ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆಬ್ರವರಿ 7ರಿಂದ ಮಂಗಳೂರಿನಲ್ಲಿ ಅಲೋಶಿಯನ್ ಫೆಸ್ಟ್

|
Google Oneindia Kannada News

ಮಂಗಳೂರು, ಫೆಬ್ರವರಿ 05: ಮಂಗಳೂರಿನ ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇದೇ ಬರುವ ಫೆಬ್ರವರಿ 7ರಿಂದ 9ರವರೆಗೆ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ 'ಅಲೋಶಿಯನ್ ಫೆಸ್ಟ್ 2019' ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಕಲಾ ವಿಭಾಗದ ಆರ್ಟ್‌ಬೀಟ್, ವಾಣಿಜ್ಯ ವಿಭಾಗದ ಆಕ್ಮೆಘಿ, ವ್ಯವಹಾರ ನಿರ್ವಹಣಾ ವಿಭಾಗದ ಸ್ಪಿನ್ ಔಟ್, ವಿಜ್ಞಾನ ವಿಭಾಗದ ಇಂಪ್ರಿಟ್ಸ್ ಘಿ ಕಂಪ್ಯೂಟರ್ ಸೈನ್ಸ್ ವಿಭಾಗದ ಕಾಂಪೋಸಿಟ್ ಎಂಬ ಪ್ರತ್ಯೇಕ ಉತ್ಸವವನ್ನು ವಿವಿಧ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದೆ. ಜೊತೆಗೆ ಸಾಂಸ್ಕೃತಿಕ ಉತ್ಸವ 'ಅಸ್ತಿತ್ವ', ಆಟೋಟ ಉತ್ಸವ 'ಅಲೋಶ್ಯಾಡ್' ನಡೆಯಲಿದೆ.

ಕರಾವಳಿ ಸಂಸ್ಕೃತಿ, ಕಲೆ ಪರಿಚಯಿಸುವ ನಮ್ಮೂರ ಹಬ್ಬಕ್ಕೆ ಬನ್ನಿಕರಾವಳಿ ಸಂಸ್ಕೃತಿ, ಕಲೆ ಪರಿಚಯಿಸುವ ನಮ್ಮೂರ ಹಬ್ಬಕ್ಕೆ ಬನ್ನಿ

ಫೆಬ್ರವರಿ 7ರಂದು ಚಲನಚಿತ್ರ ತಾರೆ ಎಸ್ತೆರ್ ನೊರೊನ್ಹಾ ಫೆಸ್ಟ್ ಉದ್ಘಾಟಿಸಲಿದ್ದಾರೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್, ಧರ್ಮಗುರು ಡಯನೀಶಿಯಸ್ ವಾಜ್ ಅಧ್ಯಕ್ಷತೆ ವಹಿಸುವರು.

St Aloysian college organised national level Aloysius fest 2019

ಯುಪಿಸಿಎಲ್ ಪ್ರಾಜೆಕ್ಟ್ ಡೆವಲೆಪ್ ಮೆಂಟ್ ಮತ್ತು ಕಾರ್ಪೋರೇಟ್ ವ್ಯವಹಾರಗಳ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕಿಶೋರ್ ಆಳ್ವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 9ರಂದು ಅಲೋಶಿಯಸ್ ಫೆಸ್ಟ್ ನ ಸಮಾರೋಪ ಸಮಾರಂಭ ನಡೆಯಲಿದೆ.

English summary
St Aloysian college of Mangaluru organised national level Aloysius fest 2019 on February 07 to 09.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X