ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಅವಧಿಗೂ ಮುನ್ನ ಫಲ ನೀಡಿದ ಮರಗಳು, ತಜ್ಞರ ಅಭಿಪ್ರಾಯವೇನು?

|
Google Oneindia Kannada News

ಮಂಗಳೂರು, ಡಿಸೆಂಬರ್ 07: "ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು..." ಎಂಬ ಹಾಡನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಈಗ ಕರಾವಳಿಯಲ್ಲಿ ಮಾವಿನ ಮರ ಫಲ ನೀಡಲು ವಸಂತ ಕಾಲದ ತನಕ ಕಾಯಬೇಕಾಗಿಲ್ಲ. ಹೌದು, ಮಂಗಳೂರಿನಲ್ಲಿ ಈಗಾಗಲೇ ಹೂ ಅರಳಿದೆ. ಮೊಗ್ಗು ಕಾಯಿಯಾಗಿದೆ. ಇದಕ್ಕೆಲ್ಲಾ ಪ್ರಾಕೃತಿಕ ಅಸಮತೋಲನ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಘಟ್ಟ ಹಾಗೂ ಕರಾವಳಿಯಲ್ಲಿ ಡಿಸೆಂಬರ್ ಆರಂಭದಲ್ಲೇ ಮರಗಳು ಫಲ ನೀಡಲು ಆರಂಭಿಸಿವೆ. ಏಪ್ರಿಲ್ ನಲ್ಲಿ ಅರಳಬೇಕಾದ ಹೂವುಗಳು ಈಗಲೇ ಅರಳಿ ನಿಂತಿವೆ. ಈ ಪೃಕೃತಿಯ ಅಸಮತೋಲನ ಮುಂದೆ ನಡೆಯಲಿರುವ ಗಂಡಾಂತರದ ಮುನ್ಸೂಚನೆಯಾ? ಅನ್ನುವ ಅನುಮಾನ ಜನರನ್ನು ಕಾಡತೊಡಗಿದೆ.

ಪ್ರವಾಹ ಸೃಷ್ಟಿಸಿದ್ದ ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿಪ್ರವಾಹ ಸೃಷ್ಟಿಸಿದ್ದ ಕರಾವಳಿ ನದಿಗಳು ಬತ್ತುತ್ತಿರುವುದಕ್ಕೆ ತಜ್ಞರು ಕೊಟ್ಟ ಉತ್ತರ ನೋಡಿ

ಏಪ್ರಿಲ್ ತಿಂಗಳಲ್ಲಿ ಅರಳಬೇಕಾದ ಯೆಲ್ಲೊ ಕಾಟನ್ ಹೂವು ಮಂಗಳೂರಿನಲ್ಲಿ ಈಗಲೇ ಅರಳಿವೆ. ಮಾವಿನ ಮರದಲ್ಲಿ ಮಿಡಿ ಮಾವಿನಕಾಯಿ ಬಿಟ್ಟಿದೆ. ಮಾರ್ಚ್, ಏಪ್ರಿಲ್ ನಲ್ಲಿ ಕಾಣಸಿಗಬೇಕಾಗಿದ್ದ ಈ ದೃಶ್ಯಗಳು ಕರಾವಳಿಯಲ್ಲಿ ಈ ಬಾರಿ ಮಾತ್ರ ಡಿಸೆಂಬರ್ ಆರಂಭದಲ್ಲೇ ಕಾಣಸಿಗುತ್ತಿವೆ.

ಮಾರ್ಚ್ ಏಪ್ರಿಲ್ ನಲ್ಲಿ ರಸ್ತೆ ಬದಿಯ ಮರಗಳಲ್ಲಿ ಚಂದವಾಗಿ ಕಾಣುತ್ತಿದ್ದ ಯೆಲ್ಲೋ ಕಾಟನ್ ಹೂವುಗಳು ಈ ಬಾರಿ ಅತ್ಯಂತ ಬೇಗವಾಗಿ ಅರಳಿ ಉದುರಿ ಹೋಗಿದೆ. ಮುಂದೆ ಓದಿ...

