೂ ಜ್ವರ ದೃಢಫಟ್ಟಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕ

ಡೆಂಗ್ಯೂ ಜ್ವರ ಕಾಣಿಸಿಕೊಂಡ ಗುಜ್ಜರ ಕೆರೆ ಪ್ರದೇಶದ ಗೋರಕ್ಷ ದಂಡು ಮತ್ತು ಅರೆಕೆರೆಬೈಲು ಪ್ರದೇಶದಲ್ಲಿ ಸೋಮವಾರದಿಂದಲೇ ವೈದ್ತಯಕೀಯ ಶಿಬಿರ ನಡೆಯುತ್ತಿದ್ದು, ಮತ್ತಷ್ಟು ದಿನ ಮುಂದುವರಿಸಲು ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‌ಚಂದ್ರ ಮಾಹಿತಿ ನೀಡಿದ್ದಾರೆ. ಮಂಗಳವಾರ 6 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಡೆಂಗ್ಯೂ ಹೋಲುವ ಜ್ವರ ಕಂಡು ಬಂದಿದ್ದರೂ ಡೆಂಗ್ಯೂ ಜ್ವರ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

suspected dengue cases reported in Mangaluru

ಶಂಕಿತ ಡೆಂಗ್ಯೂ ಪೀಡಿತರ ಆರೋಗ್ಯ ತಪಾಸಣೆ ಸಹಿತ ಅಗತ್ಯ ಕ್ರಮಗಳಿಗಾಗಿ ಆರೋಗ್ಯ ಇಲಾಖೆಯು ಅರೆಕೆರೆ ಬೈಲು ಮತ್ತು ಗೋರಕ್ಷದಂಡು ಪರಿಸರದಲ್ಲಿ ಆರೋಗ್ಯ ಶಿಬಿರವನ್ನು ಮುಂದುವರಿಸಿದೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

English summary
Dengue cases are increasing in Mangaluru. suspected dengue cases reported in Gorakshakadandu and Arekerebail area of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X