ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಯುವಕರನ್ನು ಆಕರ್ಷಿಸುತ್ತಿದೆ ಸ್ಟ್ರೀಟ್ ಫುಟ್ಬಾಲ್

By ಗುರುರಾಜ ಕೆ.
|
Google Oneindia Kannada News

ಮಂಗಳೂರು, ಜುಲೈ.17: ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್ ಈಗ ಮಂಗಳೂರಿಗೂ ಕಾಲಿರಿಸಿದೆ. ಮಂಗಳೂರು ನಗರದ ಕುದ್ರೋಳಿ ದೇವಸ್ಥಾನದ ಸಮೀಪ ಅಳಕೆಯ ರಸ್ತೆ ಬದಿಯಲ್ಲಿ ಕೃತಕ ಟರ್ಪ್ ಆಳವಡಿಸಿದ ಮಿನಿ ಫುಟ್ಬಾಲ್ ಕ್ರೀಡಾಂಗಣವೊಂದು ಸ್ಟ್ರೀಟ್ ಫುಟ್ಬಾಲ್ ಆಗಿ ಸಜ್ಜಾಗಿದೆ.

ಪುಟ್ಬಾಲ್ ಕ್ರೀಡೆಗೆ ಮಂಗಳೂರು ನಗರದಲ್ಲಿ ಅವಕಾಶ ಇಲ್ಲದೇ ಇರುವುದನ್ನು ಗಮನಿಸಿದ ಕರಾವಳಿಯ ಮೂವರು ಯುವಕರು ಒಂದಾಗಿ ಪರ್ಫೆಕ್ಟ್ ಪಾಸ್ ಎಂಬ ಹೆಸರಿನ ಸಂಸ್ಥೆ ಆರಂಭಿಸಿ ಸ್ಟ್ರೀಟ್ ಫುಟ್ಬಾಲ್ ಜನಪ್ರಿಯಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಬ್ರುಯ್ನೆ ಬಾರಿಸಿದ ಗೋಲಿನಿಂದ ಹೈಟಿ ಸರ್ಕಾರವೇ ಪತನ!ಬ್ರುಯ್ನೆ ಬಾರಿಸಿದ ಗೋಲಿನಿಂದ ಹೈಟಿ ಸರ್ಕಾರವೇ ಪತನ!

 ಫೀಫಾ ಗುಣಮಟ್ಟದ ಕ್ರೀಡಾಂಗಣ

ಫೀಫಾ ಗುಣಮಟ್ಟದ ಕ್ರೀಡಾಂಗಣ

ನಗರದ ಕುದ್ರೋಳಿ ದೇವಸ್ಥಾನ ಸಮೀಪ ಇರುವ ರಸ್ತೆ ಬದಿಯಲ್ಲಿ ಸುಮಾರು 10 ಸಾವಿರ ಅಡಿ ವಿಸ್ತೀರ್ಣದ ಜಾಗದಲ್ಲಿ ಫೀಫಾ ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿದ್ದಾರೆ. ಫ್ರಾನ್ಸ್ ನಿಂದ ಆಮದು ಮಾಡಿದ ಕೃತಕ ಟರ್ಫ್ ಕ್ರೀಡಾಂಗಣಕ್ಕೆ ಆಳವಡಿಸಲಾಗಿದೆ.

 ಸುರಕ್ಷತೆಗೆ ಹೆಚ್ಚಿನ ಒತ್ತು

ಸುರಕ್ಷತೆಗೆ ಹೆಚ್ಚಿನ ಒತ್ತು

ಕ್ರೀಡಾಂಗಣಕ್ಕೆ ಕೊಂಚ ಇಳಿಜಾರಾಗಿ ಸಿಮೆಂಟ್ ಬೆಡ್ ಆಳವಡಿಸಲಾಗಿದ್ದು, ಇದರಿಂದಾಗಿ ಮಳೆಗಾಲದಲ್ಲೂ ಕ್ರೀಡಾಂಗಣದಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುತ್ತದೆ. ಮೈದಾನದ ಸುತ್ತಲೂ ನೆಟ್ ಆಳವಡಿಸಲಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಈ ಮಿನಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಇದ್ದು, ಬಟ್ಟೆ ಬದಲಾಯಿಸಲು ಕೊಠಡಿ, ಪಾರ್ಕಿಂಗ್ ಸೌಲಭ್ಯ ಹೊಂದಿದೆ.

