ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ದೆಹಲಿ ನಡುವೆ ಆಗಸ್ಟ್ 4ರಿಂದ ನೇರ ವಿಮಾನ ಸೇವೆ

|
Google Oneindia Kannada News

ಮಂಗಳೂರು, ಜುಲೈ 20: ಕೆಲವು ತಿಂಗಳಿನಿಂದ ಸ್ಥಗಿತವಾಗಿದ್ದ ಮಂಗಳೂರು-ನವದೆಹಲಿ ನೇರ ವಿಮಾನ ಸೇವೆಗೆ ಮರುಜೀವ ಸಿಕ್ಕಿದೆ. ಸ್ಪೈಸ್ ‌ಜೆಟ್‌ ವಿಮಾನಯಾನ ಸಂಸ್ಥೆ ಮಂಗಳೂರಿನಿಂದ ನವದೆಹಲಿಗೆ ಇದೇ ಆಗಸ್ಟ್ 4ರಿಂದ ನೇರ ವಿಮಾನ ಸೇವೆ ಆರಂಭಿಸಲಿದೆ.

 ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಜಾರಿದ ವಿಮಾನ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಜಾರಿದ ವಿಮಾನ

ಈ ಹಿಂದೆ ರಾಜಧಾನಿ ನವದೆಹಲಿಗೆ ಮಂಗಳೂರಿನಿಂದ ಒಂದು ಜೆಟ್‌ ಏರ್‌ವೇಸ್ ಸಂಚರಿಸುತ್ತಿತ್ತು. ಕೆಲವು ತಿಂಗಳಿನಿಂದ ಆ ವಿಮಾನ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಮಂಗಳೂರಿನಿಂದ ದೆಹಲಿಗೆ ನೇರ ವಿಮಾನವೇ ಇರಲಿಲ್ಲ.

SpiceJet will start direct flights from Mangalore to New Delhi

ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 4ರಿಂದ ಪ್ರತಿ ದಿನ ಬೆಳಗ್ಗೆ 6:15ಕ್ಕೆ ಮಂಗಳೂರಿನಿಂದ ಹೊರಡುವ ಈ ವಿಮಾನ ಬೆಳಗ್ಗೆ 8:55ಕ್ಕೆ ನವದೆಹಲಿ ತಲುಪಲಿದೆ. ಪ್ರತಿ ದಿನ ರಾತ್ರಿ 8:30ಕ್ಕೆ ದೆಹಲಿಯಿಂದ ಹೊರಡುವ ವಿಮಾನ ರಾತ್ರಿ 11:15ಕ್ಕೆ ಮಂಗಳೂರು ತಲುಪಲಿದೆ. ದೆಹಲಿಗೆ ನೇರ ವಿಮಾನ ಸೇವೆ ಮರು ಆರಂಭಿಸುವ ಕುರಿತು ಸಂಸದ ನಳಿನ್ ಕುಮಾರ್‌ ಕಟೀಲ್ ಇತ್ತೀಚೆಗೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿದ್ದರು.

English summary
Mangalore-New Delhi direct flight service resumed after a few months. SpiceJet will start direct flights from Mangalore to New Delhi from August 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X