ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಯ ಬೇಡ, ಬೆದ್ರಕಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು 'ಬೆಕ್ಕು ಹಾವು'

|
Google Oneindia Kannada News

Recommended Video

ದಕ್ಷಿಣ ಕನ್ನಡದ ಬೆದ್ರಕಾಡು ಪ್ರದೇಶದಲ್ಲಿ ವಿಚಿತ್ರ ಬಣ್ಣದ ಹಾವು ಪತ್ತೆ | Oneindia Kannada

ಮಂಗಳೂರು, ಅಕ್ಟೋಬರ್.30: ದಕ್ಷಿಣಕನ್ನಡ ಜಿಲ್ಲೆಯ ಬೆದ್ರಕಾಡು ಪ್ರದೇಶದಲ್ಲಿ ಪತ್ತೆಯಾಗಿದ್ದ ವಿಚಿತ್ರ ಬಣ್ಣದ ಹಾವಿನ ಮಾಹಿತಿ ಈಗ ತಿಳಿದುಬಂದಿದೆ. ನಿನ್ನೆ ಸೋಮವಾರ (ಅ.29) ಬೆಳ್ತಂಗಡಿ ತಾಲೂಕಿನ ಕಲ್ಮಂಜ ಎಂಬಲ್ಲಿ ಪತ್ತೆಯಾಗಿದ್ದ ಕಪ್ಪು ಬಿಳಿ ಪಟ್ಟೆಯ ವಿಚಿತ್ರ ಬಣ್ಣದ ಹಾವು ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಬೆಕ್ಕು ಹಾವು ಎಂದು ಉರಗ ತಜ್ಞರು ತಿಳಿಸಿದ್ದಾರೆ.

"ಭಯಪಡುವ ಅಗತ್ಯವಿಲ್ಲ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಈ ಅಪರೂಪದ ಹಾವು ವಿಷಕಾರಿಯಲ್ಲ. ಇದನ್ನು 'ಫೋರ್ಸ್ ಟೆನ್ಸ್ ಕ್ಯಾಟ್ ಸ್ನೆಕ್' ಅಥವಾ 'ಬೆಕ್ಕು ಹಾವು' ಎಂದು ಕರೆಯಲಾಗುತ್ತದೆ" ಎಂದು ಉರಗ ತಜ್ಞ ಗುರುರಾಜ್ ಸನಿಲ್ ತಿಳಿಸಿದ್ದಾರೆ.

ಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನ

ಈ ಹಾವುಗಳು ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕಂಡುಬರುತ್ತವೆ. ಈ ಹಿಂದೆ ಕಾರ್ಕಳ ತಾಲೂಕಿನ ಪಳ್ಳಿಗ್ರಾಮದಲ್ಲಿ ಈ ಬೆಕ್ಕು ಹಾವನ್ನು ಹಾವನ್ನು ರಕ್ಷಣೆ ಮಾಡಿದ್ದೆವು ಎಂಬ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ತುಳು ಭಾಷೆಯಲ್ಲಿ ಈ ಹಾವನ್ನು 'ಸಾರಿಬಳ' ಎಂದು ಕರೆಯುತ್ತಾರೆ. ಬೊಯಾಗ ಫ್ಲೋರ್ಸ್ ಟೆನಿ ಎಂಬುದು ಇದರ ವೈಜ್ಞಾನಿಕ ಹೆಸರು . ಇದರ ಕಣ್ಣು ಬೆಕ್ಕಿನ ಕಣ್ಣನ್ನು ಹೋಲುವ ಕಾರಣಕ್ಕೆ ಇದನ್ನು ಬೆಕ್ಕು ಹಾವು ಎಂದು ಕರೆಯಲಾಗುತ್ತದೆ. ಹಾವು ಕಂಡು ಬಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...

