ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವ ಜನತೆ ಭವಿಷ್ಯ ನುಂಗುತ್ತಿರುವ ಸುರತ್ಕಲ್ ಡ್ರಗ್ಸ್ ಜಾಲ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಇಂಜಿನಿಯರಿಂಗ್ ವ್ಯಾಸಂಗಕ್ಕೆ ಶ್ರೇಷ್ಠ ತಾಣವೆಂದೇ ರಾಜ್ಯದ ಬಯಲು ಸೀಮೆಯಲ್ಲಿ ಖ್ಯಾತವಾಗಿರುವ ಸುರತ್ಕಲ್ ಈಗ ಮಾದಕ ವ್ಯಸನಿಗಳ ರಾಜಧಾನಿಯಾಗುತ್ತಿದೆಯೇ ? ಇಂಥದ್ದೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ.

'ಒನ್ ಇಂಡಿಯಾ ಕನ್ನಡ'ಕ್ಕೆ ಸಿಕ್ಕಿದ ಮಾಹಿತಿ ಪ್ರಕಾರ ಡ್ರಗ್ಸ್ ಎಂಬ ಮಾದಕ ವಸ್ತುಗಳ ಜಾಲವು ವಿದ್ಯಾರ್ಥಿಗಳ ಭವಿಷ್ಯವನ್ನು ಅಮಲಿನಲ್ಲಿ ತೇಲಾಡಿಸುತ್ತಿದೆ.

Surathkal is now the drugs capital of Mangaluru - Oneindia cover story

ಇಲ್ಲಿ ಡ್ರಗ್ಸ್ ಅಂದರೆ ನಾನಾ ಅರ್ಥಗಳಿವೆ. ಅಯೋಡಿನ್ ಅನ್ನು ಬ್ರೆಡ್ ಜೊತೆ ತಿನ್ನುವುದು, ವೈಟ್ ನರ್ ಮೂಸಿ ನೋಡುವುದು, "ಅವತಾರ್" ಎಂಬ ಸೀಸೆಯನ್ನು ಚೀಪುವುದು, ಪಂಕ್ಚರ್ ಹಾಕಲು ಉಪಯೋಗಿಸುವ ಸೊಲ್ಯೂಷನ್ ಜತೆ ಬ್ರೆಡ್ ಜೊತೆ ತಿನ್ನುವುದು ಇತ್ಯಾದಿ.

ಇದಲ್ಲದೆ, ಮತ್ತು ಬರುವ ಮಾತ್ರೆಗಳು, ಅಫೀಮು, ಗಾಂಜಾ ಇವೆಲ್ಲವನ್ನೂ ನಿಶೆಯ ನಾನಾ ಪದಾರ್ಥಗಳಂತೆ ಬಳಸಲಾಗುತ್ತಿದೆ. ಇದನ್ನು ತಿಂದ್ರೆ ಏನಾಗುತ್ತೆ ಅನ್ನುವ ಪ್ರಶ್ನೆಗೆ, "ಇದನ್ನು ತಿಂದ ತಕ್ಷಣ ನಮ್ಮ ಮೆದಳು ಜಾಗೃತವಾಗುತ್ತೆ. ನಾವು ಸ್ವರ್ಗಲೋಕದಲ್ಲೇ
ತೇಲಾಡುತ್ತೇವೆ. ಅದು ಇಲ್ಲ ಅಂದ್ರೆ ಬೇರೆ ಏನೋ ಇಲ್ಲ ಎಂಬೆಲ್ಲಾ ಅನುಭವಕ್ಕೆ ಬರುತ್ತೆ ಅಂತ'' ಡ್ರಗ್ಸ್ ಗ್ರಾಹಕನೊಬ್ಬ ಹೇಳುತ್ತಾನೆ.