 ಏನಿದು ಸ್ಟ್ರೀಟ್ ಫುಟ್ಬಾಲ್?

ಏನಿದು ಸ್ಟ್ರೀಟ್ ಫುಟ್ಬಾಲ್?

ನಮ್ಮ ದೇಶದ ಗಲ್ಲಿ, ಓಣಿ ಹೀಗೆ ಎಲ್ಲೆಂದರಲ್ಲಿ ಕ್ರಿಕೆಟ್ ಆಟ ಆಡುವುದು ಸಾಮಾನ್ಯ, ಇದೇ ರೀತಿ ಫುಟ್ಬಾಲ್ ಅನ್ನೇ ಉಸಿರಾಗಿಸಿಕೊಂಡಿರುವ ಅಮೆರಿಕ, ಆಫ್ರಿಕಾ, ಯುರೋಪ್ ದೇಶಗಳಲ್ಲಿ ಇದೇ ರೀತಿ ಗಲ್ಲಿಗಳಲ್ಲಿ ಫುಟ್ಬಾಲ್ ಆಡುವುದು ಸಾಮಾನ್ಯ.

ಈ ರೀತಿ ಆಡುವ ಫುಟ್ಬಾಲ್ ಆಟಕ್ಕೆ ಯಾವುದೇ ರೀತಿಯ ವಿಶೇಷ ನಿಯಮಗಳಿಲ್ಲ. ಹೀಗೆ ರಸ್ತೆ ಬದಿ ಆಡುತ್ತಿದ್ದ ಫುಟ್ಬಾಲ್ ಕ್ರಮೇಣ ಸ್ಟ್ರೀಟ್ ಪುಟ್ ಬಾಲ್ ಆಗಿ ಜನಪ್ರಿಯವಾಯಿತು. ಸಣ್ಣ ಮೈದಾನ ಒಂದು ತಂಡದಲ್ಲಿ 5 ಅಥವಾ 7 ಮಂದಿ ಸದಸ್ಯರು ಇರುತ್ತಾರೆ. ಆಟದಲ್ಲಿ ಯಾವುದೇ ನಿರ್ದಿಷ್ಟ ನಿಯಮಾವಳಿಗಳು ಇರುವುದಿಲ್ಲ.

 ಯುವಕರು-ಮಕ್ಕಳ ಆಕರ್ಷಣೆ

ಯುವಕರು-ಮಕ್ಕಳ ಆಕರ್ಷಣೆ

ಫುಟ್ಬಾಲ್ ಆಟ ನಿಖರತೆ, ಚುರುಕುತನ ಸಹಿತ ಕೌಶಲ್ಯಗಳನ್ನು ಕಲಿಯಲು ಪೂರಕವಾಗಿದೆ. ಅಲ್ಲದೆ ಆಟದ ಜೊತೆ ವ್ಯಾಯಾಮ ಹಾಗೂ ಮನರಂಜನೆ ಇದರ ಉದ್ದೇಶವಾಗಿದೆ. ಆಟಗಾರರು ಎಷ್ಟು ಬಾರಿ ಬಿದ್ದರೂ ಗಾಯವಾಗದ ಹುಲ್ಲು ಹಾಸಿನ ಮೈದಾನವನ್ನು ಟಿವಿಯಲ್ಲಿ ಮಾತ್ರ ನೋಡಿರಬಹುದು.

ಆದರೆ ಈಗ ವಿಶ್ವ ದರ್ಜೆಯ ಕೃತಕ ಟರ್ಪ್ ಆಳವಡಿಸಿದ ಮಿನಿ ಕ್ರಿಡಾಂಗಣ ನೋಡುವ ಹಾಗೂ ಫುಟ್ಬಾಲ್ ಆಡುವ ಅವಕಾಶ ಕಲ್ಪಿಸಲಾಗಿದೆ. ಈ ಸ್ಟ್ರೀಟ್ ಫುಟ್ಬಾಲ್ ಕ್ರೀಡಾಂಗಣ ಈಗಾಗಲೇ ಮಂಗಳೂರು ನಗರದ ಯುವಕರು ಮತ್ತು ಮಕ್ಕಳನ್ನು ಆಕರ್ಷಿಸಿದೆ.

English summary
Street football has now moved to Mangalore. FIFA Standard Stadium has been constructed around 10,000 feet on the roadside near Kudroli temple in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X