ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮ್ಯೂಸ್ ಮೆಂಟ್ ಪಾರ್ಕ್ ನಿಂದ ಬದುಕು ಕಟ್ಟಿಕೊಂಡವರು

By ಮೇಧಾ ರಾಮಕುಂಜ
|
Google Oneindia Kannada News

ಧರ್ಮಸ್ಥಳ, ನವೆಂಬರ್ 17: ಭಾರೀ ಪ್ರಮಾಣದ ಜನಸ್ತೋಮ ಅಲ್ಲಿ ಸೇರಿತ್ತು. ಎತ್ತ ನೋಡಿದರೂ ಜನಸಾಗರ. ನೋಡ ನೋಡುತ್ತಿದ್ದಂತೆಯೇ ಒಂದು ಬಂಡಿ ತಿರುಗಲಾರಂಭಿಸಿತು. ನೂಕು ನುಗ್ಗಲಿನ ನಡುವೆ ಜನರು ನಾ ಮುಂದು ತಾ ಮುಂದು ಎಂದು ತಿರುಗಣಿ ಚಕ್ರಬಂಡಿಯ ಮೇಲೆ ಹತ್ತುವ ತವಕದಲ್ಲಿದ್ದರು...

ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ

ಈ ದೃಶ್ಯಕಂಡುಬಂದದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದಲ್ಲಿ ನಿರ್ಮಾಣಗೊಂಡಿರುವ ಅಮ್ಯೂಸ್ ಮೆಂಟ್ ಪಾರ್ಕ್‌ನಲ್ಲಿ. ಅಮ್ಯೂಸ್ ಮೆಂಟ್ ಅಂದಾಗ ಎಲ್ಲರ ಮನಸ್ಸಲ್ಲಿ ಕುತೂಹಲ ಮೂಡುವದು ಸಹಜ.

Some workers started their career from the Dharmasthala Amusement park.

ಆದರೆ, ಅದರ ಹಿಂದೆ ಇರುವ ಕೈಗಳ ಸಂಖ್ಯೆ ಅದೆಷ್ಟೋ. ಹಗಲು ರಾತ್ರಿ ಎನ್ನದೆ ನಿದ್ದೆಕೆಟ್ಟು ಜನರ ಮನರಂಜಿಸುವ ಈ ಜನಬಂದಿದ್ದು ದೂರದ ಊರಿನಿಂದ. ಎಲ್ಲಿಂದಲೋ ಬಂದು ಪರ ಊರಿನ ಜಾತ್ರಾ ಮಹೋತ್ಸವಗಳಲ್ಲಿ ಪಾಲ್ಗೊಂಡು, ಜನರನ್ನು ತಮ್ಮೆಡೆಗೆ ಆಕರ್ಷಿಸುವುದು ಸುಲಭದ ಕೆಲಸವಲ್ಲ. ಈ ಸಾಹಸವನ್ನು ಮಾಡುತ್ತಿರುವುದು ಅಮ್ಯೂಸ್ ಮೆಂಟ್ ತಂಡ.

ಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರುಧರ್ಮಸ್ಥಳ ದೀಪೋತ್ಸವದಲ್ಲಿ ಬರೋಡ ಬಲೂನಗಳದ್ದೇ ಕಾರುಬಾರು

ಪ್ರತೀ ವರ್ಷ ತಮ್ಮ ಹೊಟ್ಟೆಪಾಡಿಗಾಗಿ ಕಾರ್ಯನಿರ್ವಹಿಸುವ ಇವರ ಜೀವನ ವಿಧಾನ ಕಷ್ಟಕರ. ಒಂದು ವಾರದ ಹಿಂದೆ ಧರ್ಮಸ್ಥಳಕ್ಕೆ ಬಂದ ಇವರು ತಮಗೆ ನೀಡಿದ 8 ಎಕರೆ ವ್ಯಾಪ್ತಿಯ ಜಾಗದಲ್ಲಿ ಜೀವನದ ಬಂಡಿಯನ್ನುಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಟ್ ಹಾಗೂ ಬೋಲ್ಟ್ ಗಳ ಮೂಲಕ ಉಪಕರಣಗಳನ್ನು ಕಟ್ಟುವ ಇವರು, ಅವುಗಳ ಚಲಾವಣೆಗಾಗಿ ಡೀಸೆಲ್ ಬಳಸುತ್ತಾರೆ.

