ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆ ಶಂಕಿತ ಯಾರು?

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 21: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಜೀವ ಬಾಂಬ್ ಪತ್ತೆಯಾಗಿದ್ದು, ಬಾಂಬ್ ಇಟ್ಟ ಶಂಕಿತನಿಗಾಗಿ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ.

ಆ ವ್ಯಕ್ತಿ ಬಂದಿದ್ದ ಖಾಸಗಿ ಬಸ್ ಹಾಗೂ ಆಟೋ ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳಿಂದ ಆತನ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.

ಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ; ಎನ್ ಐಎ ಅಧಿಕಾರಿಗಳ ಭೇಟಿಮಂಗಳೂರಿನಲ್ಲಿ ಬಾಂಬ್ ಪತ್ತೆ ಪ್ರಕರಣ; ಎನ್ ಐಎ ಅಧಿಕಾರಿಗಳ ಭೇಟಿ

ಈ ನಡುವೆ ನಿನ್ನೆ ಪೊಲೀಸರು ಬಿಡುಗಡೆಗೊಳಿಸಿದ್ದ ಶಂಕಿತನ ಚಿತ್ರದಿಂದ, ಆತ ಉಡುಪಿ ಮೂಲದವನಾಗಿದ್ದು, ಎಂಜಿನಿಯರ್ ಪದವೀಧರ ಎಂದು ತಿಳಿದುಬಂದಿದೆ. ಏರ್‌ಪೋರ್ಟ್ ಅಧಿಕಾರಿಗಳ ವಿರುದ್ಧ ಸೇಡಿನಿಂದ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಹುಸಿ ಬಾಂಬ್ ಕರೆ ಮಾಡಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.

Suspect Of Bomb Found In Mangaluru Airport

ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?

"ಇದೇ ವಿಷಯಕ್ಕೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಆ ವ್ಯಕ್ತಿ ಅರ್ಜಿ ಸಲ್ಲಿಸಿದ್ದು, ಸೂಕ್ತ ದಾಖಲೆ ಕೊಡದ ಹಿನ್ನೆಲೆಯಲ್ಲಿ ನೌಕರಿ ದೊರೆತಿರಲಿಲ್ಲ. ಆ ಸಿಟ್ಟಿಗೆ ಬಾಂಬ್ ಇಟ್ಟಿದ್ದೇನೆ ಎಂದು ಎರಡು ಬಾರಿ ಫೋನ್ ಮಾಡಿದ್ದ. ವಿಮಾನ, ಪಾರ್ಕಿಂಗ್ ಲಾಟ್ ‌ನಲ್ಲಿ ಬಾಂಬ್ ಇಟ್ಟಿದ್ದೇನೆ ಎಂದು ಫೋನ್ ಮಾಡಿ ಬೆದರಿಕೆ ಒಡ್ಡಿದ್ದ. ಆಗಸ್ಟ್ 2018ರಲ್ಲಿ ಬೆಂಗಳೂರು ಏರ್‌ಪೋರ್ಟ್ ಪೊಲೀಸರಿಂದ ಈತ ಬಂಧಿತನಾಗಿದ್ದ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
Police have started investigating about the person who's picture released yesterday in relation to bomb found at mangaluru airport, It is said that he is from Udupi, an engineer graduate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X