ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯ: ಹೋರಿ ಹಾಯ್ದು ದೇವಾಲಯದ ಮ್ಯಾನೇಜರ್ ಸಾವು

By Madhusoodhan
|
Google Oneindia Kannada News

ಸುಳ್ಯ, ಜೂನ್ ೦6: ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ಸೇರಿದ ಹೋರಿಯೊಂದು ಹಾಯ್ದು ದೇವಾಲಯದ ಮ್ಯಾನೇಜರ್ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ.

ಭಾರೀ ಗಾತ್ರದ ಹೋರಿ ಕಳೆದ 7 ವರ್ಷಗಳಿಂದ ದೇವಾಲಯದಲ್ಲಿ ಇತ್ತು. ಅದನ್ನು ದೇವಳಕ್ಕೆ ಸಂಬಂಧಪಟ್ಟ ಸಿಬ್ಬಂದಿ ನೋಡಿಕೊಳ್ಳುತ್ತಿದ್ದು, ದೇವಳದ ಮ್ಯಾನೇಜರ್ ನಾರಾಯಣ ಆಹಾರ ನೀಡುತ್ತಿದ್ದರು.[ಅರ್ಧ ಶತಕದಿಂದ ಕಾಡಿನಲ್ಲೇ ನೆಲೆಸಿರುವ ಸುಳ್ಯದ ಕೆಂಚಪ್ಪನ ರೋಚಕ ಕಥೆ!]

mangaluru

ಸೋಮವಾರ ದೇವಾಲಯದ ಸಮೀಪದಲ್ಲಿ ಮೇಯಲು ಕಟ್ಟಿ ಹಾಕಿದ್ದ ಹೋರಿಯನ್ನು ನಾರಾಯಣ ಅವರು ಪೂಜೆಯ ವೇಳೆಗೆ ದೇವಾಲಯಕ್ಕೆ ಕರೆತರಲು ಹೋಗಿದ್ದ ವೇಳೆ ಹೋರಿ ಅವರಿಗೆ ಕೊಂಬುಗಳಿಂದ ಹಾಯ್ದಿತ್ತೆನ್ನಲಾಗಿದೆ. ಇತರರು ಅದರ ಹಗ್ಗವನ್ನು ಎಳೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಗಂಭೀರವಾಗಿ ಗಾಯಗೊಂಡ ನಾರಾಯಣ ಸ್ಥಳದಲ್ಲೇ ಮೃತಪಟ್ಟರು.[ಕಾಡಿನಲ್ಲಿನ ಲಟಾರಿ ಕಾರೇ ಸುಳ್ಯದ ಸಾಹುಕಾರನ 'ಅರಮನೆ']

ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆದು ಬಳಿಕ ಮನೆಯವರಿಗೆ ಮೃತದೇಹವನ್ನು ಬಿಟ್ಟುಕೊಡಲಾಯಿತು. ಪೈಲಾರಿನ ಕಳಂಜೇರಿಯವರಾದ ನಾರಾಯಣ ಬೆಳ್ಳಾರೆಯಲ್ಲಿ ವಾಸ್ತವ್ಯದಲ್ಲಿದ್ದರು. ಕಳೆದ 15 ವರ್ಷಗಳಿಂದ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

English summary
Mangaluru: Bellare Ajapila Shree Mahalingeswar temple manager dead After A bull attack on 6 June 2016. Manegar Narayanappa dead because of major injures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X