• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಷಪ್ರಸಾದ: ಪೋಷಕರ ಕಳೆದುಕೊಂಡ ಮಕ್ಕಳ ದತ್ತು ಪಡೆಯಲಿದೆ ಆಳ್ವಾಸ್

|

ಮಂಗಳೂರು ಡಿಸೆಂಬರ್ 17: ಚಾಮರಾಜನಗರದ ಕಿಚ್ಚುಗುತ್ತಿಯ ಸುಳ್ವಾಡಿ ಮಾರಮ್ಮನ ದೇವಸ್ಥಾನದಲ್ಲಿ ಪ್ರಸಾದ ತಿಂದು 14 ಮಂದಿ ಮೃತಪಟ್ಟಿದ್ದು, ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದೆ, ಜೊತೆಗೆ ಶಿಕ್ಷಣ ಸಂಸ್ಥೆ ಆಳ್ವಾಸ್‌ ಕೂಡ ನೊಂದವರ ಕಷ್ಟಕ್ಕೆ ಸಹಾಯ ಮಾಡಲು ಮುಂದೆ ಬಂದಿದೆ.

ಸುಳ್ವಾಡಿಯ ಮಾರಮ್ಮ ದೇಗುಲ ಪ್ರಸಾದ ದುರಂತ ಪ್ರಕರಣದಲ್ಲಿ ತಂದೆ, ತಾಯಿ ಕಳಕೊಂಡ ಮೂವರು ಮಕ್ಕಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ನೆರವು ನೀಡುವುದಾಗಿ ಘೋಷಿಸಿದೆ. ಮಕ್ಕಳ ದತ್ತು ಪಡೆದು ಉಚಿತ ಶಿಕ್ಷಣ ಕೊಡಿಸುವುದಾಗಿ ಆಳ್ವಾಸ್‌ ಘೋಷಣೆ ಮಾಡಿದೆ. ಮಕ್ಕಳು ಒಪ್ಪಿದಲ್ಲಿ ಮೂಡುಬಿದಿರೆಯ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದ್ದಾರೆ.

ವಿಷಪ್ರಸಾದ ಸೇವನೆ : ದಾರಿತಪ್ಪಿದ ಚಾಲಕನಿಂದ 35 ಜೀವ ಉಳಿಯಿತು

ಬಿಎ ಓದುತ್ತಿರುವ ರಾಣಿ, ನರ್ಸಿಂಗ್ ಕಲಿಯುತ್ತಿರುವ ಪ್ರಿಯಾ ಮತ್ತು ಪಿಯುಸಿ ವಿದ್ಯಾರ್ಥಿ ರಾಜೇಶ್ ಅವರನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ದತ್ತು ಪಡೆದು ಅವರಿಗೆ ಉಚಿತ ಶಿಕ್ಷಣ ನೀಡಲು ಮುಂದೆ ಬಂದಿದೆ. ಅವರು ಒಪ್ಪಿದ್ದರೆ ಅವರಿಗೆ ಶಿಕ್ಷಣ, ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅವರ ಸ್ನಾತಕೋತ್ತರ ವ್ಯಾಸಂಗದವರೆಗೆ ನೀಡಲು, ಆ ಬಳಿಕ ಅವರಿಗೆ ಸೂಕ್ತವಾದ ಉದ್ಯೋಗದ ಅವಕಾಶವನ್ನು ಕಲ್ಪಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ನಿರ್ಧರಿಸಿದ್ದಾರೆ.

ವಿಷಪ್ರಸಾದ ಪ್ರಕರಣ: ಸಾಲೂರು ಮಠದ ಶ್ರೀಗಳು ಹೇಳಿದ್ದೇನು ?

ಮೂವರು ಮಕ್ಕಳಲ್ಲಿ ಅವರ ಅಭಿಪ್ರಾಯವನ್ನು ಕೇಳಿ, ಅವರಿಗೆ ಒಪ್ಪಿಗೆ ಇದ್ದರೆ ಮುಂದಿನ ವ್ಯವಸ್ಥೆ ಕಲ್ಪಿಸುತ್ತೇವೆ. ಮಕ್ಕಳ ಉತ್ತಮ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಪಂದಿಸಲು ನಿರ್ಧಾರ ಮಾಡಿದ್ದೇವೆ ಎಂದು ಮೋಹನ್ ಆಳ್ವಾ ಹೇಳಿದ್ದಾರೆ.

English summary
Alvas education institution's chairman Dr Mohan Alva Came front to adopt three children one who lost their parents in Sulwadi temple tragedy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more