ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳದ ಶಬರಿಮಲೆ ಭಕ್ತರ ಪಾದಯಾತ್ರೆಗೆ ಜೊತೆಯಾದ 'ಮಲ್ಲಿ'

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 05; ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಶಬರಿಮಲೆಯಲ್ಲಿ ಮಕರಜ್ಯೋತಿ ಉತ್ಸವ ಆರಂಭವಾಗಿದೆ. ಪ್ರತಿ ನಿತ್ಯ ದೇಶದ ನಾನಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಕೊರೊನಾ ಆತಂಕ, ನಿಯಮದ‌ ನಡುವೆಯೂ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಸಲುವಾಗಿ 41 ದಿನಗಳ‌ಕಾಲ ಕಠಿಣ ವೃತವನ್ನು ಮಾಡಿ ಶಬರಿಮಲೆಯತ್ತ ಭಕ್ತರು ಸಾಗುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಪ್ರತಿನಿತ್ಯ ಸಾವಿರಾರು ವೃತಧಾರಿಗಳು ಶಬರಿಮಲೆಗೆ ತೆರಳುತ್ತಿದ್ದಾರೆ. ಬಂಟ್ವಾಳದಿಂದ ಶಬರಿಮಲೆಗೆ ಪಾದಯಾತ್ರೆ ನಡೆಸಿದ ಮಾಲಾಧಾರಿಗಳಿಗೆ ಶ್ವಾನವೊಂದು ಜೊತೆಯಾದ ಸ್ವಾರಸ್ಯಕರ ಘಟನೆ ನಡೆದಿದೆ.

ಕೇರಳ: ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲ ಮತ್ತೆ ಓಪನ್ಕೇರಳ: ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲ ಮತ್ತೆ ಓಪನ್

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಡಕೊಟ್ಟಿನಿಂದ ಡಿಸೆಂಬರ್ 11ರಂದು ಅಯ್ಯಪ್ಪ ಸ್ವಾಮಿ ವೃತಧಾರಿಗಳ ತಂಡ ಶಬರಿಮಲೆಗೆ ಪಾದಯಾತ್ರೆ ಆರಂ‌ಭಿಸಿತ್ತು. ಈ ತಂಡ ಕೇರಳದ ಎಟ್ಟಮಾನೂರ್ ತಲುಪಿದ ಸಂದರ್ಭದಲ್ಲಿ ತಂಡವನ್ನು ಹೆಣ್ಣು ಶ್ವಾನ ಹಿಂಬಾಲಿಸಿಕೊಂಡು ಬರೋದನ್ನು ಕಂಡಿದ್ದಾರೆ. ಬಳಿಕ‌ ಶ್ವಾನಕ್ಕೆ ತಿಂಡಿ ಹಾಕಿದ್ದಾರೆ. ಬಳಿಕವೂ ಬೆಂಬಿಡಿದ ಶ್ವಾನ ನಿರಂತರವಾಗಿ ಹಲವು ದಿನಗಳ‌ ಕಾಲ ತಂಡದ ಜೊತೆ ಹೆಜ್ಜೆ ಹಾಕಿದೆ.

ಶಬರಿಮಲೆ ಆದಾಯ 78.92 ಕೋಟಿಗೆ ಏರಿಕೆ: ತೀರ್ಥ ಯಾತ್ರಿಕರ ಸಂಖ್ಯೆ 10.35 ಲಕ್ಷಕ್ಕೂ ಅಧಿಕಶಬರಿಮಲೆ ಆದಾಯ 78.92 ಕೋಟಿಗೆ ಏರಿಕೆ: ತೀರ್ಥ ಯಾತ್ರಿಕರ ಸಂಖ್ಯೆ 10.35 ಲಕ್ಷಕ್ಕೂ ಅಧಿಕ

Stray Dog Following Team Of Ayyappa Devotees Of Bantwal

ಪಾದಯಾತ್ರೆ ವೇಳೆ ಈ ತಂಡದ ಜೊತೆಗೆ ಹೆಜ್ಜೆ ಹಾಕುವ ಶ್ವಾನ, ವೃತಧಾರಿಗಳ ತಂಡ ವಿಶ್ರಾಂತಿ ಪಡೆಯುವ‌ ಸಂದರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಈ ತಂಡದ ಜೊತೆಗೆ ಹೆಜ್ಜೆ ಹಾಕಲು ಆರಂಭಿಸುವ ಶ್ವಾನ ತಂಡದಿಂದ ಸುಮಾರು ಮುಂದೆ ಹೋಗಿ ತಂಡದ ದಾರಿ ಕಾಯುತ್ತದೆ.

ಬೀದಿ ನಾಯಿ ಜಗಳಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅಮಾನತು ! ಬೀದಿ ನಾಯಿ ಜಗಳಕ್ಕೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಅಮಾನತು !

