ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಳ್ಯದಲ್ಲಿ ರಸ್ತೆ ಬದಿ ಕಸ ಸುರಿದ ವಿದ್ಯಾರ್ಥಿಗೆ ಸಾವಿರ ರೂಪಾಯಿ ದಂಡ

|
Google Oneindia Kannada News

ಮಂಗಳೂರು, ಜುಲೈ 6: ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಸುಳ್ಯ ನಗರ ಪಂಚಾಯತ್ ಖಡಕ್ ಎಚ್ಚರಿಕೆ ನೀಡಿದೆ. ರಸ್ತೆ ಬದಿ ಕಸ ಎಸೆದ ಕಾಲೇಜು ವಿದ್ಯಾರ್ಥಿಗೆ ಸುಳ್ಯ ನಗರ ಪಂಚಾಯತ್ 1 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಎಚ್ಚರಿಕೆ ನೀಡಿದೆ.

ಈ ಸ್ಥಳದಲ್ಲಿ ಕಸ ಎಸೆಯಬಾರದು ಎಂದು ನಾಮಫಲಕವನ್ನು ಕೆಲ ತಿಂಗಳ ಹಿಂದೆ ಹಾಕಿದ್ದರೂ, ಸುಳ್ಯದ ಹಳೆ ಪಿ.ಡಬ್ಲ್ಯೂ.ಡಿ. ಕಚೇರಿ ಬಳಿ ಕಸದ ಗಂಟೊಂದು ಬಿದ್ದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಕಳೆದ ಕೆಲ ದಿನಗಳಿಂದ ಫಲಕ ಹಾಕಿದ ಸ್ಥಳದಲ್ಲಿ ಕಸದ ಕಟ್ಟು ಬೀಳುತ್ತಲೇ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಗರ ಪಂಚಾಯತ್ ಅಧಿಕಾರಿಗಳು, ಕಸ ಎಸೆಯುವವರನ್ನು ಪತ್ತೆ ಹಚ್ಚಲೆಂದೇ ಸ್ಥಳದಲ್ಲಿ 2 ಸಿ.ಸಿ. ಟಿವಿ ಕ್ಯಾಮರಾವನ್ನು ಅಳವಡಿಸಿದರು.

 ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ ಎಲ್ಲೆಂದರಲ್ಲಿ ಕಸ ಹಾಕೋರಿಗೆ ಪಾಠ ಕಲಿಸಲು ಈತ ಮಾಡಿದ ಉಪಾಯಕ್ಕೆ ಸಿಕ್ಕಿತು ಫಲ

ಫಲಕ ಹಾಕಿದ ಸ್ಥಳದಲ್ಲಿ ಮತ್ತೆ ಕಸದ ಕಟ್ಟು ಬಿದ್ದಿರುವುದನ್ನು ಗಮನಿಸಿದ ಅಧಿಕಾರಿಗಳು ಸಿ.ಸಿ.ಕ್ಯಾಮರಾ ಪರಿಶೀಲಿಸಿದರು. ಆಗ ವ್ಯಕ್ತಿಯೊಬ್ಬ ಬೈಕ್ ‌ನಲ್ಲಿ ಬಂದು ಕಸದ ಕಟ್ಟನ್ನು ಬಿಸಾಡಿ ಹೋಗುವುದು ಕಂಡುಬಂದಿದೆ.

Student fined 1000 rupees for throwing garbage in Sullia

ಕಸ ಎಸೆದ ವ್ಯಕ್ತಿಯ ಗುರುತು ಅಧಿಕಾರಿಗಳಿಗೆ ದೊರಕಿತು. ಆತ ಸುಳ್ಯದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿ ಎಂದು ತಿಳಿದುಬಂದಿತು. ಸುಳ್ಯದ ಅಂಬಟಡ್ಕದಲ್ಲಿ ವಿದ್ಯಾರ್ಥಿ ಬಾಡಿಗೆ ಕೊಠಡಿಯಲ್ಲಿ ಆತ ಇರುವುದಾಗಿಯೂ ಖಚಿತಪಡಿಸಿಕೊಂಡ ಅಧಿಕಾರಿಗಳು ಅಲ್ಲಿಗೆ ಹೋಗಿದ್ದರು. ಆದರೆ ಆ ವೇಳೆ ವಿದ್ಯಾರ್ಥಿ ಅಲ್ಲಿರಲಿಲ್ಲ. ಅಧಿಕಾರಿಗಳು ವಿದ್ಯಾರ್ಥಿ ಕೊಠಡಿಗೆ ಬೀಗ ಹಾಕಿ ಮನೆಯ ಮಾಲೀಕರಿಗೆ ವಿದ್ಯಾರ್ಥಿಯನ್ನು ನಗರ ಪಂಚಾಯತ್ ಗೆ ಕಳುಹಿಸುವಂತೆ ಹೇಳಿದ್ದರು. ವಿದ್ಯಾರ್ಥಿ ನಗರ ಪಂಚಾಯತ್ ಬಂದಾಗ 1 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

English summary
Sullia town Panchayath fined 1000 rupees to College student who threw bundle of garbage by road side. This has warned trash throwers everywhere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X