ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌಜನ್ಯಾ ಪ್ರಕರಣ: ಹೆಗ್ಗಡೆ ಕುಟುಂಬದ ಅರ್ಜಿ ವಜಾ

ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ನಿಶ್ಚಲ್ ಕುಮಾರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಎಪ್ರಿಲ್ 1: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮ ಹರ್ಷೇಂದ್ರ ಕುಮಾರ್ ರ ಮಗ ನಿಶ್ಚಲಕುಮಾರ್ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ಕೋರ್ಟು ವಜಾಗೊಳಿಸಿದೆ.

2012, ಅಕ್ಟೋಬರ್ 9 ರಂದು, ಧರ್ಮಸ್ಥಳದಿಂದ ಎಂಟು ಕಿ.ಮೀ. ದೂರದ ನಿರ್ಜನ ಪ್ರದೇಶವೊಂದರಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೌಜನ್ಯ ಕುಟುಂಬಸ್ಥರು ಮತ್ತು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಸೋಮನಾಥ ನಾಯಕ್ ಮೇಲೆ ನಿಶ್ಚಲ್ ಕುಮಾರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.[ಸೌಜನ್ಯ ಪ್ರಕರಣ: ಹೆಗ್ಗಡೆ ಪರ -ವಿರೋಧ ಪ್ರತಿಭಟನೆ]

Soujanya murder case: Nishchal Kumar's defamation appeal rejected

ದೂರುದಾರ ನಿಶ್ಚಲಕುಮಾರ್ ತಾವು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ನ್ಯಾಯಾಲಯದಲ್ಲಿ ವಿಚಾರಣೆಗೆ ನಿರಂತರವಾಗಿ ಗೈರಾಗಿರುವುದರಿಂದ ನ್ಯಾಯಾಲಯವು ಒಂದು ಸಲ 500 ರೂ. ಮತ್ತು ಇನ್ನೊಂದು ಸಲ 2000 ರೂ. ಪ್ರತಿವಾದಿಯ ವೆಚ್ಚವನ್ನು ಪಾವತಿಸುವಂತೆ ಆದೇಶಿಸಿತ್ತು.[ಸೌಜನ್ಯ ಹತ್ಯೆ ಆರೋಪಿಗಳಿಗೆ ಶಿಕ್ಷೆ ಯಾವಾಗ?]

ಆದಾಗ್ಯೂ ನಿಶ್ಚಲ ಕುಮಾರ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಅವರ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿದೆ.

English summary
Bengaluru City court has rejected defamation appeal filed by Veerendra Heggade's family member Nishchal Kumar, in relation to 2012 Soujanya rape and murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X