ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಲಡ್ಕದಲ್ಲಿ ಬಾವಿಯೊಂದರ ಜಲಮಟ್ಟ ಹಠಾತ್‌ ಏರಿಕೆ, ಕಾರಣ ಮಾತ್ರ ನಿಗೂಢ!

|
Google Oneindia Kannada News

ಮಂಗಳೂರು, ಫೆಬ್ರವರಿ 22: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದೆ. ಬೇಸಿಗೆ ಸಮೀಪಿಸುತ್ತಿದಂತೆ ಝಳಕ್ಕೆ ಕೆರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನಡುವೆ ಬಾವಿಯಲ್ಲಿ ನೀರಿನ ಮಟ್ಟ ದಿಢೀರನೆ ಹೆಚ್ಚಾದರೆ ? ಇಂತಹದೊಂದು ಅಚ್ಚರಿಯ ಬೆಳವಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪ ನಡೆದಿದೆ.

ಇಲ್ಲಿಯ ಪಾಲಡ್ಕ ಎಂಬಲ್ಲಿನ ನಿವಾಸಿಯೊಬ್ಬರ ಮನೆಯ ಬಾವಿಯಲ್ಲಿ 3 ಅಡಿಗಳಷ್ಟಿದ್ದ ನೀರಿನ ಮಟ್ಟ ಒಮ್ಮಿಂದೊಮ್ಮೆ ಹಠಾತ್‌ 19 ಅಡಿಗೇರಿದೆ.

ಅವಳಿ ದೈವಗಳ ಪವಾಡ:ಪಾಪೆಮಜಲು ಕೋಟಿ-ಚೆನ್ನಯ ಗರಡಿ ಬಳಿ ಚಿಮ್ಮಿದ ನೀರು!ಅವಳಿ ದೈವಗಳ ಪವಾಡ:ಪಾಪೆಮಜಲು ಕೋಟಿ-ಚೆನ್ನಯ ಗರಡಿ ಬಳಿ ಚಿಮ್ಮಿದ ನೀರು!

ಪಾಲಡ್ಕದ ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಪಾಲಡ್ಕ ಚರ್ಚ್‌ ಸಮೀಪ ಇರುವ ಸತೂರ್ನಿ-ವೀಣಾ ಡಿ'ಸಿಲ್ವಾ ಅವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಸಂಗತಿ ಬೆಳಕಿಗೆ ಬಂದಿದೆ. ಸತೂರ್ನಿ ವೀಣಾ ಡಿ'ಸಿಲ್ವಾ ದಂಪತಿ ಕೆಲವು ವರ್ಷಗಳ ಹಿಂದೆ ಈ ಜಾಗ ಖರೀದಿಸಿ ತಮಗೊಂದು ಪಟ್ಟ ಮನೆ ನಿರ್ಮಿಸಿದ್ದರು.

Sudden rise of water level in well at Paladka

ಮನೆಯ ಕಾಂಪೌಂಡ್ ನಲ್ಲಿ 40 ಅಡಿ ಆಳದ ತೆರೆದ ಬಾವಿಯನ್ನು ತೋಡಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ನೀರಿನ ಮಟ್ಟ 3 ರಿಂಗ್‌ಗಳಿಗಷ್ಟೇ ಸೀಮಿತವಾಗಿತ್ತು. ಸತೂರ್ನಿ ಇತ್ತೀಚೆಗೆ ಬಾವಿಯಲ್ಲಿ ನೀರಿನ ಮಟ್ಟ ಪರೀಕ್ಷಿಸಿದಾಗ ಅಷ್ಟೇ ಇತ್ತು.

 ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ? ರಾಯರ ಮಂತ್ರಾಕ್ಷತೆಯಾಯ್ತು ರತ್ನಖಚಿತ ಸಾಲಿಗ್ರಾಮ! ಬಾಗಲಕೋಟೆಯಲ್ಲಿ ಈ ಪವಾಡ ನಡೆದದ್ದು ಹೇಗೆ?

ಈ ನಡುವೆ ಪಾಲಡ್ಕ ಪ್ರದೇಶದ ಸುತ್ತಮುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಆದರೆ ಇದೊಂದು ಬಾವಿಯಲ್ಲಿ ಮಾತ್ರ ನೀರು ಏಕಾಏಕಿ ಏರಿಕೆಯಾಗಿದೆ. ಈ ಸಂಗತಿ ಅಚ್ಚರಿಗೆ ಕಾರಣವಾಗಿದ್ದು, ಜನರ ಆಕರ್ಷಣೆಯ ಕೆಂದ್ರವಾಗಿದೆ.

 ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ

ಈ ಬಾವಿಯಿಂದ ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿ ಪಾಲಡ್ಕ ಚರ್ಚ್‌ನ ಧರ್ಮಗುರುಗಳು ಹಾಗೂ ಊರವರ ಮುತುವರ್ಜಿಯ ಫಲವಾಗಿ ಜನಪ್ರತಿನಿಧಿಗಳ ಪ್ರಯತ್ನ ದಿಂದ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿತ್ತು.

ಬಾವಿಯಲ್ಲಿ ನೀರಿ ಮಟ್ಟ ಏಕಾಏಕಿ ಏರಿಕೆಯಾಗಲು ತುಸು ದೂರದಲ್ಲಿ ನಿರ್ಮಾಣವಾಗಿರುವ ಈ ಕಿಂಡಿ ಅಣೆಕಟ್ಟು ಕಾರಣ ಎನ್ನಲಾಗಿದೆ. ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿಯಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಈ ಭಾಗದ ಇತರ ಬಾವಿಗಳಲ್ಲಿ ಏಕೆ ನೀರಿನ ಮಟ್ಟ ಏರಿಕೆಯಾಗಿಲ್ಲ ಎಂಬ ಪ್ರಶ್ನೆ ಈಗ ಜನರನ್ನು ಕಾಡತೊಡಗಿದೆ.

English summary
In well at Paladka near Moodbidre the level of water has risen by 3ft to 19 ft. This incident rised surprised and curiosity among the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X