Surathkal is now the drugs capital of Mangaluru - Oneindia cover story

ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್ ಕೆಲವು ಕಾಲೇಜು ಹುಡುಗರನ್ನೇ ಸೆಟ್ ಮಾಡಿಕೊಳ್ಳುವ ಗಾಂಜಾ ಗ್ಯಾಂಗು ಯುನಿಫಾರ್ಮ್ ಧರಿಸಿದ
ಹುಡುಗರ ಸ್ಕೂಲ್ ಬ್ಯಾಗಿನೊಳಗಿಂದಲೇ ವ್ಯವಸ್ಥಿತವಾಗಿ ಅದು ರವಾನೆಯಾಗುವಂತೆ ಯೋಜನೆ ರೂಪಿಸಿದೆ. ಕೇವಲ ಗಾಂಜಾ ಮಾತ್ರವೇ ಅಲ್ಲ, ಇತರೇ ಭಯಾನಕವಾದ ಅಮಲು ಪದಾರ್ಥಗಳೂ ಅದರಲ್ಲಿ ಸೇರಿರುತ್ತವೆ. ಕೆಲವು ಹುಡುಗರಿಗೆ ಮಾತ್ರೆಗಳನ್ನು ಪೂರೈಕೆ ಮಾಡುವ ತಂಡಗಳೂ ಇವೆ.

ಮತ್ತು ತರುವ ಔಷಧಿಗಳನ್ನು ಕಕ್ಕುವ ಹಾವುಗಳನ್ನೂ ಮಾರಾಟ ಮಾಡುವ ಮೆಡಿಕಲ್ ಶಾಪುಗಳು ಸುರತ್ಕಲ್ ನ್ಯಾದಂತ ಇವೆ. ಒಮ್ಮೆ ಪೊಲೀಸರು ಸುರತ್ಕಲ್ ನ ಸುತ್ತಮುತ್ತಲಲ್ಲಿರುವ ಕೆಲವು ಮೆಡಿಕಲ್ ದುಕಾನಿಗೆ ಹೊಕ್ಕರೆ ಅದು ಅರ್ಥವಾಗುತ್ತದೆ.

ಇದೆಲ್ಲದರ ಹಿಂದೆ ಒಂದು ಮಾಫಿಯಾವಿದೆಯೇ ಎಂಬ ಅನುಮಾನ ಬರುವುದು ಸಹಜ. ಅದಕ್ಕೆ ಪೊಲೀಸರೇ ಉತ್ತರಿಸಬೇಕು. ಆದರೆ ಸುರತ್ಕಲ್ ನಲ್ಲಿ ಪಾತಕ ಪ್ರಕರಣಗಳು ಹೆಚ್ಚಾಗಲು ಡ್ರಗ್ಸ್ ಕೂಡ ಒಂದು ಕಾರಣ ಎನ್ನಲಾಗುತ್ತಿದೆ. ಗಾಂಜಾದ ಗ್ಯಾಂಗುಗಳು ನಡುವೆಯೇ ಹಲವಾರು ತಲೆಗಳುರುಳಿವೆ. ಇತ್ತೀಚಿಗೆ ಸುರತ್ಕಲ್ ನ ಕೇಶವ ಶೆಟ್ಟಿಯ ಹತ್ಯೆಯನ್ನು ನಡೆಸಿದ್ದೂ ಕೂಡ ಎದುರಾಳಿ
ಗಾಂಜಾ ಗ್ಯಾಂಗ್ ಎನ್ನಲಾಗುತ್ತಿದೆ.

Surathkal is now the drugs capital of Mangaluru - Oneindia cover story

ಕಾಲೇಜುಗಳ ಆವರಣಗಳು, ಕಾಲೇಜು ಸುತ್ತಮುತ್ತಲಿನ ಸಣ್ಣಪುಟ್ಟ ಅಂಗಡಿಗಳು, ಗಂಜಿ ಹೋಟೆಲ್ಗಳು, ವಸತಿಗೃಹಗಳು, ಗಾಂಜಾ ಅಡ್ಡೆಗಳಾಗಿ ಪರಿವರ್ತನೆಯಾಗಿವೆ. ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದಕ್ಕೆ ಪ್ರಮುಖ ಗಿರಾಕಿಗಳಾಗಿರುವುದು ಆತಂಕದ ಸಂಗತಿ.