ತಂಡ ಹತ್ತಿರ ಬಂದಾಗ ಮತ್ತೆ ಮುಂದೆ ‌ಹೋಗಿ ದಾರಿ ಕಾಯುತ್ತದೆ. ಹೀಗೆ ದಿನವೂ ಸಾಗುತ್ತಿದ್ದಾಗ ಮಣ್ಣಕಟ್ಟಿ ಬದ್ರಿ ದೇವಸ್ಥಾನದ ಬಳಿ ಶ್ವಾನ ತಪ್ಪಿ ತಮಿಳುನಾಡಿನ ತಂಡದ ಜೊತೆಗೆ ಸೇರಿದೆ. ಹಲವು ದಿನಗಳು ಶ್ವಾನ ಕಾಣದಿದ್ದಾಗ ಬಂಟ್ವಾಳದ ತಂಡದ ವೃತಧಾರಿಗಳು ಶ್ವಾನ ತಪ್ಪಿಸಿ ಹೋಗಿರಬಹುದು ಎಂದು ಭಾವಿಸಿ ಪಾದಯಾತ್ರೆ ಮುಂದುವರಿಸಿದ್ದಾರೆ.

ಆದರೆ ತಂಡದಿಂದ ತಪ್ಪಿಸಿಕೊಂಡ ಶ್ವಾನಕ್ಕೆ ಇದು ಬೇರೆ ತಂಡ ಅಂತಾ ಅರಿವಾಗಿ ಈ ತಂಡವನ್ನು ಹುಡುಕಿಕೊಂಡು ಬಂದಿದೆ. ಕೆಲವು ದಿನಗಳ ಬಳಿಕ ಶ್ವಾನ ಈ ತಂಡದ ಜೊತೆ ಸೇರಿ ಪಾದಯಾತ್ರೆ ಮುಂದುವರೆಸಿದೆ. ಜನವರಿ 3ರಂದು ಅಯ್ಯಪ್ಪ ವೃತಧಾರಿಗಳು ಪಂಪಾವನ್ನು ತಲುಪಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳಿದ್ದಾರೆ.

ತಂಡದ ಚೇತನ್ ಗುರುಸ್ವಾಮಿ ಶ್ವಾನಕ್ಕೆ 'ಮಲ್ಲಿ' ಅಂತಾ ಅಂತಾ ಹೆಸರಿಟ್ಟಿದ್ದಾರೆ. 'ಮಲ್ಲಿ' ಎಂದರೆ ಶಬರಿಮಲೆಗೆ ಬರುವ ಮಹಿಳಾ ವೃತ್ತಧಾರಿಗಳನ್ನು ಮಾಳಿಗೆಪುರತ್ತಮ್ಮ ಅಂತಾ ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಶ್ವಾನಕ್ಕೆ ಮಲ್ಲಿ ಅಂತಾ‌ ಹೆಸರನ್ನು ಇಡಲಾಗಿದೆ.

ಈ ಶ್ವಾನವನ್ನು ಊರಿಗೆ ಕರೆ ತರಲು ಬಂಟ್ವಾಳದ ತಂಡ ನಿರ್ಧರಿಸಿದೆ. ಮಲ್ಲಿಯನ್ನು ಹೊಟೇಲ್‌ನಲ್ಲಿ ಕಟ್ಟಿ ಹಾಕಿ ಶ್ವಾನವನ್ನು ಜತನ ದಿಂದ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪಾದಯಾತ್ರೆಯಲ್ಲಿ ಜೊತೆಯಾದ ಮಲ್ಲಿ ತಂಡದ‌ ಜೊತೆ ಬಂಟ್ವಾಳಕ್ಕೆ ಬರುತ್ತಿದ್ದು, ವೃತಧಾರಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಮಲ್ಲಿ ಮತ್ತು ಬಂಟ್ವಾಳದ ವೃತಧಾರಿಗಳು ಪಾದಯಾತ್ರೆ ಮಾಡುತ್ತಿರುವ ಫೋಟೋ ಕೇರಳದ ಫೋಟೋಗ್ರಾಫರ್ ಒಬ್ಬರು ಅದ್ಭುತವಾಗಿ ಸೆರೆ ಹಿಡಿದಿದ್ದು, ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೃತಧಾರಿಗಳ ಜೊತೆ ಹೆಜ್ಜೆ ಹಾಕುತ್ತಿದ್ದ ಶ್ವಾನದ ನಂಬಿಕೆ, ಸರ್ವಸಂಗ ಪರಿತ್ಯಾಗಿಯ ದರ್ಶನಕ್ಕೆ ತೆರಳುತ್ತಿದ್ದ ವೃತಧಾರಿಗಳ ಮುಖದಲ್ಲಿದ್ದ ತೇಜಸ್ಸು ಎಲ್ಲವೂ ಅದ್ಭುತವಾಗಿ ಸೆರೆಯಾಗಿತ್ತು.

English summary
A stray dog has been following a team of Ayyappa devotees of Bantwal, Dakshina Kannada. Devotees began their yatra on devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X