 ಜನರಲ್ಲಿ ಆತಂಕ

ಜನರಲ್ಲಿ ಆತಂಕ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಮವಾರ (ಅ.29) ಅಪರೂಪದ ವಿಚಿತ್ರ ಬಣ್ಣದ ಹಾವೊಂದು ಪತ್ತೆಯಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲ ಬುಸುಗುಡುತ್ತಿದ್ದ ಈ ಹಾವಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಂಭೀರ ಚರ್ಚೆಗಳು ಆರಂಭವಾಗಿದ್ದವು.

 ಕುತೂಹಲ ಮೂಡಿಸಿತ್ತು

ಕುತೂಹಲ ಮೂಡಿಸಿತ್ತು

ಈ ಹಾವು ನೋಡಲು ಭಾರೀ ವಿಷಪೂರಿತ ಕೊಲಂಬಿಯಾ ಕಿಂಗ್ ಸ್ನೇಕ್ ನಂತೆ ಕಾಣುತ್ತಿದ್ದರೂ ಅದರ ಬಣ್ಣ, ಆಕಾರ ವಿಚಿತ್ರವಾಗಿದ್ದ ಕಾರಣ ಜನರಲ್ಲಿ ಕುತೂಹಲ ಮೂಡಿಸಿತ್ತು. ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬೆದ್ರಕಾಡು ಪ್ರದೇಶದಲ್ಲಿ ಈ ಅಪರೂಪದ ಹಾವು ಪತ್ತೆಯಾಗಿತ್ತು.

 ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು? ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?

 ಆರು ಅಡಿ ಉದ್ದ

ಆರು ಅಡಿ ಉದ್ದ

ಕಲ್ಮಂಜ ನಿವಾಸಿ ಓಡಿಯಪ್ಪ ಗೌಡ ಎಂಬುವವರ ಮನೆಯಲ್ಲಿ ಬಿಳಿ ಹಾಗೂ ಕಪ್ಪು ಮೈಬಣ್ಣವನ್ನು ಹೊಂದಿರುವ ಆರು ಅಡಿ ಉದ್ದದ ಈ ಅಪರೂಪದ ಹಾವು ಕಂಡುಬಂದಿತ್ತು. ಅದನ್ನು ನೋಡಿ ಹೌಹಾರಿದ ಮನೆಯ ಮಂದಿ ಆತಂಕಗೊಂಡಿದ್ದರು.

 ಹಾವು ಹಿಡಿಯುವಲ್ಲಿ ಸಫಲ

ಹಾವು ಹಿಡಿಯುವಲ್ಲಿ ಸಫಲ

ವಿಷಕಾರಿಯಂತೆ ಕಂಡುಬಂದ ಈ ಹಾವು ಇಲ್ಲಿದ್ದರೆ ತೊಂದರೆ ಎಂದು ಮನಗಂಡ ಓಡಿಯಪ್ಪ ಗೌಡ ತಕ್ಷಣ ಸ್ಥಳೀಯ ಉರಗತಜ್ಞ ಲಿಂಗಪ್ಪ ಮಾಚಾರು ಅವರಿಗೆ ಕರೆ ಮಾಡಿದ್ದರು.

ಲಿಂಗಪ್ಪ ಮಾಚಾರ ಅತ್ಯಂತ ಚಾಕಚಕ್ಯತೆಯಿಂದ ಹಾವನ್ನು ಹಿಡಿಯುವಲ್ಲಿ ಸಫಲರಾಗಿದ್ದರು. ನಂತರ ಹಾವನ್ನು ಸುರಕ್ಷಿತವಾಗಿ ಮಂಗಳೂರಿನ ಪಿಲಿಕುಲ ನಿಸರ್ಗಧಾಮಕ್ಕೆ ನೀಡಿದ್ದರು.

 ಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ ಮಂಡೆಕೋಲು ಗ್ರಾ.ಪಂ. ಕಚೇರಿಗೆ ಬಂದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪ

English summary
Rare species of snake captured in Bedrakadu village in Belthangady is identified as Rare Cat Sanke
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X