ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಹುಬಲಿಯ ಮಹಾಮಸ್ತಕಾಭಿಷೇಕ ಪೂರ್ವಭಾವಿ ಚತುರ್ವಿಂಶತಿ ತೀರ್ಥಂಕರರ ಅಷ್ಟವಿಧಾರ್ಚನೆ

|
Google Oneindia Kannada News

ಮಂಗಳೂರು, ಫೆಬ್ರವರಿ 05: ಧರ್ಮಸ್ಥಳದಲ್ಲಿ ಭಗವಾನ್‌ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ದಿನಗಣನೆ ಆರಂಭವಾಗಿದೆ. ಇದೇ ಫೆಬ್ರವರಿ 9ರಿಂದ 18 ರವರೆಗೆ ನಡೆಯಲಿರುವ ಭಗವಾನ್‌ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಚತುರ್ವಿಂಶತಿ ತೀರ್ಥಂಕರರ ಅಷ್ಟವಿಧಾರ್ಚನೆ ನಡೆಯಿತು.

ಫೆ.8ರಿಂದ ಬಾಹುಬಲಿಗೆ 4ನೇ ಮಹಾ ಮಸ್ತಕಾಭಿಷೇಕ: ರತ್ನಗಿರಿ ಬೆಟ್ಟದಲ್ಲಿ ಭರ್ಜರಿ ಸಿದ್ಧತೆಫೆ.8ರಿಂದ ಬಾಹುಬಲಿಗೆ 4ನೇ ಮಹಾ ಮಸ್ತಕಾಭಿಷೇಕ: ರತ್ನಗಿರಿ ಬೆಟ್ಟದಲ್ಲಿ ಭರ್ಜರಿ ಸಿದ್ಧತೆ

ಅಷ್ಟವಿಧಾರ್ಚನೆ ವಿಧಿವಿಧಾನ ಸಂದರ್ಭದಲ್ಲಿ ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತಸಾಗರ ಮುನಿಮಹಾರಾಜರು, ಆಚಾರ್ಯ ಸಿದ್ಧಸೇನ ಮುನಿಮಹಾರಾಜರು, ಮುನಿಸಂಘದವರು ಹಾಗೂ ಮಾತಾಜಿ ಯವರು ಉಪಸ್ಥಿತರಿದ್ದರು.

stage set for Dahrmasthala Bahubali Mahamasthakabhisheka

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್‌, ಹರ್ಷೇಂದ್ರ ಕುಮಾರ್‌, ಶ್ರದ್ಧಾ ಅಮಿತ್‌, ಸೋನಿಯಾ ವರ್ಮ ಮತ್ತು ಸ್ಥಳೀಯ ಶ್ರಾವಕಿಯರು ಭಾಗವಹಿಸಿದ್ದರು.

 ಧರ್ಮಸ್ಥಳದ ಬಾಹುಬಲಿಗೆ ಫೆ.9ರಿಂದ ಮಹಾಮಸ್ತಕಾಭಿಷೇಕ ಧರ್ಮಸ್ಥಳದ ಬಾಹುಬಲಿಗೆ ಫೆ.9ರಿಂದ ಮಹಾಮಸ್ತಕಾಭಿಷೇಕ

ಇಂದು ಮಂಗಳವಾರ ಮುಂಜಾನೆ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಜ್ರ ಪಂಜರ ಆರಾಧನೆ ನಡೆಯಲಿದೆ. ಅದರಂತೆ ನಾಳೆ ಫೆಬ್ರವರಿ 6 ರಂದು ಗಣಧರ ವಲಯ ಆರಾಧನೆ ನಡೆಯಲಿದೆ.

stage set for Dahrmasthala Bahubali Mahamasthakabhisheka

ಭಗವಾನ್‌ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಈಗಾಗಲೇ ಆಚಾರ್ಯ ಶ್ರೀ ಪುಷ್ಪದಂತ ಸಾಗರ ಮುನಿ ಮಹಾರಾಜರು ಸೇರದಂತೆ ಮುನಿ ವೃಂದ ಧರ್ಮಸ್ಥಳದಲ್ಲಿ ಮಸ್ತಕಾಭಿಷೇಕದ ಧಾರ್ಮಿಕ ವಿಧಿವಿಧಾನ ಆರಂಭಿಸಿದ್ದಾರೆ.
ಮಹಾಮಸ್ತಕಾಭಿಷೇಕದ ತಯಾರಿ ಭರದಿಂದ ಸಾಗಿದ್ದು, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಪೂರ್ವ ತಯಾರಿ ಕಾಮಗಾರಿ ನಡೆಸಲಾಗುತ್ತಿದೆ.

English summary
Stage set for Dahrmasthala Bahubali Mahamasthakabhisheka on February 09 to 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X