• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಮಗ ರಾಕೇಶ್ ಆರೋಗ್ಯ ಚೇತರಿಕೆಗಾಗಿ ದರ್ಗಾದಲ್ಲಿ ಪ್ರಾರ್ಥನೆ

By ನಮ್ಮ ಪ್ರತಿನಿಧಿ
|

ಮಂಗಳೂರು, ಜುಲೈ 28: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮಗ ರಾಕೇಶ್ ಅವರು ಖಾಯಿಲೆಗೆ ತುತ್ತಾಗಿದ್ದು ಶೀಘ್ರ ಗುಣಮುಖರಾಗಲಿ ಎಂದು ಇಲ್ಲಿನ ಸಯ್ಯದ್ ಮದನಿ ದರ್ಗಾ ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸಮಿತಿಯ ವತಿಯಿಂದ ವಿಶೇಷ 'ದುವಾ' ಪ್ರಾರ್ಥನೆಯನ್ನು ಸಯ್ಯದ್ ಮದನಿ ಅರೇಬಿಕ್ ಕಾಲೇಜಿನ ಫ್ರೊಫಸರ್ ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ರವರು ಸಯ್ಯದ್ ಮದನಿ ದರ್ಗಾ ದಲ್ಲಿ ನೆರವೇರಿಸಿದರು.[ರಾಕೇಶ್ ಅಸ್ವಸ್ಥ, ಕರ್ನಾಟಕ 'ಸಿಎಂ' ಟ್ವೀಟ್ ಬಗ್ಗೆ ಆಕ್ಷೇಪ]

ಅತಿಬೇಗನೆ ರಾಕೇಶ್ ಗುಣಮುಖವಾಗಲ್ಲಿ ಎಂದು ದರ್ಗಾದಲ್ಲಿ ಪ್ರಾಥನೆ ಸಲಿಸಲಾಗಿದ್ದೆ ಈ ಸಂದರ್ಭದಲ್ಲಿ ಸಯ್ಯದ್ ಮದನಿ ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಹೇಳಿದರು. [ಮಗನನ್ನು ನೋಡಲು ಬೆಲ್ಜಿಯಂಗೆ ಹೊರಟ ಸಿದ್ದರಾಮಯ್ಯ]

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯು.ಕೆ. ಮೋನು ಕೋಟೆಪುರ, ಪ್ರಧಾನ ಕಾರ್ಯದರ್ಶಿ ಹಾಜಿ ತ್ವಾಹ ಮೊಹಮ್ಮದ್ ಜತೆ ಕಾರ್ಯದರ್ಶಿ ನೌಶಾದ್ ಮೇಲಂಗಡಿ, ಸದಸ್ಯರಾದ ಆಸಿಫ್ ಅಬ್ದುಲ್ಲ, ಹಮ್ಮಬ್ಬ ಕೋಟೆಪುರ, ಮಾಜಿ ಪುರಸಭಾ ಅಧ್ಯಕ್ಷ ಬಾಝಿಲ್ ಡಿಸೋಜ, ಯು.ಎ ಇಸ್ಮಾಯಿಲ್, ನಗರಸಭಾಸದಸ್ಯ ಮುಸ್ತಫಾ ಅಬ್ದುಲ್ಲಾ ಉಪಸ್ಥಿತರಿದ್ದರು.

ಬ್ರೆಲ್ಜಿಯಂನ ಬ್ರುಸೆಲ್ಸ್ ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ರಾಕೇಶ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥ ಮಗನನ್ನು ನೋಡಲು ಬ್ರುಸೆಲ್ಸ್ ಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ. ರಾಕೇಶ್ ಅವರಿಗೆ ಪ್ಯಾಂಕ್ರಿಯಾಟೈಟಿಸ್ ತೊಂದರೆ ಹೆಚ್ಚಾಗಿ ಅಸ್ವಸ್ಥರಾಗಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
Special prayers offered for CM Siddaramaiah's son Rakesh at Dargah Shariff of Hazrat Sayyid mohammed Shareef Madani, Ullal, Mangaluru. Rakesh Siddaramaiah currently getting treatment in Belgium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X