ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್

|
Google Oneindia Kannada News

ಮಂಗಳೂರು, ಏಪ್ರಿಲ್ 26 : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ದುರಂತದ ಬೆನ್ನಲ್ಲೇ ದೇಶದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಉಗ್ರರು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಭಾರತ ಪ್ರವೇಶಿಸುವ ಆತಂಕ ಇರುವ ಹಿನ್ನಲೆಯಲ್ಲಿ ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಭಾರತೀಯ ನೌಕಾ ಪಡೆ, ತಟರಕ್ಷಣಾ ಪಡೆಯ ಹಡಗುಗಳು ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿ ದಕ್ಷಿಣ ಭಾರತ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಕೊನೆ ಕ್ಷಣದ ನಿರ್ಧಾರ, ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಪಾರುಕೊನೆ ಕ್ಷಣದ ನಿರ್ಧಾರ, ಶ್ರೀಲಂಕಾದಲ್ಲಿ ಮಂಗಳೂರಿನ ದಂಪತಿ ಪಾರು

ರಾಜ್ಯದ ಗಡಿಭಾಗಗಳು, ವಿಮಾನ ನಿಲ್ದಾಣಗಳು, ರಾಯಭಾರಿ ಕಚೇರಿಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು. ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಅಪರಿಚಿತರ ಮೇಲೆ ಕಣ್ಣಿಟ್ಟಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ.

ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರು ಮೂಲದ ಮಹಿಳೆ ಸಾವುಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರು ಮೂಲದ ಮಹಿಳೆ ಸಾವು

Managluru

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕಡಲ ತಡಿಯ ಮಂಗಳೂರಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಭದ್ರತೆಯ ಬಗ್ಗೆ ಚರ್ಚೆ ನಡೆಸಲಾಗಿದೆ.

ನಗುತ್ತಾ ದುಬೈ ವಿಮಾನ ಹತ್ತಿದ ಪತಿ ಇಳಿದ ತಕ್ಷಣ ಕೇಳಿದ್ದು ಪತ್ನಿ ಸಾವಿನ ಸುದ್ದಿನಗುತ್ತಾ ದುಬೈ ವಿಮಾನ ಹತ್ತಿದ ಪತಿ ಇಳಿದ ತಕ್ಷಣ ಕೇಳಿದ್ದು ಪತ್ನಿ ಸಾವಿನ ಸುದ್ದಿ

ನಗರದ ಎಂಆರ್ ಪಿಎಲ್ ತೈಲಾಗಾರ, ಎನ್ಎಂಪಿಟಿ ಬಂದರು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ , ನಗರದ ಪ್ರಮುಖ ಮಾಲ್, ಇನ್ಫೋಸಿಸ್ ಮತ್ತು ನಗರದ ಧಾರ್ಮಿಕ ಕೇಂದ್ರಗಳ ಪ್ರಮುಖರ ಜೊತೆ ಸಭೆ ನಡೆಸಿದ ಆಯುಕ್ತರು ಹಲವು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಸಿಸಿಟಿವಿ ಇಲ್ಲದ ಕೇಂದ್ರಗಳಲ್ಲಿ ಸಿಸಿ ಟಿವಿ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಭದ್ರತಾ ಸಿಬ್ಭಂದಿ ನೇಮಕಕ್ಕೆ ಮುನ್ನ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ಸೂಚನೆ ನೀಡಲಾಗಿದ್ದು, ಆಯಕಟ್ಟಿನ ಜಾಗಗಳಲ್ಲಿ ಚುನಾವಣೆ ನಿಮಿತ್ತ ಹಾಕಿರುವ ಚೆಕ್ ಪೋಸ್ಟ್ ಗಳನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ.

English summary
After Sri Lanka suicide bombing incident high alert announced in coastal states. Security increased in MRPL, NMPT, Mall's and religious places of Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X