 ಫಲ ನೀಡತೊಡಗಿದ ಮರಗಳು

ಫಲ ನೀಡತೊಡಗಿದ ಮರಗಳು

ಮಾರ್ಚ್ ತಿಂಗಳಲ್ಲಿ ಕಾಯಿ ಕೊಡಬೇಕಾಗಿದ್ದ ಮಾವಿನ ಮರಗಳು ಈಗಾಗಲೇ ಹೂಬಿಟ್ಟು ಫಲ ನೀಡತೊಡಗಿವೆ. ಹವಾಮಾನ ವೈಪರೀತ್ಯದಿಂದಾಗಿ ಈ ಬದಲಾವಣೆ ಆಗುತ್ತಿದೆಯಾದರೂ ಇಷ್ಟು ವೇಗದ ಬದಲಾವಣೆ ಹಿಂದೆ ಭಾರೀ ಪ್ರಾಕೃತಿಕ ಅಸಮತೋಲನದ ಎಚ್ಚರಿಕೆದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

 ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ! ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!

 ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆ

ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆ

ಹವಾಮಾನ ವೈಪರೀತ್ಯದಿಂದ ಈ ಘಟನೆಗಳು ಸಂಭವಿಸುತ್ತಿವೆಯಾದರೂ ಈ ಬಾರಿ ಮಳೆಗಾಲದ ಅವಧಿ ಕಡಿಮೆಯಾಗಿ ಶಾಶ್ವತ ಜಲ ಸಮಸ್ಯೆಗೆ ತುತ್ತಾಗುವ ಹಾಗೂ ಭಾರೀ ಪ್ರಮಾಣದ ಭೂಕುಸಿತ, ಜಲ ಸ್ಫೋಟಗಳನ್ನು ಕಂಡಿದ್ದ ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳು ಬರಗಾಲಕ್ಕೆ ತುತ್ತಾಗುವ ಎಚ್ಚರಿಕೆಯನ್ನು ಪರಿಸರವಾದಿಗಳು ನೀಡುತ್ತಿದ್ದಾರೆ.

 ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆ ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ 14 ತಾಲ್ಲೂಕುಗಳ ಸೇರ್ಪಡೆ: ಶತಕ ಮುಟ್ಟಿದ ಸಂಖ್ಯೆ

 ಆಶ್ಚರ್ಯಕರ ರೀತಿ ಬದಲಾವಣೆ

ಆಶ್ಚರ್ಯಕರ ರೀತಿ ಬದಲಾವಣೆ

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಹೊಳೆ-ನದಿಗಳು ಬತ್ತಿ ಹೋಗುತ್ತಿದ್ದು, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಆಶ್ಚರ್ಯಕರ ರೀತಿ ಬದಲಾವಣೆಯಾಗುತ್ತಿದೆ. ಬಿರು ಬೇಸಿಗೆಯಲ್ಲಿ ನದಿಗಳು ಬರಡಾಗುವ ಸಾಧ್ಯತೆಗಳಿವೆ.

 ಜಲ ಮೂಲಗಳು ಬತ್ತಿ ಹೋಗಿವೆ

ಜಲ ಮೂಲಗಳು ಬತ್ತಿ ಹೋಗಿವೆ

ಈಗಾಗಲೇ ಜಲಪಾತಗಳು, ಜಲ ಮೂಲಗಳು ಬತ್ತಿ ಹೋಗಿದ್ದು, ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶ ಒಣಗಿ ಹೋಗಿದೆ. ಶೀಘ್ರದಲ್ಲೇ ಕಾಡ್ಗಿಚ್ಚು ಭೂತ ಪಶ್ಚಿಮ ಘಟ್ಟವನ್ನು ಅಪೋಶನ ತೆಗೆದುಕೊಳ್ಳಬಹುದು ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

English summary
Influence of climate shift is the reason for early flowering and fruiting in western ghat and coastal districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X