ಚಾರಿತ್ಯ್ರ ಹಾಳು ಮಾಡಲು ಸಹಕಾರಿ ದೂರದೂರುಗಳಿಂದ ಇಲ್ಲಿ ಕಲಿಯಲೆಂದು ಬರುವ ವಿದ್ಯಾರ್ಥಿಗಳು ಹೆತ್ತವರ ಕಟ್ಟುಪಾಡುಗಳಿಲ್ಲದೆ ಎಲ್ಲೇ ಮೀರಿ ವರ್ತಿಸುತ್ತಾರೆ . ಇವರಿಗೆ ಮಜಾ ಮಾಡಲು ಸಾಕಷ್ಟು ಹಣ ಕೂಡ ಸಿಗುತ್ತದೆ. ಇವರ ಜೊತೆ ಸ್ಥಳೀಯ ವಿದ್ಯಾರ್ಥಿಗಳೂ ಸೇರುತ್ತಾರೆ. ಹಣ ಮತ್ತು ಹುಡುಗಿಯರನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದ ಹುಡುಗರು ಸ್ವಲ್ಪಸ್ವಲ್ಪವೇ ಅಮಲು ನೀಡಿ ಅವರನ್ನು ವ್ಯಸನಿಗಳನ್ನಾಗಿಸುತ್ತಾರೆ.

ಅಮಲಿನಲ್ಲಿ ಏನು ನಡೆಯುತ್ತದೆ ಎಂಬುದು ಹುಡುಗಿಯರಿಗೆ ಗೊತ್ತಿರುವುದಿಲ್ಲ, ಕೇರಳ, ಮಹಾರಾಷ್ತ್ರ, ಉತ್ತರ ಭಾರತದಿಂದ ಕಲಿಯಲೆಂದು ನಗರಕ್ಕೆ ಬರುವ ವಿದ್ಯಾರ್ಥಿಗಳು ಹಾಸ್ಟೆಲ್ ರೂಮುಗಳಲ್ಲಿ ತಂಗುತ್ತಾರೆ. ಇಂತಹ ವಿದ್ಯಾರ್ಥಿಗಳು "ಬೋರ್" ಹೊಡೆದಾಗ ಮಜಾ ಮಾಡಲು ಮಾದಕ ದ್ರವ್ಯಗಳ ಮೊರೆ ಹೋಗುತ್ತಾರೆ.

ಗೋವಾದಿಂದ ಗಾಂಜಾ ರವಾನೆಹೆರಾಯಿನ್, ಕೊಕೇನ್, ವಾಟ್ಸನ್ , ಬ್ರೌನ್ ಶುಗರ್, ದುಬಾರಿ ಮಾದಕ ದ್ರವ್ಯಗಳಾಗಿದ್ದು ಒಂದು ಗ್ರಾಂಗೆ 1000 ರೂ. ತಗಲುತ್ತದೆ. ಈ ವಸ್ತುಗಳು ಗೋವಾದಿಂದ ನೇರವಾಗಿ ಹಡಗು, ರೈಲು, ಮತ್ತು ಬಸ್ ಮುಖಾಂತರ ಮಾಡಲು ಮಣಿಪಾಲಕ್ಕೆ ಬಂದು ಬಳಿಕ ಮಂಗಳೂರು ತಲುಪುತ್ತದೆ.

ಗೋವಾದಲ್ಲಿ ವಿದೇಶಿಯರು ಹೆಚ್ಚಾಗಿ ಬರುವುದರಿಂದ ಅಲ್ಲಿ ಮಾದಕ ವಸ್ತುಗಳು ಮುಕ್ತ ಮಾರುಕಟ್ಟೆಯಲ್ಲಿ ಸಿಗುತ್ತದೆ. ಗಾಂಜಾ ಕಡಿಮೆ ದರದ್ದಾಗಿದ್ದು ಇದು ಶಿವಮೊಗ್ಗ ಮತ್ತು ಕೇರಳ, ಚಾರ್ಮಾಡಿ ಘಟಿಯಿಂದ ಮಂಗಳೂರಿಗೆ ಬರುತ್ತದೆ. ಸುರತ್ಕಲ್ ನ ಪ್ರತಿಷ್ಠಿತ ಕಾಲೇಜುಗಳು, ಎಲ್ಲ ಎಂಜಿನಿಯರಿಂಗ್ , ಮೆಡಿಕಲ್ ಕಾಲೇಜ್ ಗಳು ಮತ್ತು ನರ್ಸಿಂಗ್ ಕಾಲೇಜುಗಳಲ್ಲಿ ಈ ಜಲ ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿದೆ.

English summary
Popular tourist and educational destination Surathkal now became destination for drugs. The city turns to be the drugs capital of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X