Some workers started their career from the Dharmasthala Amusement park.

ಮಹಾರಾಷ್ಟ್ರ, ಬಿಹಾರ, ಚಿತ್ರದುರ್ಗ, ಮೈಸೂರು, ಶಿರಸಿಯಿಂದ ಆಗಮಿಸಿರುವ ಈ ತಂಡದಲ್ಲಿ ಸುಮಾರು 80 ಜನರಿದ್ದಾರೆ. ತಮ್ಮಊರಿನಿಂದ ಉಪಕರಣಗಳನ್ನು ಧರ್ಮಸ್ಥಳಕ್ಕೆ ತರಲು 1 ಲಾರಿಗೆ ಸುಮಾರು 13ಸಾವಿರ ಬಾಡಿಗೆಯಿದೆ. ಅಮ್ಯೂಸ್ ಮೆಂಟ್ ಪಾರ್ಕ್‌ನ ಹಿಂದೆ ಬಿಡಾರ ಹೂಡಿರುವ ಇವರು ಅಲ್ಲಿಯೇ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.

'ಪಲ್ಲವಿ' ದನಿ ಕಂಡರಿಸಿದ ಕನ್ನಡದ ಭಾವಲೋಕ'ಪಲ್ಲವಿ' ದನಿ ಕಂಡರಿಸಿದ ಕನ್ನಡದ ಭಾವಲೋಕ

ಬದುಕಲು ಕಷ್ಟ. ಆದರೂ ಇದು ವಂಶಪಾರಂಪರ್ಯವಾಗಿ ಬಂದ ಕುಲಕಸುಬು ಎನ್ನುವ ಇವರಿಗೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಆಸಕ್ತಿಯಿದೆ. ಆದರೆ ಹಣದ ಕೊರತೆಯಿಂದಾಗಿ ಇದೇ ಕೆಲಸಕ್ಕೆ ಒಗ್ಗಿಕೊಂಡಿದ್ದಾರೆ. ಇವರಲ್ಲಿ ಪ್ರತೀ ವರ್ಷ ಧರ್ಮಸ್ಥಳಕ್ಕೆ ಆಗಮಿಸುವವರು. ಕಳೆದ ಬಾರಿ ಅಮ್ಯೂಸ್ ಮೆಂಟ್‌ಗೆ50 ರೂ.ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಆದರೆ ಈ ಬಾರಿ ಶುಲ್ಕವನ್ನು 70 ರೂ.ಗೆ ಏರಿಸಲಾಗಿದೆ.

Some workers started their career from the Dharmasthala Amusement park.

ಇದರಿಂದಾಗಿ ಅಲ್ಲಿಗೆ ಬರುವ ಜನರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಜೈಂಟ್ ವ್ಹೀಲ್, ಕ್ರಾಸ್ ವ್ಹೀಲ್, ಕೊಲಂಬಸ್, ಸಲಾಂಬು, ಬ್ರೇಕ್‌ಡಾನ್ಸ್, ಮರಣ ಬಾವಿ, ಬೌನ್ಸೀ, ಚಾಂದ್‌ತಾರಾ, ಮಹಾರಾಜಾ ಟ್ರೈನ್, ಕಮಾಂಡೋ, ಚಕ್ರಿ, ಟ್ರೈಗನ್, ಜಂಪಿಂಗ್ ಸೇರಿದಂತೆ ಹಲವಾರು ರೀತಿಯ ಮನೋರಂಜನಾತ್ಮಕ ಆಟಗಳನ್ನು ಇದು ಒಳಗೊಂಡಿದೆ

English summary
Dharmasthala celebrates every festival of all populous faiths in the town. A specail pooja is held at the premise during every festival to cherish the legend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X