ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ಯಾಚಾರದ ವಿಡಿಯೋ ವೈರಲ್: ಪುತ್ತೂರು ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ನಿರ್ಬಂಧ

|
Google Oneindia Kannada News

ಮಂಗಳೂರು, ಜುಲೈ 16: ಪುತ್ತೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಮೊಬೈಲ್ ಫೋನ್‌ನಲ್ಲಿ ಅದರ ವಿಡಿಯೋ ತಯಾರಿಸಿ, ಆ ವಿಡಿಯೋ ವೈರಲ್ ಮಾಡಿದ ಪ್ರಕರಣ ಬೆಳಕಿಗೆ ಬಂದ ನಂತರ ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಪುತ್ತೂರಿನಲ್ಲಿ ವಿದ್ಯಾರ್ಥಿಗಳ ಮೊಬೈಲ್ ಫೋನ್ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜುಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಪೊಲೀಸರ ತಂಡ ವಿದ್ಯಾರ್ಥಿಗಳಿಂದ 24 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿತ್ತು. ಶಾಲೆ- ಕಾಲೇಜುಗಳ ಹೊರಗೆ ಇರುವ ಅಂಗಡಿಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ಇಟ್ಟು ಬರುವ ವಿಚಾರ ಕೂಡ ಬೆಳಕಿಗೆ ಬಂದಿತ್ತು.

 ಉಪ್ಪಿನಂಗಡಿ ಕಾಲೇಜುಗಳ ಮೇಲೆ ಪೊಲೀಸರ ದಾಳಿ: 24 ಮೊಬೈಲ್ ವಶ ಉಪ್ಪಿನಂಗಡಿ ಕಾಲೇಜುಗಳ ಮೇಲೆ ಪೊಲೀಸರ ದಾಳಿ: 24 ಮೊಬೈಲ್ ವಶ

ಇದೀಗ ವಿದ್ಯಾರ್ಥಿಗಳ ಮೊಬೈಲ್ ಫೋನ್ ಬಳಸದಂತೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧರಿಸಲಾಗಿದೆ. "ಮುಂದಿನ ದಿನಗಳಲ್ಲೂ ದಾಳಿ ನಡೆಯಲಿದ್ದು, ಅಂಗಡಿಗಳಲ್ಲಿ ಮತ್ತು ಶಾಲೆ- ಕಾಲೇಜು ವಿದ್ಯಾರ್ಥಿಗಳ ಬಳಿ ಮೊಬೈಲ್‌ ಫೋನ್ ಸಿಕ್ಕರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು" ಎಂದು ಪುತ್ತೂರಿನ ಸಹಾಯಕ ಕಮಿಷನರ್ ಎಚ್‌.ಕೆ. ಕೃಷ್ಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.

strict action against use of mobile in schools and colleges in puttur

"ಶಾಲೆ- ಕಾಲೇಜುಗಳಲ್ಲಿ ಮೊಬೈಲ್‌ ಫೋನ್ ಬಳಕೆ ಕುರಿತು ವಿಶೇಷ ಜಾಗೃತಿ ಅಭಿಯಾನ ಆರಂಭಿಸಲಾಗಿದ್ದು, ಎಚ್ಚರಿಕೆ ನೀಡುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯಿಂದ ದಿಢೀರ್ ಶಾಲೆ- ಕಾಲೇಜು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಇದೇ ಕಾರಣಕ್ಕಾಗಿ ಶೀಘ್ರ ಅಧಿಕಾರಿಯೊಬ್ಬರ ನೇಮಕ ಕೂಡ ಮಾಡಲಾಗುವುದು. ಆ ಅಧಿಕಾರಿಯು ಮಕ್ಕಳಲ್ಲಿ ಮೊಬೈಲ್‌ ಫೋನ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಲಿದ್ದಾರೆ" ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

English summary
Puttur Assistant Commissioner H K Krishna Murthi warned the school and college students regarding the use of mobile phones in colleges. strict action will be taken against college and school management if students caught with cell phone
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X